For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ವಿನ್ನರ್, ಮಾತಿನ ಮಲ್ಲ ಪ್ರಥಮ್ ಈಗ ತುಮಕೂರಿನಲ್ಲಿ ತರಕಾರಿ ಮಾರುತ್ತಿದ್ದಾರೆ!

  |

  ''ತರಕಾರಿ ಮಾರುವ ಸ್ಥಿತಿ ಯಾಕೆ ಬಂತಪ್ಪಾ?'' ಎಂದುಕೊಳ್ಳಬೇಡಿ, ಅವರು ತರಕಾರಿ ಮಾರುತ್ತಿರುವುದು ಒಳ್ಳೆಯ ಉದ್ದೇಶದಿಂದ. ತರಕಾರಿ ಮಾರುತ್ತಿರುವ ಹಿಂದೆ ಸಾಮಾಜಿಕ ಕಳಕಳಿ ಇದೆ.

  ಪ್ರಥಮ್ ಗೆ ಈ ಕೆಲಸ ಕೂಡ ಬರುತ್ತಾ..? ಸಕಲ ಕಾಲ ವಲ್ಲಭ ಪ್ರಥಮ್ | Filmibeat Kannada

  ಕೊರೊನಾ ದಿಂದಾಗಿ ರಾಜ್ಯ ಲಾಕ್‌ಡೌನ್ ಆಗಿದೆ. ಜನರಿಗೆ ಹೊರಗೆ ಬರಲು ರೋಗದ ಭೀತಿಯ ಜೊತೆಗೆ, ಪೊಲೀಸರ ಕಾವಲಿನ ಭಯವೂ ಇದೆ. ದಿನನಿತ್ಯದ ಅಗತ್ಯವ ವಸ್ತುಗಳಿಗೂ ಪರದಾಡುವ ಸ್ಥಿತಿ ಹಲವರದ್ದು.

  ಇಂಥಹಾ ಸನ್ನಿವೇಶದಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಸಾಮಾಜಿಕ ಕಳಕಳಿಯಿಂದಾಗಿ ತನ್ನ ಸ್ನೇಹಿತರೊಡನೆ ಸೇರಿಕೊಂಡು ಅಗತ್ಯ ವಸ್ತುಗಳನ್ನು ಜನರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

  ನಿರ್ಮಾಪಕ ನೀಲೇಶ್ ಜೊತೆ ಸೇರಿ ಕಾರ್ಯ

  ನಿರ್ಮಾಪಕ ನೀಲೇಶ್ ಜೊತೆ ಸೇರಿ ಕಾರ್ಯ

  ನಟಭಯಂಕರ ಸಿನಿಮಾದ ಸಹ ನಿರ್ಮಾಪಕ ನಿಲೇಶ್ ಅವರೊಂದಿಗೆ ಸೇರಿಕೊಂಡು ಕೊರೊನಾ ದಿಂದ ಈಗಾಗಲೇ ಒಂದು ಸಾವನ್ನು ಕಂಡಿರುವ ತುಮಕೂರಿನಲ್ಲಿ ಅಗತ್ಯ ಇರುವವರಿಗೆ ತರಕಾರಿ ಮತ್ತು ದಿನಸಿ ವಿತರಿಸುವ ಕಾರ್ಯದಲ್ಲಿ ಪ್ರಥಮ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಬಡವರಿಗೆ ಉಚಿತ, ಉಳಿದವರಿಗೆ ಹಣ

  ಬಡವರಿಗೆ ಉಚಿತ, ಉಳಿದವರಿಗೆ ಹಣ

  ನೀಲೇಶ್ ಅವರು ಜಿಲ್ಲಾಡಳಿತದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡಿದ್ದು, ಪ್ರಥಮ್ ಅವರಿಗೂ ಸಹ ಪಾಸ್ ಅನ್ನು ವಿತರಿಸಿದ್ದಾರೆ. ದಿನಸಿ ಮತ್ತು ತರಕಾರಿ ಅಗತ್ಯ ಇರುವವರಿಗೆ ಪ್ರಥಮ್ ಹಾಗೂ ತಂಡ ಹೋಗಿ ತಲುಪಿಸುತ್ತಿದೆ. ಬಡವರಿಗೆ ತರಕಾರಿ, ದಿನಸಿ ಉಚಿತ, ಇತರರಿಗೆ ನ್ಯಾಯವಾದ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

  ಹದಿಮೂರು ಗಾಡಿಗಳಲ್ಲಿ ಸರಕು ವಿತರಣ ನಡೆಯುತ್ತಿದೆ

  ಹದಿಮೂರು ಗಾಡಿಗಳಲ್ಲಿ ಸರಕು ವಿತರಣ ನಡೆಯುತ್ತಿದೆ

  ಒಟ್ಟು ಹದಿಮೂರು ವಾಹನಗಳಲ್ಲಿ ತುಮಕೂರಿನಾದ್ಯಂತ ತರಕಾರಿ ಮತ್ತು ದಿನಸಿ ವಿತರಣೆ ನಡೆಸುತ್ತಿದ್ದಾರೆ ನೀಲೇಶ್. ಇವರಿಗೆ ಪ್ರಥಮ್ ಸಾಥ್ ನೀಡಿದ್ದಾರೆ. ತುಮಕೂರಿನಲ್ಲಿ ಕೊರೊನಾ ಕಾರಣದಿಂದ ಒಂದು ಸಾವಾಗಿರುವ ಕಾರಣ ಭಾರಿ ಶಿಸ್ತಿನಿಂದ ಲಾಕ್ ಡೌನ್ ಪಾಲಿಸುತ್ತಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ದುಸ್ತರವಾಗಿರುವ ಸಮಯದಲ್ಲಿ ಪ್ರಥಮ್, ನಿಲೇಶ್ ಮತ್ತು ಸಂಗಡಿಗರು ಈ ಕಾರ್ಯಕ್ಕೆ ಇಳಿದಿದ್ದಾರೆ.

  ಊರಿನಲ್ಲಿ ದನ, ಕುರಿ ಮೇಯಿಸಿಕೊಂಡಿದ್ದ ಪ್ರಥಮ್

  ಊರಿನಲ್ಲಿ ದನ, ಕುರಿ ಮೇಯಿಸಿಕೊಂಡಿದ್ದ ಪ್ರಥಮ್

  ''ಕನ್ನಡ ಫಿಲ್ಮ್‌ಬೀಟ್'' ನೊಂದಿಗೆ ಮಾತನಾಡಿದ ಪ್ರಥಮ್, ಕೊರೊನಾ ಲಾಕ್‌ಡೌನ್ ಆದಾಗಿನಿಂದ ನಮ್ಮ ಊರಿನಲ್ಲಿ ಕುರಿ, ದನ ಮೇಯಿಸಿಕೊಂಡು ಇದ್ದೆ. ನಮ್ಮ ನಿರ್ಮಾಪಕರು ಕರೆ ಮಾಡಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಹೇಳಿದರು. ಅದಕ್ಕಾಗಿ ಓಡಿಬಂದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾಡಳಿತವೂ ಅಗತ್ಯ ಸಹಕಾರ ನೀಡಿದೆ'' ಎಂದು ಹೇಳಿದರು.

  ಇಂಥಹಾ ಸಮಯದಲ್ಲೂ ಸೆಲ್ಫಿಗಳಿಗಾಗಿ ಮುಗಿಬೀಳುತ್ತಿದ್ದಾರೆ: ಪ್ರಥಮ್

  ಇಂಥಹಾ ಸಮಯದಲ್ಲೂ ಸೆಲ್ಫಿಗಳಿಗಾಗಿ ಮುಗಿಬೀಳುತ್ತಿದ್ದಾರೆ: ಪ್ರಥಮ್

  ''ಹೋದಲ್ಲೆಲ್ಲಾ ಮಹಿಳೆಯರು ಪ್ರೀತಿಯಿಂದ ಮಾತನಾಡಿಸುತ್ತಾರೆ. ಜನರು ಸೆಲ್ಫಿಗಳಿಗಾಗಿ ಮುಗಿಬೀಳುತ್ತಾರೆ. ಆದರೆ ಇಂಥಹಾ ಸಮಯದಲ್ಲಿ ಸೆಲ್ಫಿಗಳು ಸರಿಯಲ್ಲವೆಂಬ ಕಾರಣಕ್ಕೆ ಯಾರೊಂದಿಗೂ ಸೆಲ್ಫಿ ತೆಗೆಸಿಕೊಳ್ಳುತ್ತಿಲ್ಲ. ಜನರಿಗೆ ಒಳಿತಾಗಬೇಕು ಎಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ'' ಎಂದು ಪ್ರಥಮ್ ಹೇಳಿದರು.

  English summary
  Bigg Boss Pratham distributed vegetables and grocery to needy people in Tumkuru in this lock down time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X