For Quick Alerts
  ALLOW NOTIFICATIONS  
  For Daily Alerts

  ಶೈನ್ ಶೆಟ್ಟಿಗೆ ಮದುವೆ ಆಮಂತ್ರಣ ನೀಡಿದ 'ಬಿಗ್ ಬಾಸ್-5 'ವಿನ್ನರ್ ಚಂದನ್ ಶೆಟ್ಟಿ

  |
  Chandan Shetty meets his long time friend Shine Shetty | Chandan Shetty | Shine Shetty | Nivedita

  'ಬಿಗ್ ಬಾಸ್ ಸೀಸನ್-5' ವಿನ್ನರ್ ಚಂದನ್ ಶೆಟ್ಟಿ ಸದ್ಯ ಮದುವೆ ಸಂಭ್ರಮದಲ್ಲಿ ಇದ್ದಾರೆ. 'ಬಿಗ್ ಬಾಸ್ ಸೀಸನ್-5'ನ ಸಹ ಸ್ಪರ್ಧಿ ನಿವೇದಿತಾ ಗೌಡ ಜೊತೆ ಹಸೆಮಣೆ ಏರಲು ಸಿದ್ದರಾಗಿರುವ ಚಂದನ್ ಇತ್ತೀಚಿಗೆ ಬಿಗ್ ಬಾಸ್ ಸೀಸನ್-7ನ ವಿಜೇತ ಶೈನ್ ಶೆಟ್ಟಿಯನ್ನು ಭೇಟಿಯಾಗಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ಶೈನ್ ಗೆ ಗೆಳೆಯ ಚಂದನ್ ಭೇಟಿ ಮತ್ತಷ್ಟು ಖುಷಿ ನೀಡಿದೆ.

  ಅಂದ್ಹಾಗೆ ಚಂದನ್ ಶೆಟ್ಟಿ, ಶೈನ್ ಶೆಟ್ಟಿಯನ್ನು ದಿಢೀರ್ ಭೇಟಿಯಾಗಲು ಕಾರಣ ಮದುವೆ ಆಮಂತ್ರಣ. ಹೌದು, ಚಂದನ್ ಸದ್ಯ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಗಣ್ಯರಿಗೆ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ. ಇಷ್ಟುದಿನಘಲು ಬಿಗ್ ಮನೆಯಲ್ಲಿದ್ದ ಗೆಳೆಯ ಶೈನ್ ಅನ್ನು ಈಗ ಭೇಟಿಯಾಗಿ ಮದುವೆಗೆ ಆಹ್ವಾನಿದ್ದಾರೆ.

  ದರ್ಶನ್ ಜೊತೆಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ: ಭೇಟಿ ಹಿಂದಿನ ರಹಸ್ಯ ಏನು.?ದರ್ಶನ್ ಜೊತೆಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ: ಭೇಟಿ ಹಿಂದಿನ ರಹಸ್ಯ ಏನು.?

  ಶೈನ್ ಮತ್ತು ಚಂದನ್ ಶೆಟ್ಟಿ ಇಬ್ಬರು ಉತ್ತಮ ಗೆಳೆಯರು. ಗೆಳೆಯರಿಬ್ಬರು ಬಹುದಿನಗಳ ನಂತರ ಭೇಟಿಯಾದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. "ಬಿಗ್ ಬಾಸ್-5 ವಿನ್ನರ್ ಚಂದನ್ ಶೆಟ್ಟಿ ಜೊತೆ" ಎಂದು ಬರೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ ಶೈನ್.

  'ಬಿಗ್ ಬಾಸ್' ಕಾರ್ಯಕ್ರಮದಿಂದ ಪರಿಚಯವಾಗಿ, ಪ್ರೇಮಿಗಳಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇದೆ ತಿಂಗಳು ಫೆಬ್ರವರಿ 25 ಮತ್ತು 26 ರಂದು ಹಸೆಮೆಣೆ ಏರುತ್ತಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಚಂದನ್ ಮತ್ತು ನಿವೇದಿತಾ ಮದುವೆ ನಡೆಯಲಿದೆ. ಚಂದನ್ ಶೆಟ್ಟಿ ಆಸೆಯಂತೆ, ನಿವೇದಿತಾ ಗೌಡ ಕನಸಿನಂತೆ ಮದುವೆv ಅದ್ದೂರಿಯಾಗಿ ನಡೆಯಲಿದೆಯಂತೆ.

  English summary
  Bigg Boss season-5 winner Chandan Shetty invited Shine Shetty to the wedding. chandan shetty tie the knot to niveditha gowda on february 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X