ಪ್ರಕಾಶ್ ರೈಗೆ ಬಹಿರಂಗ ಸವಾಲೆಸೆದ 'ಬಿಲ್ಡಪ್' ಪ್ರಥಮ್

By Bharath Kumar

Recommended Video

ಒಳ್ಳೆ ಹುಡುಗ ಪ್ರಥಮ್ ಫೇಸ್ ಬುಕ್ ನಲ್ಲಿ ಪ್ರಕಾಶ್ ರೈಗೆ ಸವಾಲ್ | Filmibeat Kannada

ಹೊನ್ನಾವರದಲ್ಲಿ ಕೆಲದಿನಗಳ ಹಿಂದೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೆಸ್ತಾ ಎಂಬುವರ ಮೃತದೇಹ ನಗರದ ಶನಿ ದೇವಾಸ್ಥಾನದ ಬಳಿ ಇರುವ ಶೆಟ್ಟಿ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಘಟನೆಯಿಂದ ಹೊನ್ನಾವರದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿದೆ.

ಈ ಘಟನೆ ಬೆನ್ನಲ್ಲೆ 'ಬಿಗ್ ಬಾಸ್' ಖ್ಯಾತಿಯ ನಟ ಪ್ರಥಮ್, ಬಹುಭಾಷ ನಟ ಪ್ರಕಾಶ್ ರೈ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಗೌರಿ ಹತ್ಯೆಯ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದ ಪ್ರಕಾಶ್ ರೈ ಅವರನ್ನ ಈಗ ಪ್ರಥಮ್ ಪ್ರಶ್ನಿಸುತ್ತಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಸರಣೆ ಕಾಮೆಂಟ್ ಮಾಡುವ ಮೂಲಕ ಪ್ರಕಾಶ್ ರೈ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಅಷ್ಟಕ್ಕೂ, ಪ್ರಕಾಶ್ ರೈ ವಿರುದ್ಧ ಪ್ರಥಮ್ ಮಾಡುತ್ತಿರುವ ಆರೋಪವೇನು? ಮುಂದೆ ಓದಿ.....

'ರೈ'ಗೆ ಪ್ರಥಮ್ ಕೇಳುತ್ತಿರುವ ಪ್ರಶ್ನೆ

'ರೈ'ಗೆ ಪ್ರಥಮ್ ಕೇಳುತ್ತಿರುವ ಪ್ರಶ್ನೆ

''ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈ ರವರಿಗೆ ಬಹಿರಂಗ ಪ್ರಶ್ನೆ.... ಏನ್ರೀ Prakash Raj so called ದೊಡ್ಡ ನಟ?! ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ "ಈ ದೇಶದಲ್ಲಿ ಏನಾಗ್ತಿದೆ?ಅದು ಇದು ಅಂತ ಬಾಯಿಗೆ ಬಂದಂಗೆ ಎಲ್ಲಾ ಕೇಳಿ ಕೊನೆಯದಾಗಿ #just_asking ಅಂತಿದ್ರಿ.... ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ... ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ so called ದೊಡ್ಡ ನಟ (ಭಯಂಕರ)?'' - ಪ್ರಥಮ್, ನಟ

ಉತ್ತರಿಸಿ ಪ್ರಕಾಶ್ ರೈ-ಪ್ರಥಮ್

ಉತ್ತರಿಸಿ ಪ್ರಕಾಶ್ ರೈ-ಪ್ರಥಮ್

''ನರಕ ಅಂದ್ರೇನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು... ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ? ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ್ ರೈ ನಿಮಗೆ? ನಾನು ಹಿಂದು-ಮುಸ್ಲಿಂ ಅಂತ ಮಾತಾಡ್ತಿಲ್ಲ...ಮಾನವೀಯತೆ, ಮನುಷ್ಯತ್ವದ ಬಗ್ಗೆ ಮಾತಾಡ್ತಾ ಇದೀನಿ. ಇದು just asking ಅಲ್ಲ...#purposefully_asking'' ಎಂದು ಸ್ಟೇಟಸ್ ಬರೆದಿದ್ದರು.

ಪ್ರಕಾಶ್ ಮಾತಿಗೆ ತಿರುಗೇಟು

ಪ್ರಕಾಶ್ ಮಾತಿಗೆ ತಿರುಗೇಟು

ಇನ್ನು ಕೇರಳದ ಚಿತ್ರೋತ್ಸವದಲ್ಲಿ ಮಾತನಾಡಿದ್ದ ರೈ ''ಕೇರಳದಲ್ಲಷ್ಟೇ ಭಯವಿಲ್ಲದೆ ಉಸಿರಾಡಬಲ್ಲೇ'' ಎಂದಿದ್ದಾರೆ. ಪ್ರಕಾಶ್ ರೈ ಅವರ ಈ ಮಾತಿಗೆ ಬಿಗ್ ಬಾಸ್ ಪ್ರಥಮ್ ಇನ್ನೊಂದು ಸ್ಟೇಟಸ್ ಹಾಕಿದ್ದು, ರೈ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಎಲ್ಲಿ ಸೇಫ್ ಇದ್ಯೋ ಅಲ್ಲೇ ಇರಿ

ನಿಮಗೆ ಎಲ್ಲಿ ಸೇಫ್ ಇದ್ಯೋ ಅಲ್ಲೇ ಇರಿ

''ನಮ್ಮ ಕರ್ನಾಟಕದಲ್ಲಿ ನೆಮ್ಮದಿ ಇಲ್ವಾ?ರೀ so called ದೊಡ್ಡ ನಟ (ನಟ ಭಯಂಕರ) Prakash Raj ರವರೆ?ನಮ್ಮ ಕರ್ನಾಟಕದಲ್ಲಿ ಭಯವಿಲ್ಲದೇ ಉಸಿರಾಡೋಕಾಗಲ್ವಾ?ನೋಡಿ ಕನ್ನಡಿಗರಿಗೆ ಅವಮಾನ ಮಾಡ್ಬೇಡಿ ದೊಡ್ಡ ನಟರೆ... ನಾವೆಲ್ಲ ಕರ್ನಾಟಕದಲ್ಲಿ ಬದುಕಿಲ್ವಾ?ನಿಮಗೆ ಭಯ ಇದ್ರೆ ಕರ್ನಾಟಕಕ್ಕೆ ಬರೋದ್ಯಾಕೆ?ಸರ್ಕಾರದ ಮೇಲೆ ಗೂಬೆ ಕೂರ್ಸೋದು ಯಾಕೆ?ನಿಮ್ಗೆ ಎಲ್ಲಿ safe ಇದ್ಯೋ ಅಲ್ಲಿ ಇರಿ.ನಮ್ಮ ನಾಡು ಕನ್ನಡ ನಾಡು. ಅಣ್ಣಾವ್ರು ಹೇಳವ್ರೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತ...ನಿಮ್ದೇನ್ರಿ problem?ನಮ್ಮ ಕನ್ನಡ ನಾಡಿನ ಬಗ್ಗೆ ಮಾತಾಡಿದ್ರೆ ಚೆನ್ನಾಗಿರಲ್ಲ....'' - ಪ್ರಥಮ್, ನಟ

More from Filmibeat

English summary
Bigg boss winner, Kannada Actor Pratham Puts Open Challenge To Actor Prakash Rai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X