'ಶ್ರೀ ಭರತ ಬಾಹುಬಲಿ' ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿದ ಶ್ರುತಿ ಪ್ರಕಾಶ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಶ್ರುತಿ ಪ್ರಕಾಶ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವುದು ನಿಮಗೆಲ್ಲಾ ಗೊತ್ತೇ ಇದೆ.
ನಟಿ ಕಮ್ ಗಾಯಕಿ ಆಗಿರುವ ಶ್ರುತಿ ಪ್ರಕಾಶ್ ಅದಾಗಲೇ 'ಇಶ್ಕ್ ಅನ್ ಪ್ಲಗ್ಡ್' ಹಾಗೂ 'ಸಾಥ್ ನಿಭಾನಾ ಸಾಥಿಯಾ'ದಲ್ಲಿ ಕಾಣಿಸಿಕೊಂಡು ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದರು. 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುವ ಆಸೆ ಶ್ರುತಿ ಪ್ರಕಾಶ್ ಗಿತ್ತು.
'ಬಿಗ್ ಬಾಸ್' ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೆ, ಶ್ರುತಿ ಪ್ರಕಾಶ್ ಗೆ ಅವಕಾಶಗಳು ಹುಡುಕಿಕೊಂಡು ಬಂದ್ವು. 'ಲಂಡನ್ನಲ್ಲಿ ಲಂಬೋಧರ' ಚಿತ್ರದ ಮೂಲಕ ಶ್ರುತಿ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಈಗಾಗಲೇ 'ಲಂಡನ್ನಲ್ಲಿ ಲಂಬೋಧರ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಈ ನಡುವೆ 'ರಂಗಮಂದಿರ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿರುವ ಶ್ರುತಿ ಪ್ರಕಾಶ್ ಕೈಯಲ್ಲಿ 'ಫಿದಾ' ಎಂಬ ಚಿತ್ರ ಕೂಡ ಇದೆ. 'ತಕಧಿಮಿತಾ' ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಶ್ರುತಿ ಪ್ರಕಾಶ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಹೀಗಿರುವಾಗಲೇ, ಮತ್ತೊಂದು ಅವಕಾಶ ಶ್ರುತಿ ಪ್ರಕಾಶ್ ರನ್ನ ಹುಡುಕಿಕೊಂಡು ಬಂದಿದೆ. ಮಂಜು ಮಾಂಡವ್ಯ ನಿರ್ದೇಶನದ-ಅಭಿನಯದ 'ಶ್ರೀ ಭರತ ಬಾಹುಬಲಿ' ಚಿತ್ರದಲ್ಲಿ ಶ್ರುತಿ ಪ್ರಕಾಶ್ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ.
'ಶ್ರೀ ಭರತ ಬಾಹುಬಲಿ' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಶ್ರುತಿ ಪ್ರಕಾಶ್ ಸೊಂಟ ಬಳುಕಿಸಲಿದ್ದು, ಇದೇ ಸೋಮವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ನಲ್ಲಿ, 'ಬಿಗ್ ಬಾಸ್' ಮುಗಿದ್ಮೇಲೆ ಶ್ರುತಿ ಪ್ರಕಾಶ್ ಮಾತ್ರ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.


Click it and Unblock the Notifications











