ಹೆಣ್ಣು ಮಕ್ಕಳ ಬಗ್ಗೆ ಒಳ್ಳೆ ಹುಡುಗನ ಬಾಯಲ್ಲಿ ಇದೆಂಥಾ ಮಾತು; ಮತ್ತೆ ತಗ್ಲಾಕಿಕೊಂಡ ಪ್ರಥಮ್

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿದೆ. ಆದರೆ ಇದನ್ನು ಕೆಲವರು ಅರ್ಥ ಮಾಡಿಕೊಳ್ಳುವುದಿಲ್ಲ. ಏನೋ ಮಾತಾಡಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಮಾತು, ಮಾತು, ಬರೀ ಮಾತಿನಿಂದಲೇ ಮೋಡಿ ಮಾಡುವವರು ನಟ, ನಿರ್ದೇಶಕ ಪ್ರಥಮ್ ಈಗ ಎಡವಟ್ಟು ಮಾಡಿಕೊಂಡಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ಪ್ರಥಮ್ ತಗ್ಲಾಕಿಕೊಂಡಿದ್ದಾರೆ. ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. 'ಫಸ್ಟ್ ನೈಟ್ ವಿಥ್ ದೆವ್ವ' ಚಿತ್ರದಲ್ಲಿ ಪ್ರಥಮ್ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ಆಗಿತ್ತು. ಅದರ ಪ್ರಚಾರ ಮಾಡುವ ಮಾಡುವ ಭರದಲ್ಲಿ ಮಾಡಿದ್ದ ಟ್ವೀಟ್‌ವೊಂದು ವೈರಲ್ ಆಗ್ತಿದೆ.

Bigg Boss Pratham Sparks Outrage with Sarcastic Tweet About Women During Film Promotion

'ತುಂಟ ಮನದ ಮಾಯೆ ನೀನು' ಎಂದು ಶುರುವಾಗುವ ಸಾಂಗ್ ಲಿಂಕ್ ಅನ್ನು ಪ್ರಥಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ಕೊಟ್ಟಿದ್ದ ಕ್ಯಾಪ್ಷನ್ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡುವ ಸಾಹಸ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಅದರ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳ ಬಗ್ಗೆ ಪ್ರಥಮ್ ಬರೆದ ಸಾಲುಗಳು ಆಕ್ರೋಶಕ್ಕೆ ಕಾರಣವಾಗಿದೆ.

ಸದಾ ಒಂದಿಲ್ಲೊಂದು ಹೇಳಿಕೆ ಕೊಟ್ಟು ಪ್ರಥಮ್ ಎಡವಟ್ಟು ಮಾಡಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ನಟ ದರ್ಶನ್ ಅಭಿಮಾನಿಗಳ ಬಗ್ಗೆ ನೀಡಿದ್ದ ಹೇಳಿಕೆ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಬೆದರಿಕೆ ಕರೆಗಳು ಬಂದಾಗ ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆ ಬಳಿಕ ಪದೇ ಪದೇ ಇದೇ ವಿಚಾರ ಎಳೆದುತಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಟ್ವೀಟ್ ಮಾಡಿದ್ದ ಪ್ರಥಮ್ "ಯಾರು ನಮ್ಮ 'ಫಸ್ಟ್ ನೈಟ್ ವಿತ್ ದೆವ್ವ' ಚಿತ್ರದ ಸಾಂಗ್ ನೋಡಲ್ವೋ ಅವರಿಗೆ ಸೋನುಗೌಡ, ಕಿಪಿ ಕೀರ್ತಿ ಥರ ಹೆಂಡತಿ ಸಿಗಲಿ, ಹುಡ್ಗಿ ಆಗಿದ್ರೆ ಕಾಫಿನಾಡ ಚಂದು, ದೀಪಕ್ ತರ ಗಂಡ ಸಿಗ್ಲಿ. ಇದ್ಯಾವುದು ಆಗಬಾರ್ದು ಅಂದ್ರೆ ಈಗ್ಲೇ ನಮ್ಮ ಸಿನಿಮಾ ಸಾಂಗ್ ನೋಡಿ, ಶೇರ್ ಮಾಡಿ" ಎಂದು ಬರೆದುಕೊಂಡಿದ್ದರು.

ಪ್ರಥಮ್ ಮಾಡಿದ್ದ ಟ್ವೀಟ್ ಕೆಲವರ ಬೇಸರಕ್ಕೆ ಕಾರಣವಾಗಿದೆ. ನಿಮ್ಮ ಸಿನಿಮಾ ಪ್ರಚಾರಕ್ಕೆ ಇಂತಹ ಗಿಮಿಕ್ ಯಾಕೆ? ಜನ ಬೇಕಿದ್ದರೆ ಹಾಡು ನೋಡ್ತಾರೆ, ಇಲ್ಲ ಅಂದ್ರೆ ಬಿಡ್ತಾರೆ. ಅವರ ಬಗ್ಗೆ ಇಂತಹ ವ್ಯಂಗ್ಯದ ಪೋಸ್ಟ್ ಬೇಕಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನಿತಾ ಚಂದ್ರ ಎಂಬುವವರು ಟ್ವೀಟ್ ಮಾಡಿ "ಇವನ ವಿರುದ್ಧ ಯಾರಾದ್ರೂ ಮಾತಾಡಿದ್ರೆ, ಟ್ರೋಲ್ ಮಾಡಿದ್ರೆ ಪೊಲೀಸ್ ಸ್ಟೇಷನಲ್ಲಿ‌ ಕಂಪ್ಲೆಂಟ್, ಕೋರ್ಟ್ ನಿಂದ ಸ್ಟೇ ತರೋಕೆ ಗೊತ್ತಿರುವ ಈ ನಾಯಿಗೆ ಬೇರೆ ಮನೆ ಹೆಣ್ಣು, ಗಂಡು ಮಕ್ಕಳ ಬಗ್ಗೆ ಮಾತಾಡುವ ಹಕ್ಕು ಯಾರು ಕೊಟ್ಟಿದ್ದು" ಎಂದು ಪ್ರಶ್ನಿಸಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಪ್ರಥಮ್ ಕ್ರೇಜ್ ಕಮ್ಮಿ ಆಗಿದೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ರು, ಏನು ಪ್ರಯೋಜನವಾಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್‌ಗಳನ್ನು ಮಾಡುತ್ತಾ ಸದಾ ಸುದ್ದಿಯಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವೊಮ್ಮೆ ಇಂತಹ ಟ್ವೀಟ್ ಮಾಡಿ ಸಮಸ್ಯೆಗೆ ಸಿಲುಕುತ್ತಾರೆ. ಇನ್ನಾದರೂ ಪ್ರಥಮ್ ಬುದ್ದಿ ಕಲಿಯಬೇಕಿದೆ.

More from Filmibeat

English summary
Actor-director Pratham lands in controversy again after a sarcastic tweet promoting his film song goes viral. His remarks about women have triggered backlash on social media
Read more about: pratham bigg boss kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X