»   » 'ತಮಿಳು ಬಿಗ್ ಬಾಸ್' ಬೆನ್ನಲ್ಲೆ 'ತೆಲುಗು ಬಿಗ್ ಬಾಸ್'ಗೂ ಕಂಟಕ

'ತಮಿಳು ಬಿಗ್ ಬಾಸ್' ಬೆನ್ನಲ್ಲೆ 'ತೆಲುಗು ಬಿಗ್ ಬಾಸ್'ಗೂ ಕಂಟಕ

Posted By:
Subscribe to Filmibeat Kannada

'ತೆಲುಗು ಬಿಗ್‌ಬಾಸ್‌' ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಟ ಜೂನಿಯರ್ ಎನ್‌.ಟಿ.ಆರ್ ನಿರೂಪಣೆ ಮಾಡುತ್ತಿರುವ ಬಿಗ್‌ ಬಾಸ್‌ ಈಗಾಗಲೇ ತೆಲುಗಿನಲ್ಲಿ ಹೆಚ್ಚು ಟಿ.ಆರ್.ಪಿ ಪಡೆಯುತ್ತಿರುವ ಕಾರ್ಯಕ್ರಮ ಎನ್ನಲಾಗಿದೆ. ಹೀಗಿರುವಾಗ, ತೆಲುಗು ಬಿಗ್ ಬಾಸ್ ಶೋಗೆ ಕಾನೂನು ಕಂಟಕ ಎದುರಾಗಿದೆ.

'ಬಾಲಲ ಹಕ್ಕುಲು ಸಂಘಂ' ಎಂಬ ಸಂಘಟನೆ ಕಾರ್ಯಕರ್ತ ಅಚ್ಯುತ್ ರಾವ್‌ ಎಂಬುವರು, ಬಿಗ್‌ ಬಾಸ್‌ ಶೋ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ 'ಮಾನವ ಹಕ್ಕುಗಳ ಆಯೋಗ'ಕ್ಕೆ ದೂರು ಸಲ್ಲಿಸಿದ್ದಾರೆ.

Bigg Boss Telugu is facing legal troubles

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳನ್ನು ಟಾಸ್ಕ್ ಹೆಸರಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಗಂಟೆಗಳ ಕಾಲ ಊಟವಿಲ್ಲದೇ ಉಪವಾಸವಿರುವಂತೆ ಮಾಡಲಾಗುತ್ತಿದೆ. ಸ್ಪರ್ಧಿಗಳ ಬಾಯಿಗೆ ಪ್ಲಾಸ್ಟಿಕ್ ಅಂಟಿಸಲಾಗುತ್ತಿದೆ. ಈಜುಕೊಳದಲ್ಲಿ 50 ಬಾರಿ ಮುಳುಗಿ ಏಳುವಂತಹ ಚಿತ್ರ ವಿಚಿತ್ರ ಟಾಸ್ಕ್ ನೀಡಲಾಗುತ್ತಿದೆ ಎಂದು ಅಚ್ಯುತ್ ಕುಮಾರ್ ದೂರಿದ್ದಾರೆ.

ಈ ದೂರನ್ನು ವಿಚಾರಣೆಗೆ ಸ್ವೀಕರಿಸಿರುವ ಆಯೋಗ, ಈ ಕುರಿತು ಸಮಗ್ರ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಪೊಲೀಸ್‌ ಕಮಿಷನರ್‌ಗೆ ಆದೇಶಿಸಿದೆ ಎಂದು ತೆಲುಗು ಪತ್ರಿಕೆಗಳು ವರದಿ ಮಾಡಿವೆ. ಇದಕ್ಕು ಮುಂಚೆ ತಮಿಳು ಬಿಗ್ ಬಾಸ್ ವಿರುದ್ಧವು ಮಾನವ ಹಕ್ಕುಗಳ ಅಯೋಗದಲ್ಲಿ ದೂರು ದಾಖಲಾಗಿತ್ತು. ನಂತರ ಹಿಂದೂ ಪರ ಸಂಘಟನೆಗಳು ಈ ಕಾರ್ಯಕ್ರವನ್ನ ವಿರೋಧಿಸಿದ್ದರು.

ಒಟ್ನಲ್ಲಿ, ಚೊಚ್ಚಲ ಬಾರಿಗೆ ಆರಂಭವಾಗಿರುವ ತೆಲುಗು ಹಾಗೂ ತಮಿಳು ಬಿಗ್ ಬಾಸ್ ಕಾರ್ಯಕ್ರಮಗಳು ಬಾರಿ ವಿವಾದಕ್ಕೆ ಗುರಿಯಾಗಿರುವುದಂತೂ ಆರಂಭಿಕ ಹಿನ್ನೆಡೆ ಎನ್ನಲಾಗುತ್ತಿದೆ.

English summary
Balala Hakkula Sangham activist Achyuth Rao had filed a complaint against Bigg Boss to The Human Rights Commission commission.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada