ಫಾರೀನ್ ಹುಡುಗ ರಾಯನ್ ಜೊತೆ ಬಿಗ್ ಬಾಸ್ ಸ್ನೇಹಾಗೆ ಲವ್ ಆಗಿದ್ದೇಗೆ.?

Recommended Video

Bigg Boss Kannada Season 6 : Sneha Acharya reveals about her fiance

ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ಮುದ್ದು ಚೆಲುವೆ ಸ್ನೇಹಾ ಆಚಾರ್ಯ ಮೂರೇ ವಾರಕ್ಕೆ ಮನೆಯಿಂದ ಹೊರಬಂದಿದ್ದರು. ಬಿಗ್ ಮನೆಗೆ ಹೋಗುವುದಕ್ಕೂ ಮುಂಚೆಯೇ ಮದುವೆ ಬಗ್ಗೆ ಖಚಿತಪಡಿಸಿದ್ದ ಸ್ನೇಹಾ ಈಗ ಮದುವೆ ತಯಾರಿಯಲಿದ್ದಾರೆ.

ಸ್ನೇಹಾ ಆಚಾರ್ಯ ಮದುವೆ ಆಗ್ತಿರೋದು ವಿದೇಶಿ ಹುಡುಗನ ಜೊತೆ. ಅಂದ್ಹಾಗೆ, ಸ್ನೇಹಾ ಮತ್ತು ರಾಯನ್ ಅವರದ್ದು ಒಂದು ಥ್ರಿಲ್ಲಿಂಗ್ ಲವ್ ಸ್ಟೋರಿ. ಈ ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ, ಹೇಗೆ ಮದುವೆಯಾಗಿ ಬದಲಾಯ್ತು, ಯಾರು ಮೊದಲು ಪ್ರಪೋಸ್ ಮಾಡಿದ್ರು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

ಹೌದು, ಕನ್ನಡ ಫಿಲ್ಮಿಬೀಟ್ ಜೊತೆ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಸ್ನೇಹಾ ಆಚಾರ್ಯ, ತಾವು ಮದುವೆಯಾಗಲಿರುವ ಹುಡುಗನ ಬಗ್ಗೆ ಮತ್ತು ತಮ್ಮ ಲವ್ ಸ್ಟೋರಿ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಸ್ನೇಹಾಗೆ ರಾಯನ್ ಫಿದಾ ಆಗಿದ್ದು ಎಲ್ಲಿ.? ಮುಂದೆ ಓದಿ......

ನ್ಯೂಯಾರ್ಕ್ ಮೂಲದ ವ್ಯಕ್ತಿ

ನ್ಯೂಯಾರ್ಕ್ ಮೂಲದ ವ್ಯಕ್ತಿ

ರಾಯನ್ ಕೊಪ್ಕೊ ಮೂಲತಃ ನ್ಯೂಯಾರ್ಕ್. ಕೆಲಸದ ಕಾರಣ ಬೆಂಗಳೂರಿಗೆ ಬಂದಿದ್ದರು. ತಮ್ಮ ಕಂಪನಿಯ ಅಭಿವೃದ್ದಿಗಾಗಿ ಬೆಂಗಳೂರಿನಲ್ಲಿ ಎರಡು ವರ್ಷ ಇರಲು ನಿರ್ಧರಿಸಿ ಬಂದಿದ್ದರು. ಆಗಾಗಲೇ ಅಂದುಕೊಂಡಂತೆ ಒಂದು ಮುಕ್ಕಾಲು ವರ್ಷ ಕಳೆದಿದ್ದರು. ಕೊನೆಯ ಎರಡು ತಿಂಗಳಲ್ಲಿ ಅಚಾನಕ್ ಆಗಿ ಪರಿಚಯವಾಗಿದ್ದೇ ಈ ಸ್ನೇಹಾ.

ಸಾಲ್ಸಾ ಡ್ಯಾನ್ಸ್ ನೋಡಿ ಫಿದಾ ಆಗಿದ್ದ ರಾಯನ್

ಸಾಲ್ಸಾ ಡ್ಯಾನ್ಸ್ ನೋಡಿ ಫಿದಾ ಆಗಿದ್ದ ರಾಯನ್

ಸ್ನೇಹಾ ಅವರು ಸಾಲ್ಸಾ ಡ್ಯಾನ್ಸ್ ಮಾಡಬೇಕಾದರೇ ಅವರನ್ನ ನೋಡಿದ ರಾಯನ್ ಮೊದಲ ನೋಟದಲ್ಲೇ ಫಿದಾ ಆಗಿದ್ದರಂತೆ. ನಂತರ ಸ್ನೇಹಾ ಬಳಿ ಬಂದು 'ನಾನು ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ' ಎಂದು ಕೇಳಿದ್ದಾರೆ. ನಾನು ಓಕೆ ಎಂದೆ. ಆಮೇಲೆ ಅವರಿಗೆ ಡ್ಯಾನ್ಸ್ ಬರಲ್ಲ ಎನ್ನುವುದು ಸ್ನೇಹಾ ಗೊತ್ತಾಯಿತಂತೆ. ನಂತರ ಸ್ನೇಹಾ ಅವರ ಸೀನಿಯರ್ ಒಬ್ಬರನ್ನ ತೋರಿಸಿ, 'ನೀವು ಅವರ ಬಳಿ ಡ್ಯಾನ್ಸ್ ಕಲಿತು ಬನ್ನಿ, ಆಮೇಲೆ ನನ್ನ ಜೊತೆ ಡ್ಯಾನ್ಸ್ ಮಾಡಬಹುದು' ಎಂದಿದ್ದರಂತೆ.

ಮಕ್ಕಳಿಗೆ ಇಂಗ್ಲೀಷ್ ಕಲಿಸಲು ಒಬ್ಬರು ಬೇಕಿದ್ದರು.

ಮಕ್ಕಳಿಗೆ ಇಂಗ್ಲೀಷ್ ಕಲಿಸಲು ಒಬ್ಬರು ಬೇಕಿದ್ದರು.

''ರಾಯನ್ ಸ್ಟಾಂಡ್ ಅಪ್ ಕಾಮಿಡಿ ಮಾಡ್ತಾರೆ. ಅವರ ಶೋಗಳನ್ನ ನೋಡಿದ್ದೇನೆ. ಅಲ್ಲಿಗೆ ಮುಖಪರಿಚಯವಿದ್ದ ಕಾರಣ, ಸಿಕ್ಕಾಗ ಹಾಯ್, ಬಾಯ್ ಎನ್ನುತ್ತಿದ್ವಿ. ನಂತರ ಕಾಫಿ, ಟೀ, ತಿಂಡಿಗೆ ಅಂತ ಕರಿತಿದ್ದರು. ಹೀಗೆ, ಒಮ್ಮೆ ಮಕ್ಕಳಿಗೆ ನಾಟಕ ಹೇಳಿಕೊಡುವಾಗ, ಒಂದು ಪಾತ್ರ ಬೇಕಿತ್ತು. ಇಂಗ್ಲೀಷ್ ಕಲಿಸುವ ವ್ಯಕ್ತಿ. ಆಗ ನನಗೆ ಇವರು ಕಾಣಿಸಿದ್ರು. ಹೌದು, ಈ ಪಾತ್ರಕ್ಕೆ ಇವರನ್ನೇ ಯಾಕೆ ಬಳಸಿಕೊಳ್ಳಬಾರದು ಅಂತ. ಆಮೇಲೆ ಕೇಳಿದೆ. ಮಾಡ್ತೀನಿ ಅಂದ್ರು. ಅಲ್ಲಿಂದ ಪರಸ್ಪರ ಇಬ್ಬರು ಟೈಂ ಕಳೆಯುವುದಕ್ಕೆ ಅವಕಾಶ ಸಿಕ್ತು''

ಡೈರಿ ಬರೆಯುವ ಅಭ್ಯಾಸ ಇತ್ತು

ಡೈರಿ ಬರೆಯುವ ಅಭ್ಯಾಸ ಇತ್ತು

ರಾಯನ್ ಗೆ ಡೈರಿ ಬರೆಯುವ ಅಭ್ಯಾಸವಿದೆ. ಅವರ ಡೈರಿ ಯಾವಾಗಲೂ ಅವರ ಜೊತೆಯಲ್ಲೇ ಇರುತ್ತೆ. ಒಮ್ಮೆ ಹೀಗೆ, ನನಗೆ ಸಿಕ್ತು. ಅದನ್ನ ತಗೊಂಡು ಮನೆಗೆ ಹೋದೆ. ಓದೋಕೆ ಶುರುಮಾಡಿದೆ. ಅಲ್ಲಿ ನೋಡಿದ್ರೆ, ನನಗೆ ಶಾಕ್. ಆ ಡೈರಿಯಲ್ಲಿ ನನ್ನ ಬಗ್ಗೆ ಪ್ರತಿಯೊಂದನ್ನ ಬರೆದಿದ್ದರು. ನನ್ನನ್ನು ಭೇಟಿಯಾಗಿದ್ದು, ನನ್ನ ಜೊತೆ ಮಾತನಾಡಿದ್ದು, ಎಲ್ಲವೂ ಆ ಡೈರಿಯಲ್ಲಿತ್ತು. ಅದನ್ನ ನೋಡಿ ನನಗೆ ನಿಜಕ್ಕೂ ಮೈಜುಂ ಅಂತು''

ನನಗೋಸ್ಕರ ಸಮಯ ವಿಸ್ತಾರ ಮಾಡಿಕೊಂಡ್ರು

ನನಗೋಸ್ಕರ ಸಮಯ ವಿಸ್ತಾರ ಮಾಡಿಕೊಂಡ್ರು

ಅವರು ಬೆಂಗಳೂರಿನಲ್ಲಿ ಎರಡು ವರ್ಷ ಇರಬೇಕೆಂದುಕೊಂಡಿದ್ದರು. ಆದ್ರೆ, ಅಷ್ಟೋತ್ತಿಗಾಗಲೇ ಟೈಂ ಆಗಿತ್ತು. ಆಮೇಲೆ ನನಗೋಸ್ಕರ ಇನ್ನು ಒಂದು ವರ್ಷ ಇಲ್ಲೇ ಉಳಿಯಲು ನಿರ್ಧಾರ ಮಾಡಿದ್ರು. ಅದು ಆ ಡೈರಿಯಿಂದ ನನಗೆ ಗೊತ್ತಾಯಿತು. ಆಮೇಲೆ ನಾನು ಜರ್ನಲ್ ಓದಿದ್ದು ಗೊತ್ತಾಯಿತು. ಆಮೇಲೆ ಅದಾಗಿ ಲವ್ ಅಪ್ರೋಚ್ ಆಯ್ತು'' ಎಂದು ಸ್ನೇಹಾ ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟರು.

ಮದುವೆ ಯಾವಾಗ.?

ಮದುವೆ ಯಾವಾಗ.?

ಅಂದ್ಹಾಗೆ, ರಾಯನ್ ಮತ್ತು ಸ್ನೇಹಾ ಆಚಾರ್ಯ ಅವರ ಮದುವೆ ನವೆಂಬರ್ 25 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮೈಸೂರು ರಸ್ತೆಯಲ್ಲಿರುವ 'ಎಂಸಿರಿ ಕನ್ವೆನ್ಷನ್ ಹಾಲ್'ನಲ್ಲಿ ಮದುವೆ ಜರುಗಲಿದೆ.

More from Filmibeat

English summary
Bigg Boss Kannada 6 Contestant Sneha Acharya is getting married & she reveals about her fiance. Here is the Exclusive Interview of Sneha Acharya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X