ಬಿಗ್ ಬಾಸ್ ದಿವಾಕರ್ ಹೊಸ ಅವತಾರ.! ಏನಿದು ವಿಶೇಷ.?
'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದ ರನ್ನರ್ ಅಪ್ ದಿವಾಕರ್ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿಗಳನ್ನ ಕೇಳಿದ್ರಿ. Rap ಸಿಂಗರ್ ಚಂದನ್ ಶೆಟ್ಟಿ ದಿವಾಕರ್ ಗಾಗಿಯೇ ಚಿತ್ರ ನಿರ್ದೇಶನ ಮಾಡ್ತಾರೆ, ಅದರಲ್ಲಿ ದಿವಾಕರ್ ನಟಿಸ್ತಾರೆ ಎನ್ನಲಾಗಿತ್ತು.
ಅದು ನಿಜಾನ ಎಂದು ಯೋಚನೆ ಮಾಡುವಷ್ಟರಲ್ಲೇ ದಿವಾಕರ್ ಗೆ ದೊಡ್ಡ ಪ್ರಾಜೆಕ್ಟ್ ನಲ್ಲಿ ನಟಿಸುವ ಅವಕಾಶ ಸಿಕ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ.
ಬಹಳಷ್ಟು ದೊಡ್ಡ ಕಲಾವಿದರು ಅಭಿನಯಿಸಲಿರುವ ಈ ಚಿತ್ರದಲ್ಲಿ ದಿವಾಕರ್ ಇರಲಿದ್ದು, ಭರ್ಜರಿ ಫೋಟೋಶೂಟ್ ಕೂಡ ಮಾಡಲಾಗಿದೆ. ಹಾಗಿದ್ರೆ, ಚಿತ್ರದಲ್ಲಿ ದಿವಾಕರ್ ಪಾತ್ರವೇನು.? ದಿವಾಕರ್ ಅವರ ಹೊಸ ಅವತಾರ ಹೇಗಿರಲಿದೆ ಚಿತ್ರದಲ್ಲಿ ಎಂಬುದನ್ನ ಮುಂದೆ ನೋಡಿ...

'ಚಿಲ್ಲಂ' ಚಿತ್ರದಲ್ಲಿ ದಿವಾಕರ್
ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ದಿವಾಕರ್ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಜೆ.ಚಂದ್ರಕಲಾ ಆಕ್ಷನ್ ಕಟ್ ಹೇಳುತ್ತಿದ್ದು, ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ.

'ಚಿಲ್ಲಂ' ಚಿತ್ರದಲ್ಲಿ ದಿವಾಕರ್ ಪಾತ್ರ ಏನು.?
'ಚಿಲ್ಲಂ' ಚಿತ್ರದಲ್ಲಿ ಹೀರೋ (ಮನೋರಂಜನ್ ರವಿಚಂದ್ರನ್) ಫ್ರೆಂಡ್ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ಮಿಂಚಲಿರುವ ದಿವಾಕರ್ ಇಡೀ ಸಿನಿಮಾದಲ್ಲಿ ಹೀರೋ ಜೊತೆಯಲ್ಲೇ ಇರಲಿದ್ದಾರೆ. ಮಾಸ್ ಲುಕ್ ನಲ್ಲಿ ಇರ್ತಾರಂತೆ. ಕಾಮಿಡಿನೂ ಮಾಡ್ತಾರಂತೆ.

ಸಿನಿಮಾದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್.!
'ಚಿಲ್ಲಂ' ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಪಾತ್ರ ನಿರ್ವಹಿಸಲಿದ್ದಾರೆ. 'ಚಿಲ್ಲಂ' ಚಿತ್ರಕಥೆ ಡ್ರಗ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.

ವಿಲನ್ ಆಗಿ ರಾಘಣ್ಣ
ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಅಭಿನಯಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಸರಿತಾ ನಟಿಸದ್ದಾರೆ. ಹಿಂದಿಯ ನಾನಾಪಟೇಕರ್ ಕೂಡ ಇದ್ದಾರೆ. ಇಷ್ಟೆಲ್ಲ ವಿಶೇಷತೆಗಳು ಇರುವ 'ಚಿಲ್ಲಂ' ಚಿತ್ರದಲ್ಲಿ ದಿವಾಕರ್ ಕೂಡ ಅಭಿನಯಿಸ್ತಿದ್ದಾರೆ.

ಸೇಲ್ಸ್ ಮ್ಯಾನ್ ಈಗ ಸ್ಟೈಲಿಶ್ ಮ್ಯಾನ್
ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ದಿವಾಕರ್ ಈಗ ಸ್ಟೈಲಿಶ್ ಮ್ಯಾನ್ ಆಗಿ ಮಿಂಚುತ್ತಿದ್ದಾರೆ. ತಮ್ಮ ಹೊಸ ಚಿತ್ರಕ್ಕಾಗಿ ಭರ್ಜರಿ ಫೋಟೋಶೂಟ್ ಮಾಡಿದ್ದು, ಯಾವ ಹೀರೋಗೂ ಕಮ್ಮಿಯಿಲ್ಲ ಎಂಬಂತೆ ಫೋಸ್ ಕೊಟ್ಟಿದ್ದಾರೆ.


Click it and Unblock the Notifications











