ಆಸ್ಪತ್ರೆಗೆ ದಾಖಲಾದ ಗೋಲ್ಡ್ ಸುರೇಶ್, ಬಿಗ್ ಬಾಸ್ ಸ್ಫರ್ಧಿಗೆ ಆಗಿದ್ದೇನು ?
ಮೈ ತುಂಬಾ ಚಿನ್ನ ಹಾಕಿಕೊಂಡು ಗೋಲ್ಡ್ ಸುರೇಶ್ ಎಂದೇ ಜಗದ್ವಿಖ್ಯಾತರಾದವರು ಸುರೇಶ್. ಬೆಳಗಾವಿಯ ಅಥಣಿ ತಾಲೂಕಿನ ಪಾರ್ಥನಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಗೋಲ್ಡ್ ಸುರೇಶ್ ಮೊನ್ನೆ ಮೊನ್ನೆ ಮುಕ್ತಾಯವಾದ ಬಿಗ್ ಬಾಸ್ ಕನ್ನಡದ ಹನ್ನೊಂದನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದರು. ತಮ್ಮ ಆಟದಿಂದ ಗಮನ ಸೆಳೆದಿದ್ದರು.
ಆದರೆ, ಆ ನಂತರ ವ್ಯೆಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಿಂದ ಹೊರ ಬಂದರು. ನನ್ನನ್ನೇ ನಂಬಿ ಹಲವು ಕುಟುಂಬಗಳಿವೆ, ನಾನು ಬಿಗ್ ಬಾಸ್ ಮನೆಗೆ ಹೋದ ನಂತರ ನನ್ನ ಪತ್ನಿ ಒತ್ತಡಕ್ಕೊಳಗಾದರು, ಬಿಜಿನೆಸ್ ಮ್ಯಾನೇಜ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಅನಿವಾರ್ಯವಾಗಿ ನಾನು ಮನೆಯಿಂದ ಹೊರ ಬರಬೇಕಾಯ್ತು ಎಂದು ಹೇಳಿದ್ದರು.

ಇನ್ನು, ಬಿಗ್ ಬಾಸ್ ಮನೆಯಲ್ಲಿದ್ದಾಗ ಸುದೀಪ್ ಅವರ ಈ ಗೋಲ್ಡ್ ಶೋಕಿಯ ಕುರಿತು ಅನೇಕ ಸಲ ಮಾತನಾಡಿದ್ದರು. ಚಿನ್ನ ಇಲ್ಲದೆಯೇ ನಿಮ್ಮನ್ನು ನೋಡಲು ಚೆನ್ನ ಎಂದು ಹೇಳುತ್ತಿದ್ದರು. ಗೋಲ್ಡ್ ಸುರೇಶ್ ಅವರ ಪತ್ನಿಯ ಮನದ ಆಸೆ ಕೂಡ ಇದೇ ಆಗಿತ್ತು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರಳಿದ ನಂತರ ಈ ವಿಚಾರ ಅರಿತ ಗೋಲ್ಡ್ ಸುರೇಶ್ ಸದ್ಯ ಸಿಂಪಲ್ ಆಗಿರಲು ನಿರ್ಧಾರ ಮಾಡಿದ್ದಾರೆ.
ಇಂಥಾ ಗೋಲ್ಡ್ ಸುರೇಶ್ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಟಾಸ್ಕ್ ನಿರ್ವಹಿಸುವ ಸಮಯದಲ್ಲಿ ಗೋಲ್ಡ್ ಸುರೇಶ್ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಡ್ರಮ್ ತುಂಬಾ ನೀರು ತುಂಬಿಸಿ ಅದನ್ನು ಹೊರಚೆಲ್ಲದಂತೆ ನೋಡಿಕೊಳ್ಳುವ ಸಮಯದಲ್ಲಿ ಗೋಲ್ಡ್ ಸುರೇಶ್ ತುಂಬಿದ ಡ್ರಂ ಬಿದ್ದಿತ್ತು. ಡ್ರಮ್ ತಮ್ಮ ಕಾಲಿನ ಮೇಲೆ ಬೀಳುತ್ತಿದ್ದಂತೆ ಗೋಲ್ಡ್ ಸುರೇಶ್ ನೋವಲ್ಲಿ ಒದ್ದಾಡಿ ಹೋಗಿದ್ದರು. ಕಾಲು ಮುರಿದೇ ಹೋಯ್ತು ಎಂದು ಗೋಳಾಡಿದ್ದರು. ಸುರೇಶ್ ಅವರ ಈ ಸಂಕಟ ಕಂಡು ಮನೆಮಂದಿ ಕೂಡ ಗಾಬರಿ ಬಿದ್ದಿದ್ದರು. ಆದರೂ ಕೂಡ ಕನ್‌ಫೆಷನ್ ಕೊಠಡಿಗೆ ಹೋಗಿ ಆ ನಂತರ ವಿಶ್ರಾಂತಿ ಪಡೆದು ಗೋಲ್ಡ್ ಸುರೇಶ್ ಮತ್ತೆ ಆಟಕ್ಕೆ ಮರಳಿದ್ದರು.
ಕಾಲಿಗೆ ಪೆಟ್ಟಾಗಿದ್ದರಿಂದ ಟಾಸ್ಕ್‌ದಿಂದ ಹೊರಗೆ ಉಳಿದಿದ್ದರು. ಆ ನಂತರ ಹಾಗೂ ಹೀಗೂ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುವಲ್ಲಿ ಕೂಡ ಗೋಲ್ಡ್ ಸುರೇಶ್ ಯಶಸ್ವಿಯಾಗಿದ್ದರು. ಆದರೆ ಈಗ ಆ ಮನೆಯಲ್ಲಿ ಆದ ಗಾಯ. ಉಲ್ಭಣಗೊಂಡಿದೆ. ಈ ಹಿನ್ನೆಲೆ ಇಂದು ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದು, ನಾಳೆ ಆಪರೇಷನ್ ನಡೆಯಲಿದೆ.
ಇನ್ನು ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾದ ವಿಚಾರ ಗೊತ್ತಾದ ಕೂಡಲೇ ಸುರೇಶ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಆಪರೇಷನ್ ನಂತರ ಅವರನ್ನು ಬಹುಬೇಗ ಡಿಸ್ಟಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ ಎಂದು ಕೂಡ ವರದಿಯಾಗಿದೆ.


Click it and Unblock the Notifications











