For Quick Alerts
  ALLOW NOTIFICATIONS  
  For Daily Alerts

  ಇನ್ನೂ ಮೊದಲ ಸಿನಿಮಾ ಮುಗಿದಿಲ್ಲ, ಅಷ್ಟು ಬೇಗ ಇನ್ನೊಂದು ಚಾನ್ಸ್ ಪಡೆದ ಶ್ರುತಿ.!

  By Harshitha
  |
  ಶೃತಿ ಪ್ರಕಾಶ್ ಹೊಸ ಸಿನಿಮಾ ಯಾವುದು ಗೊತ್ತಾ..! | Filmibeat Kannada

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಸ್ಪರ್ಧಿಗಳ ಪೈಕಿ ಶ್ರುತಿ ಪ್ರಕಾಶ್ ಕೂಡ ಒಬ್ಬರು. ಮುದ್ದು ಮುದ್ದಾಗಿ ಇರುವ ಶ್ರುತಿ ಪ್ರಕಾಶ್ ನೋಡಿ ಹರೆಯದ ಹುಡುಗರು ಕ್ಲೀನ್ ಬೌಲ್ಡ್ ಆಗಿದ್ದರು.

  ಅದಾಗಲೇ, 'ಇಶ್ಕ್ ಅನ್ ಪ್ಲಗ್ಡ್' ಹಾಗೂ 'ಸಾಥ್ ನಿಭಾನಾ ಸಾಥಿಯಾ'ದಲ್ಲಿ ಕಾಣಿಸಿಕೊಂಡು ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಶ್ರುತಿ ಪ್ರಕಾಶ್ ಗೆ ಕನ್ನಡ ಚಿತ್ರರಂಗದಲ್ಲಿ ಮಿಂಚುವ ಆಸೆ ಇತ್ತು.

  ಶ್ರುತಿ ಪ್ರಕಾಶ್ ದನಿಯಲ್ಲಿ ಮುಂಜಾನೆ ಮಂಜಲ್ಲಿ.., ಸುದೀಪ್ ಗೆ ಖುಷಿಯೋ ಖುಷಿ.! ಶ್ರುತಿ ಪ್ರಕಾಶ್ ದನಿಯಲ್ಲಿ ಮುಂಜಾನೆ ಮಂಜಲ್ಲಿ.., ಸುದೀಪ್ ಗೆ ಖುಷಿಯೋ ಖುಷಿ.!

  ನಟಿ ಹಾಗೂ ಗಾಯಕಿ ಕೂಡ ಆಗಿರುವ ಶ್ರುತಿ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುವ ಬಯಕೆಯನ್ನ 'ಬಿಗ್ ಬಾಸ್' ವೇದಿಕೆ ಮೇಲೆ ವ್ಯಕ್ತಪಡಿಸಿದ್ದರು. ನಿರೀಕ್ಷೆಯಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಕೂಡಲೆ ಶ್ರುತಿ ಪ್ರಕಾಶ್ ಗೆ ಕನ್ನಡ ಚಿತ್ರರಂಗದ ಕಡೆಯಿಂದ ಬುಲಾವ್ ಬಂತು.

  'ಲಂಡನ್ನಲ್ಲಿ ಲಂಬೋಧರ' ಚಿತ್ರದಲ್ಲಿ ಅಭಿನಯಿಸುವ ಅವಕಾಶ ಶ್ರುತಿ ಪ್ರಕಾಶ್ ಗೆ ಸಿಕ್ತು. ಸದ್ಯ ಇದೇ ಸಿನಿಮಾದ ಚಿತ್ರೀಕರಣದಲ್ಲಿ ಶ್ರುತಿ ಪ್ರಕಾಶ್ ಬಿಜಿಯಾಗಿದ್ದಾರೆ. ಶ್ರುತಿ ಪ್ರಕಾಶ್ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ ಇನ್ನೂ ಬಿಡುಗಡೆ ಆಗಿಲ್ಲ. ಅಷ್ಟು ಬೇಗ ಎರಡನೇ ಸಿನಿಮಾಗೆ ಕಾಲ್ ಶೀಟ್ ನೀಡಿದ್ದಾರೆ.

  ಸ್ಟಾರ್ ನಿರ್ದೇಶಕನ ಚಿತ್ರಕ್ಕೆ 'ಬಿಗ್ ಬಾಸ್' ಶ್ರುತಿ ಪ್ರಕಾಶ್ ನಾಯಕಿ.!ಸ್ಟಾರ್ ನಿರ್ದೇಶಕನ ಚಿತ್ರಕ್ಕೆ 'ಬಿಗ್ ಬಾಸ್' ಶ್ರುತಿ ಪ್ರಕಾಶ್ ನಾಯಕಿ.!

  ನವ ನಿರ್ದೇಶಕ ರಾಮ್ ವಿನಯ್ ಗೌಡ ಆಕ್ಷನ್ ಕಟ್ ಹೇಳುತ್ತಿರುವ 'ಫಿದಾ' ಚಿತ್ರಕ್ಕೆ ಶ್ರುತಿ ಪ್ರಕಾಶ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಶ್ರುತಿ ಪ್ರಕಾಶ್ ಜೊತೆಗೆ ಹೀರೋ ಆಗಿ ಹರ್ಷನ್ ಗೌಡ ಕಾಣಿಸಿಕೊಳ್ಳಲಿದ್ದಾರೆ. 2009 ರಲ್ಲಿ ಮೈಸೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಸದ್ಯದಲ್ಲಿಯೇ ಸೆಟ್ಟೇರಲಿದೆ.

  English summary
  Shruthi Prakash of Bigg Boss Kannada 5 fame bags her second Kannada Film 'Fidaa'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X