ಬಿಗ್ ಬಾಸ್‌ಗೆ ಹೋಗಲು ದರ್ಶನ್ ಫ್ಯಾನ್ಸ್‌ನ ಕೆಣಕುತ್ತಿದ್ದಾರಾ ಸೋನು ಶೆಟ್ಟಿ ?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ಬಿಗ್ ಬಾಸ್‌ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು..ಕಾರ್ಯಕ್ರಮ ನೋಡಲು ಬಂದು ಕೂರಬೇಕು..
ಇಲ್ಲದಿದ್ದರೆ ಯಾವುದಾದರೂ ವಿವಾದ ಮಾಡಿಕೊಂಡಿರಬೇಕು. ಸದಾ ಕಾಲ ಕಾಲು ಕೆರೆದು ಜಗಳಕ್ಕೆ ನಿಲ್ಲುವ ವಿವಾದಿತ ವ್ಯಕ್ತಿಯಾಗಿರಬೇಕು.ಹೀಗಿದ್ದಾಗಲೇ ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುವುದು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬರುತ್ತೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು.

ಇದಕ್ಕೆ ಕೈಗನ್ನಡಿ ಎಂಬಂತೆ ಈ ಹಿಂದೆ ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಯ ಸ್ಫರ್ಧಿಗಳ ಲಿಸ್ಟ್ ಮೇಲೆ ಕಣ್ಣಾಡಿಸಿದರೆ ಅಲ್ಲಿ ಕಾಂಟ್ರವರ್ಸಿಯಲ್ ವ್ಯಕ್ತಿತ್ವಗಳೇ ಹೆಚ್ಚು ಕಣ್ಣಿಗೆ ಕಾಣಿಸುತ್ತಾವೆ.
ಇನ್ನು ಬಿಗ್ ಬಾಸ್ ಮನೆಗೆ ಹೋಗಲೇಂದೇ.. ಬಿಗ್ ಬಾಸ್‌ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕವೆಂದುಕೊಂಡವರು ಕೂಡ ಇದ್ದಾರೆ. ಸೋನು ಶೆಟ್ಟಿ ಕೂಡ ಇದೇ ತರಹದ ಕಸರತ್ತು ಮಾಡ್ತಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ.
ಯಾಕೆಂದರೆ.. ಈ ಸೋನು ಮೊನ್ನೆಯವರೆಗೆ ಹಲವರಿಗೆ ಅಪರಿಚಿತರಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 69,914 ಜನ ಇವರನ್ನು ಫಾಲೋ ಮಾಡ್ತಿದ್ದರು ಕೂಡ ಸೋನು ಗೌಡ ಅವರನ್ನು ತಿಳಿದುಕೊಂಡಷ್ಟು ಜನ ಈ ಸೋನು ಶೆಟ್ಟಿ ಅವರ ಕುರಿತು ತಿಳಿದುಕೊಂಡಿರಲಿಲ್ಲ.
ಆದರೆ ಈಗ.. ದರ್ಶನ್ ಮತ್ತು ದರ್ಶನ್ ಅಭಿಮಾನಿಗಳನ್ನು ಕೆಣಕುವ ಮೂಲಕ, ದಿನಕ್ಕೊಂದು ಐದು ವಿಡಿಯೋ ಮಾಡಿ ಆ ವಿಡಿಯೋದಲ್ಲಿ ದರ್ಶನ್ ಮತ್ತು ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಮಾತನಾಡುವ ಮೂಲಕ.. ಸೋನು ಶೆಟ್ಟಿ ಕರುನಾಡಿನೆಲ್ಲೆಡೆ ಜನಜನಿತರಾಗಿದ್ದಾರೆ. ಇವತ್ತು ಸೋನು ಶೆಟ್ಟಿ ಯಾರು ಎಂಬ ಪ್ರಶ್ನೆ ಯಾರಾದರು ಯಾರನ್ನಾದರು ಕೇಳಿದರೆ ಥಟ್ ಅಂತ ಉತ್ತರ ಸಿಗುತ್ತೆ.
ಆದರೆ, ಇದೇ ಸಮಯದಲ್ಲಿ ಪ್ರಚಾರದ ಹುಚ್ಚಿಂದ ಸೋನು ಇದೆಲ್ಲ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಗ್ ಬಾಸ್ ಮನೆಗೆ ತೆರಳಲು ದರ್ಶನ್ ಹೆಸರನ್ನು ಸೋನು ಉಪಯೋಗಿಸುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದಕ್ಕೆ ಸೋನು ಶೆಟ್ಟಿ ಸದ್ಯ ಉತ್ತರವನ್ನು ನೀಡಿದ್ದಾರೆ.
ಈ ಕುರಿತು ''ಟಿವಿ9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೋನು ಶೆಟ್ಟಿ , ''ರೇಣುಕಾಸ್ವಾಮಿ ನನಗೆ ಅಶ್ಲೀಲವಾದ ಮೆಸೇಜ್ ಕಳುಹಿಸದಾಗಲೇ ನಾನು ಏನಾದರು ಮಾಡಬಹುದಿತ್ತು. ಹಾಗೇನಾದರು ಇದ್ದರೆ ನಾನು ದರ್ಶನ್ ಪರ ಮಾತನಾಡುತ್ತಿರಲಿಲ್ಲ. ಅವತ್ತು ನಾನು ದರ್ಶನ್ ಪರ ಮಾತನಾಡಿರುವ ವಿಡಿಯೋ ನನ್ನ ಹತ್ರ ಇದೆ. ಬಿಗ್ ಬಾಸ್ ಮನೆಗೆ ಹೋಗುವ ಉದ್ದೇಶ ನನ್ನದಲ್ಲ. ಹಾಗೊಂದು ವೇಳೆ ಹೋಗಬೇಕು ಅಂದರೆ ನನ್ನಲ್ಲಿ ಪ್ರತಿಭೆ ಇದೆ, ಸ್ಕಿಲ್ ಇದೆ. ಈ ತರ ಬೇರೆಯವರ ಹೆಸರು ತೆಗೆದುಕೊಂಡು ಮುಂದೆ ಹೋಗುವ ಅವಶ್ಯಕತೆ ನನಗೆ ಇಲ್ಲ, ನಾನು ಅದೆಲ್ಲದರ ಬಗ್ಗೆ ತಲೆ ಕೂಡ ಕೆಡಿಸಿಕೊಳ್ಳಲ್ಲ'' ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ಬಗ್ಗೆ ತೀರಾ ಕೀಳಾಗಿ ಮಾತನಾಡ್ತಿದ್ದಾರೆ, ನನ್ನ ಬಟ್ಟೆಯ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ, ಇದರಿಂದ ಅವರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುತ್ತೆ. ನಾನು ಏನಂತ ನನಗೆ ಗೊತ್ತು, ಜೀವನದಲ್ಲಿ ನಾನು ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದೀನಿ, ಬೆಳಿತಿದಾರೆ ಅಂದ ಮೇಲೆ ನಾರ್ಮಲ್ ಇದ್ದೇ ಇರುತ್ತೆ. ನೋ ಪ್ರಾಬ್ಲಂ ಎಂದು ಕೂಡ ಸೋನು ಶೆಟ್ಟಿ ಹೇಳಿದ್ದಾರೆ.


Click it and Unblock the Notifications











