ಐಟಂ ಹಾಡಿಗೆ ಹೆಜ್ಜೆ ಹಾಕಿದ 'ಬಿಗ್ ಬಾಸ್' ನಿವೇದಿತಾ ಗೌಡ.!
ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ತಮ್ಮ ಮುದ್ದಾದ ನಡುವಳಿಕೆಯಿಂದ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಖ್ಯಾತಿಗಳಿಸಿಕೊಂಡಿದ್ದ ನಿವೇದಿತಾ, ಬಿಗ್ ಮನೆಯಲ್ಲಿ ಹಾಡು ಹೇಳುವುದು, ಡ್ಯಾನ್ಸ್ ಮಾಡುವುದು ಎಲ್ಲರಿಂದಲೂ ಗಮನ ಸೆಳೆದಿದ್ದರು.
ಆದ್ರೀಗ, ನಿವೇದಿಗಾ ಗೌಡ ಅವರ ವಿಡಿಯೋವೊಂದು ವೈರಲ್ ಆಗಿದೆ. ಸೂಪರ್ ಹಿಟ್ ಐಟಂ ಹಾಡಿಗೆ ನಿವೇದಿತಾ ಗೌಡ ಹೆಜ್ಜೆ ಹಾಕಿರುವ ವಿಡಿಯೋ ಫೇಸ್ ಬುಕ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಹೌದು, ಬಾಲಿವುಡ್ ನಟಿ ಕತ್ರಿನಾ ಕೈಫ್ ಭರ್ಜರಿ ಸ್ಟೆಪ್ ಹಾಕಿದ್ದ 'ಚಿಕ್ನಿ ಚಮೇಲಿ' ಹಾಡಿಗೆ ಗೊಂಬೆ ನಿವೇದಿತಾ ಗೌಡ ಡ್ಯಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಕತ್ರಿನಾ ತೊಟ್ಟಿದ್ದ ಕಾಸ್ಟ್ಯೂಮ್ ಮಾದರಿಯಲ್ಲೇ ಡ್ರೆಸ್ ಮಾಡಿರುವ ನಿವೇದಿತಾ ಜಬರ್ ದಸ್ತ್ ಆಗಿ ಕುಣಿದಿದ್ದಾರೆ.

ಸುಮಾರು 4 ನಿಮಿಷದ ಹಾಡಿಗೆ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೈಲಾಂಟ್ ಆಗಿ ಕುಣಿಯುತ್ತಿದ್ದ ನಿವೇದಿತಾ, ಐಟಂ ಹಾಡಿಗೆ ಹೆಜ್ಜೆ ಹಾಕುವಷ್ಟು ಎನರ್ಜಿ ಇಟ್ಟಿದ್ದಾರೆ ಎಂಬುದು ಪ್ರೇಕ್ಷಕಷರಿಗೆ ಅಚ್ಚರಿ ಉಂಟುಮಾಡಿದೆ.


Click it and Unblock the Notifications











