Pratham marriage: ಸಿಂಪಲ್ ಆಗಿ ಹಸೆಮಣೆ ಏರಲು ತಯಾರಾದ ಒಳ್ಳೆ ಹುಡ್ಗ ಪ್ರಥಮ್, ಮದುವೆ ಯಾವಾಗ ಗೊತ್ತೆ?

ಕನ್ನಡ ಕಿರುತೆರೆಯ ಬಿಗ್‌ಬಾಸ್ ಶೋನಿಂದ ಕನ್ನಡಿಗರಿಗೆ ಚಿರಪರಿಚಿತರಾದ ಪ್ರಥಮ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಳ್ಳೆ ಹುಡುಗ ಎಂದು ಹೇಳಿಕೊಂಡು ಈಗ ಅದೇ ಹೆಸರಿನಿಂದ ಜನಪ್ರಿಯರಾಗಿ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟವರು ಪ್ರಥಮ್. ದೊಡ್ಮನೆಯಲ್ಲಿ ಸಕತ್ ಮನರಂಜನೆ ನೀಡಿದ್ದ ಅವರು, ಟ್ರೋಫಿಗೂ ಮುತ್ತಿಟ್ಟಿದ್ದರು.

ನಟ ಪ್ರಥಮ್ ಕಳೆದ ಜೂನ್ ತಿಂಗಳ 12ನೇ ತಾರೀಖಿನಂದು ಮಂಡ್ಯದ ಭಾನುಶ್ರೀ ಎಂಬುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾದ ಐದು ತಿಂಗಳ ಬಳಿಕ ಹಸೆಮಣೆ ಎರಡು ಈ ಜೋಡಿ ತಯಾರಾಗಿದೆ. ಈ ಬಗ್ಗೆ ಒಳ್ಳೆ ಹುಡ್ಗ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ.

Bigg Boss Season 4 Winner, Actor Pratham Getting Married Next Week

ಮುಂದಿನ ವಾರ ಒಳ್ಳೆ ಹುಡ್ಗ ಪ್ರಥಮ್ ಮದುವೆ

ಮುಂದಿನ ವಾರ ಪ್ರಥಮ್ ಹಸೆಮಣೆ ಏರಲಿದ್ದಾರೆ. ಅಂದರೆ ನವೆಂಬರ್ ತಿಂಗಳಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ಅವರ ಆಹ್ವಾನ ಸಕತ್ ಸದ್ದು ಮಾಡ್ತಿದೆ. ಮದುವೆ ಬಗ್ಗೆ ಟ್ವೀಟ್ ಮಾಡಿ ತಾವು ಸರಳವಾಗಿ ಮದುವೆ ಆಗುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಎಲ್ಲೇಲ್ಲಿ ಇರುತ್ತಿರೋ ಅಲ್ಲಿಂದಲೇ ಆಶೀರ್ವಾದ ಮಾಡಿ ಎಂತಲೂ ಮನವಿ ಮಾಡಿದ್ದಾರೆ.

"ನೆಕ್ಟ್ ವೀಕ್ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಮದುವೆ ಆಹ್ವಾನ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೇಸೆಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಿ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ, ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ" ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.

ಮಂಡ್ಯದ ಬೆಡಗಿಯನ್ನು ಮೆಚ್ಚಿಕೊಂಡ ಪ್ರಥಮ್

ನಟ ಪ್ರಥಮ್ ಮೊದಲಿನಿಂದಲೂ ಹಳ್ಳಿ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದ್ದರು. ಅದರಂತೆ ಅವರು ಮಂಡ್ಯ ಮೂಲದ ಭಾನುಶ್ರೀ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮಂಡ್ಯ ಪಕ್ಕದ ಹಳ್ಳಿಯಲ್ಲಿ ಪ್ರಥಮ್- ಭಾನುಶ್ರೀ ನಿಶ್ಚಿತಾರ್ಥ್ ಬಹಳ ಸರಳವಾಗಿ ನೆರವೇರಿತ್ತು.

Bigg Boss Season 4 Winner, Actor Pratham Getting Married Next Week

"ಒಂದು ಸುಂದರ ಕ್ಷಣ. ಎಂಗೇಜ್‌ಮೆಂಟ್ ಆಯ್ತು, ಯಾವ ಆಡಂಬರವಿಲ್ಲದೆ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗಿರೋಕೆ ಇಷ್ಟ. ಮದುವೆ ಎಷ್ಟು ಅದ್ಧೂರಿ ಅನ್ನೋಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹಾಗೇ ಇರ್ತೀನಿ. ಹರಸುವವರು ಅಲ್ಲಿಂದಲೇ ಹರಸಿ" ಎಂದಿದ್ದರು. ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಗ್ಗೆಯೂ ಅನೇಕರು ಕೊಂಕು ತೆಗೆದಿದ್ದರು. ಆಗ ಪ್ರಥಮ್ ಉತ್ತರ ನೀಡಿದ್ದರು.

"ಎಂಗೇಜ್‌ಮೆಂಟ್ ಮೊನ್ನೆ ಆಯ್ತು. ನಾಲ್ಕು ಜನರ ಕರೆದು ಊಟ ಹಾಕಿಸಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಇನ್ನೆರಡು ದಿನದಲ್ಲಿ ವೃದ್ಧಾಶ್ರಮ ವೊಂದರ 138 ಜನರಿಗೆ ಸಿಹಿ ಊಟ. ಚಳಿಗಾಲದ ಆಸರೆಗಾಗಿ ಒಂದು ಶಾಲು. ಮದುವೆ ಅವ್ರಿಷ್ಟದಂತೆ ಅವ್ರು ಮಾಡಬಹುದು. ನನ್ನ ಕಡೆಯಿಂದ ಒಂದು 200 ಜನರಿಗೆ ನಮ್ಮೂರು ಕೊಳ್ಳೇಗಾಲ, ಹನೂರಲ್ಲಿ ಬೀಗರ ಊಟ. ಇಷ್ಟೇ ನನ್ನ ಮದುವೆಯ ಮೆನು" ಎಂದು ತಿರುಗೇಟು ನೀಡಿದ್ದರು. ಒಟ್ನಲ್ಲಿ ಒಳ್ಳೆ ಹುಡ್ಗ ಪ್ರಥಮ್ ತಮ್ಮ ಆಸೆಯಂತೆ ಮದುವೆಯಾಗಿ ಖುಷಿಯಾಗಿರಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

More from Filmibeat

English summary
Actor Olle huduga pratham getting married next week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X