For Quick Alerts
  ALLOW NOTIFICATIONS  
  For Daily Alerts

  ಬಿಗ್ಬಾಸ್ ಗೆದ್ದ ದುಡ್ಡಲ್ಲಿ ಮಾಡಿದ ಪುಟ್ಟ ಕೆಲಸ ಎಷ್ಟು ಸಮಾಧಾನ ಕೊಡ್ತಿದೆ ಗೊತ್ತಾ?

  |

  ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಗೆದ್ದ ಪ್ರಥಮ್‌ಗೆ ಅರ್ಧಕೋಟಿ ಬಹುಮಾನ ಬಂದಿತ್ತು. ದೊಡ್ಮನೆ ಆಟದಿಂದ ಬಂದ ಹಣದಲ್ಲಿ ಯೋಧರ ಕುಟುಂಬಕ್ಕೆ ಹಾಗೂ ರೈತರಿಗೆ ಹಾಗೂ ತಮ್ಮ ಊರಿನ ಕೆಲವು ಒಳ್ಳೆಯ ಕೆಲಸಗಳಿಗೆ ಬಳಸಿದ್ದರು ಪ್ರಥಮ್.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

  ದೇವಸ್ಥಾನವೊಂದಕ್ಕೆ ಸಹ ಪ್ರಥಮ್ ಸಹಾಯ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಅಂದು ಬಿಗ್ ಬಾಸ್ ಪ್ರಥಮ್ ನೆರವು ನೀಡಿದ ದೇವಸ್ಥಾನ ಇಂದು ವಿದ್ಯಾರ್ಥಿಗಳ ಪಾಲಿಗೆ ಆಶ್ರಯಧಾಮವಾಗಿದೆ.

  'ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!'ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!

  ಲಾಕ್‌ಡೌನ್‌ನಿಂದ ಶಾಲೆಗಳು ಮುಚ್ಚಿವೆ. ಆದರೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವು ಶಿಕ್ಷಕರು ಮರದ ಕೆಳಗೆ, ದೇವಸ್ಥಾನದ ಎದುರು ಹಾಗೂ ಇನ್ನಿತರ ಸ್ಥಳಗಳಲ್ಲಿ ಪಾಠ ಮಾಡುತ್ತಿದ್ದಾರೆ.

  ಬಿಗ್ ಬಾಸ್ ವಿನ್ನರ್ ನೆರವು ನೀಡಿದ್ದ ದೇವಸ್ಥಾನದಲ್ಲಿ ಇಬ್ಬರು ಮಹಿಳಾ ಶಿಕ್ಷಕಿಯರು ಒಂದಿಷ್ಟು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಪ್ರಥಮ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

  ''ಕೆಲವು ಸಮಯದ ಹಿಂದೆ ನಮ್ಮೂರಿನ ಹಿರಿಯರು ದೇವಸ್ಥಾನ ಕಟ್ಟಿಸುವಾಗ ನನ್ನ ನೆನೆಸಿಕೊಂಡು ಸಹಕಾರ ಕೇಳಿದ್ರು...! ಅವತ್ತು ದೇವಸ್ಥಾನ ಕಟ್ಟೋದ್ರಲ್ಲಿ ಕೈಜೋಡಿಸಿದ್ದಕ್ಕೆ ಸಾರ್ಥಕತೆ, ಸಮಾಧಾನ ಸಂತೋಷವಾಗುತ್ತಿದೆ... ಕರೋನಾದಿಂದ ಶಾಲೆಗಳು ನಡೆಯುತ್ತಿಲ್ಲ...! ಮಕ್ಕಳಿಗೆ ತೊಂದರೆಯಾಗಬಾರದು ಅಂತ ದೂರದಿಂದ ಬಂದು ದೇವಸ್ಥಾನದ ಜಾಗದಲ್ಲಿ ವಿಧ್ಯಾಭ್ಯಾಸ ಮಾಡ್ತಾ ಇದ್ದಾರೆ ಶಿಕ್ಷಕರು.''

  ''ಪಾಠ ಮಾಡುವ ಮೇಷ್ಟ್ರು ಕ್ರೈಸ್ತ ಸಮಾಜದವರು... ಪಾಠ ನಡೆಯೋ ಜಾಗ ಹಿಂದುದೇವಾಲಯ.... ಕಲಿಯುತ್ತಿರುವ ಮಕ್ಕಳು ಎಲ್ಲಾವರ್ಗದವರು.... ಇಂತಹ ಅದ್ಭುತ ಕೆಲಸಕ್ಕೆ ಸಣ್ಣದಾಗಿ ಕೈಸೇರಿಸಿದ್ದೇ ಸಮಾಧಾನ...! ಇಂತಹ ಕಾರಣಕ್ಕೆ ನನಗೆ ಬೆಂಗಳೂರಿಗಿಂತ ಹಳ್ಳಿ ಸಮಾಧಾನ ಅನ್ನಿಸೋದು...! ಜೀವನದಲ್ಲಿ ನೀವು ಮಾಡೋ ಪುಟ್ಟಪುಟ್ಟ ಕೆಲಸಗಳು ಸಂತೃಪ್ತಿ ಕೊಡುತ್ತದೆ...! ಕಣ್ಣುಮುಚ್ಚಿ ಅದನ್ನ ಅನುಭವಿಸಿ...! ಪಕ್ಕದಲೈದ್ದವರ ನೋಡಿ ದ್ವೇಷಿಸುವುದಕ್ಕಿಂತ ಇರುವುದ್ದನ್ನ ನೋಡಿ ತೃಪ್ತರಾಗೋದು ಕಲಿಯೋಣ...! ನನ್ನ ಜೀವನದಲ್ಲಿ ಮಾಡಿರೋ ಎಷ್ಟೋ ಕೆಲಸದಲ್ಲಿ ಅತ್ಯಂತ ಹೆಚ್ಚು ಖುಷಿ, ಸಮಾಧಾನ ಕೊಟ್ಟಿದ್ದು ದೇವಸ್ಥಾನ ಕಟ್ಟೋದಕ್ಕೆ ಅಳಿಲುಸೇವೆ ಮಾಡಿದ್ದು...!'' ಎಂದು ಬರೆದುಕೊಂಡಿದ್ದಾರೆ.

  English summary
  Bigg Boss kannada season 4 winner Pratham appreciated about Halagur school teacher.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X