ಅನ್ನ ತಿನ್ನುವವರು ರೈತ ಹೋರಾಟದ ಪರ ನಿಲ್ಲಬೇಕು: ಬಿಗ್‌ಬಾಸ್ ಶಶಿ

ಕೃಷಿ ಕಾಯ್ದೆ ವಿರೋಧಿಸಿ ರೈತರು ಮಾಡುತ್ತಿರುವ ಪ್ರತಿಭಟನೆಗೆ ಬೆಂಬಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ.

ಕನ್ನಡದ ನಟರು ಸಹ ನಿಧಾನಕ್ಕೆ ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ.

ನಿನ್ನೆ ನಟ ಚೇತನ್ ಅಹಿಂಸಾ ಕೃಷಿ ಹೋರಾಟದ ಪರವಾಗಿ ಟ್ವೀಟ್ ಮಾಡಿದ್ದರು. ನಟ ಪ್ರಕಾಶ್ ರೈ ಸಹ ರೈತ ಹೋರಾಟವನ್ನು ಬೆಂಬಲಿಸಿದ್ದರು. ಇಂದು ಶಿವರಾಜ್ ಕುಮಾರ್ ರೈತ ಹೋರಾಟದ ಪರ ನಿಲ್ಲುವುದಾಗಿ ಹೇಳಿದ್ದಾರೆ.

Bigg Boss Shashi Participated In Farmers Protest

ಇದೀಗ ಬಿಗ್‌ಬಾಸ್ ಖ್ಯಾತಿಯ ಶಶಿ, ರೈತ ಹೋರಾಟದ ಪರ ನಿಂತಿದ್ದು, ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ, 'ಅನ್ನ-ತರಕಾರಿ ತಿನ್ನುವ ಪ್ರತಿಯೊಬ್ಬರು, ರೈತ ಹೋರಾಟವನ್ನು ಬೆಂಬಲಿಸಬೇಕು' ಎಂದಿದ್ದಾರೆ.

ಕಳೆದ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೆವು, ಆದರೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಲಿಲ್ಲ. ಈ ಸರ್ಕಾರವು ತನಗೆ ತೋಚಿದ್ದೆ ಸರಿ ಎಂಬ ಧೋರಣೆಯೊಂದಿಗೆ ಮುಂದೆ ಸಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಶಶಿ.

Recommended Video

ಒಂದೇ ಸಿನಿಮಾದಲ್ಲಿ ಕುರಿ, ಶಿವರಾಜ್ K R ಪೇಟೆ, ರವಿಶಂಕರ್ | Filmibeat Kannada

ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸಿ, ಕಾಯ್ದೆಯಲ್ಲಿನ ನಕಾರಾತ್ಮಕ ಅಂಶಗಳನ್ನು ತೆಗೆದು ಸಕಾರಾತ್ಮಕ ಅಂಶಗಳನ್ನು ಉಳಿಸಿಕೊಂಡರೆ, ಕೇಂದ್ರ ಸರ್ಕಾರಕ್ಕೂ ಸೂಕ್ತ, ರೈತರಿಗೂ ಸೂಕ್ತ ಎಂದಿದ್ದಾರೆ ಶಶಿ.

More from Filmibeat

English summary
Bigg Boss fame Shashi participated in farmers protest against central government. He said everyone should support farmers protest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X