For Quick Alerts
  ALLOW NOTIFICATIONS  
  For Daily Alerts

  ನಟ ಶ್ರೀಮುರಳಿ ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್

  |

  ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ವಿನ್ನರ್ ಶಶಿ ಕುಮಾರ್ ಈಗ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಜನಸಾಮಾನ್ಯರದ್ದು. ಮಾಡರ್ನ್ ರೈತ ಎಂದು ಗುರುತಿಸಿಕೊಂಡಿದ್ದ ಶಶಿ ಬಿಗ್ ಬಾಸ್ ಮನೆಯಲ್ಲಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಬಿಗ್ ಬಾಸ್ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡ ನಂತರ ಶಶಿ ಸ್ಯಾಂಡಲ್ ವುಡ್ ನ ಕೆಲವು ನಟರನ್ನು ಭೇಟಿಯಾಗುತ್ತಿದ್ದಾರೆ.

  ಇತ್ತೀಚಿಗಷ್ಟೇ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿರುವ ಶಶಿ, 'ಶ್ರೀಮುರುಳಿ ಅವರನ್ನ ಮಾತನಾಡಿಸಿರುವುದು ಸಂತಸ ತಂದಿದೆ' ಎಂದು ಹೇಳಿಕೊಂಡಿದ್ದಾರೆ.

  ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.! ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!

  ಶ್ರೀಮುರಳಿ ಅವರನ್ನ ಭೇಟಿಯಾಗಿರುವುದು ಶಶಿ ಫಾಲೋವರ್ಸ್ ಗೆ ಕುತೂಹಲ ಮೂಡಿಸಿದೆ. ಯಾಕಂದ್ರೆ ಶ್ರೀಮುರಳಿ ಸಿನಿಮಾದಲ್ಲಿ ಶಶಿ ಏನಾದರೂ ಅಭಿನಯಿಸ್ತಾರಾ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

  ಪರೀಕ್ಷೆಗಾಗಿ ಚಿತ್ರೀಕರಣಕ್ಕೆ ರಜೆ ಹಾಕಿದ ಭರಾಟೆ ನಾಯಕಿಪರೀಕ್ಷೆಗಾಗಿ ಚಿತ್ರೀಕರಣಕ್ಕೆ ರಜೆ ಹಾಕಿದ ಭರಾಟೆ ನಾಯಕಿ

  ಈ ಬಗ್ಗೆ ಹೇಳಿಕೊಂಡಿರುವ ಶಶಿ ಸಿನಿಮಾ ಬಗ್ಗೆ ಪ್ರಸ್ತಾಪಿಸಿಲ್ಲ. ಆದ್ರೆ ಕೃಷಿಗೆ ಸಂಬಂಧ ಪಟ್ಟ ಒಂದಿಷ್ಟು ವಿಚಾರಗಳನ್ನು ಶ್ರೀ ಮುರಳಿ ಜೊತೆ ಚರ್ಚೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಶ್ರೀ ಮುರಳಿ ತುಂಬ ಸರಳ ವ್ಯಕ್ತಿ, ಚೆನ್ನಾಗಿ ಮಾತನಾಡಿದ್ರು ಎಂದು ಮೆಚ್ಚಿಕೊಂಡಿದ್ದಾರೆ.

  ಸದ್ಯ ಭರಾಟೆ ಸಿನಿಮಾ ಮಾಡ್ತಿರುವ ಶ್ರೀಮುರಳಿ ಅದಾದ ಬಳಿಕ ಮದಗಜ ಎಂಬ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಇನ್ನೊಂದೆಡೆ ಶಶಿಕುಮಾರ್ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಅವಕಾಶ ಸಿಕ್ಕರೇ ಸಿನಿಮಾದಲ್ಲು ನಟಿಸುವೆ ಎಂದು ಇಂಗಿತ ವ್ಯಕ್ತಪಡಿಸಿದ್ದರು.

  English summary
  Bigg Boss kannada season 6 winner Shashi Kumar has meet roaring star sri murali. and he shared some photos in instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X