For Quick Alerts
  ALLOW NOTIFICATIONS  
  For Daily Alerts

  'ಮಂಕು ಬಾಯ್' ಆದ ಬಿಗ್ ಬಾಸ್ ಓಟಿಟಿ ಕನ್ನಡದ ಸ್ಪರ್ಧಿ ರೂಪೇಶ್ ಶೆಟ್ಟಿ!

  |

  ಸದ್ಯ ಕನ್ನಡದಲ್ಲಿ ಬಿಗ್ ಬಾಸ್ ಓಟಿಟಿ ಹವಾ ಎಬ್ಬಿಸಿದೆ. ಇನ್ನೇನು ಕೊನೆಯ ಹಂತದಲ್ಲಿರುವಾಗಲೇ ಮೇನ್ ಸೀನ್ ಕೂಡ ಶುರುವಾಗುತ್ತಿದೆ. ಈ ಮಧ್ಯೆ ಪ್ರಮುಖ ಶೋಗೆ ಯಾರು ಹೋಗುತ್ತಾರೆ ಅನ್ನೋದೇ ಕುತೂಹಲವಿದೆ.

  ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲ ಸೀಸನ್‌ಗೆ ಎಂಟ್ರಿ ಕೊಟ್ಟಿದ್ದವರಲ್ಲಿ ಅನೇಕ ಸ್ಪರ್ಧಿ ಗಮನ ಸೆಳೆದಿದ್ದಾರೆ. ಅದರಲ್ಲಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಕೂಡ ಒಬ್ಬರು. ಡಿಜೆಯಾಗಿ ಕೆಲಸ ಮಾಡುವುದಕ್ಕೂ ಮುನ್ನ ನಾಯಕ ನಟನಾಗಿ ನಟಿಸಿದ್ದರು. ಅದುವೇ 'ಮಂಕು ಭಾಯ್ ಫಾಕ್ಸಿ ರಾಣಿ'.

  ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಭಿನ್ನ ಟೈಟಲ್‌ಗಳನ್ನು ಹೊತ್ತು ಸಿನಿಮಾಗಳು ಬರುತ್ತಿವೆ. ಈ ವಿಭಿನ್ನ ಟೈಟಲ್‌ಗಳಿಂದ ಸಿನಿಪ್ರಿಯರನ್ನು ಚಿತ್ರದತ್ತ ಆಕರ್ಷಿಸಿಸುವ ಟ್ರೆಂಡ್ ಶುರುವಾಗಿದೆ. ಈಗ ಅಂಥದೇ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದು 'ಮಂಕು ಭಾಯ್ ಫಾಕ್ಸಿ ರಾಣಿ'. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮೋತ್ಸಾಹಿಗಳ ತಂಡವೇ ಸೇರಿಕೊಂಡು ತಯಾರಿಸಿರುವ ಈ ಚಿತ್ರ ಸೆನ್ಸಾರ್ ಕೂಡ ಮುಗಿದಿದ್ದು, ರಿಲೀಸ್‌ಗೆ ಸಜ್ಜಾಗಿದೆ.

  ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿದ್ದರೆ, ಇವರಿಗೆ ಜೋಡಿಯಾಗಿ 'ಬ್ರಹ್ಮಗಂಟು' ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಅಭಿನಯಿಸಿದ್ದಾರೆ. ಪ್ರಕಾಶ್‌ ತೂಮಿನಾಡ್‌, ಪಂಚಮಿ ರಾವ್‌, ಅರ್ಜುನ್‌ ಕಜೆ ತಾರಾಬಳಗದಲ್ಲಿದ್ದಾರೆ. ತುಳು ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಗಗನ್ ಎಂ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಾಗಿ ಕಾದು ಕೂತಿದ್ದಾರೆ.

  ಅಂದ್ಹಾಗೆ 'ಮಂಕು ಭಾಯ್ ಫಾಕ್ಸಿ ರಾಣಿ' ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸಿನಿಮಾ. ಇದಕ್ಕೆ ಎಂ.ಕೆ .ಕೆ.ಷಹಜನ್‌ ಛಾಯಾಗ್ರಹಣ, ವಿನ್ಯಾಸ್‌ ಮದ್ಯ ಶಮೀರ್ ಮುಡಿಪು ಸಂಗೀತವಿದೆ. ಜೋಶ್ವ ಜೈಶಾನ್ ಕ್ರಾಸ್ತ ನಿರ್ಮಾಣ ಮಾಡಿರುವ ಈ ಚಿತ್ರದ ಫಸ್ಟ್ ಟ್ರ್ಯಾಕ್ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋನು‌ ನಿಗಂ ಕಂಠದಲ್ಲಿ ಮೂಡಿಬಂದಿರುವ ಮಿಂಚಂತೆ ಮಿನುಗುತಿರೊ ಎಂಬ ಹಾಡು ಸಂಗೀತ ಪ್ರಿಯರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದೆ.

  Bigg Boss OTT Contestant Roopesh Shetty Movie Manku Bhai Funky Rani Ready For Release

  ರೂಪೇಶ್ ಶೆಟ್ಟಿ ಇನ್ನೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಅದರಲ್ಲೂ ಮೇನ್ ಬಿಗ್ ಬಾಸ್‌ಗೆ ಹೋದರೆ, ಅಲ್ಲಿಂದ ಹೊರಬರುವವರೆಗೂ ಸಿನಿಮಾ ಬಿಡುಗಡೆಯಾಗೋದು ಅನುಮಾನ. ಸದ್ಯ ಚಿತ್ರತಂಡ ಇನ್ನೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ.

  English summary
  Bigg Boss OTT Contestant Roopesh Shetty Movie Manku Bhai Funky Rani Ready For Release, Know More.
  Friday, September 16, 2022, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X