28 ಮಕ್ಕಳನ್ನು ದತ್ತು ಪಡೆದ 'ಬಿಗ್ ಬಾಸ್ 6' ವಿನ್ನರ್ ಶಶಿ

Recommended Video

Bigg Boss Kannada Season 6: ಮಕ್ಕಳನ್ನು ದತ್ತು ಪಡೆದ 'ಬಿಗ್ ಬಾಸ್ 6' ವಿನ್ನರ್ ಶಶಿ | FILMIBEAT KANNADA

ಶಶಿ ಕುಮಾರ್ 'ಬಿಗ್ ಬಾಸ್ ಸೀಸನ್ 6' ವೀಕ್ಷಕರ ನೆಚ್ಚಿನ ಸ್ಪರ್ದಿಯಾಗಿದ್ದರು. ಆಧುನಿಕ ರೈತ ಅಂತಾನೆ ಖ್ಯಾತಿಗಳಿಸಿರುವ ಶಶಿ ಕೆಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಶಶಿ ಅಭಿನಯದ 'ಕೌಸಲ್ಯಾ ಕಲ್ಯಾಣ' ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ.

ಇದರ ಜೊತೆಗೀಗ ಶಶಿ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಶಶಿ ಒಂದು ಶಾಲೆಯ ಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಆ ಶಾಲೆಯ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಶಶಿ ಸ್ವಂತ ಊರಾದ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯ 28 ಮಕ್ಕಳನ್ನು ಶಶಿ ದತ್ತು ಪಡೆದಿದ್ದಾರೆ. ವಿಶೇಷ ಅಂದ್ರೆ, ಶಶಿ ಓದಿ ಆಡಿ ಬೆಳೆದಿರುವ ಶಾಲೆಯಾಗಿದೆ. ಹಾಗಾಗಿ ಮತ್ತಷ್ಟು ಕಾಳಜಿಯಿಂದ ಈ ಶಾಲೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಶಾಲೆಯ ಋಣ ತೀರಿಸುತ್ತಿದ್ದಾರೆ.

bigg boss season 6 winner shashi kumar adapted 28 childrens

ವಿಧ್ಯಾಭ್ಯಾಸ, ಯೂನಿಫಾರ್ಮ್ ಸೇರಿದಂತೆ ಮಕ್ಕಳ ಶಾಲಾ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಶಶಿ ವಹಿಸಿಕೊಂಡಿದ್ದಾರೆ. ಸದ್ಯ 28 ಮಕ್ಕಳನ್ನು ದತ್ತು ಪಡೆದಿರುವ ಶಶಿ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಶಶಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಸದ್ಯ ಎರಡನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಶಶಿ ಸಿನಿಮಾ ಜೊತೆಗೆ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ಇದರ ನಡುವೆ ಈಗ ಹೊಸ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಮತ್ತಷ್ಟು ಬ್ಯುಸಿಯಾಗಿದ್ದಾರೆ.

More from Filmibeat

English summary
Bigg Boss season 6 winner Shashi Kumar adapted 28 children in one school. He is caring their education and all needs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X