ಜೈಲಿನಲ್ಲಿ ನಟ ದರ್ಶನ್ ಭೇಟಿ ಬಗ್ಗೆ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ರಿಯಾಕ್ಷನ್

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನೆಯ ಒಂದೊಂದೇ ಸಿನಿಮಾ ಬಿಡುಗಡೆ ಆಗ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ 'ಡೆವಿಲ್' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ದರ್ಶನ್ ಜೊತೆ ಸಣ್ಣದೊಂದು ಪಾತ್ರದಲ್ಲಿ ಗಿಲ್ಲಿ ಮಿಂಚಿದ್ದರು. ಈ ವಾರ 'ಸರ್ಕಾರಿ ಶಾಲೆ ಹೆಚ್‌8' ಎಂಬ ಸಿನಿಮಾ ತೆರೆಗೆ ಬಂದಿದೆ. 'ಸೂಪರ್ ಹಿಟ್' ಎಂಬ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

'ಸೂಪರ್ ಹಿಟ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ನಟ ಭಾಗಿ ಆಗಿದ್ದರು. ಈ ವೇಳೆ ಸಾಕಷ್ಟು ಪ್ರಶ್ನೆಗಳಿಗೆ ಗೊಂದಲಗಳಿಗೆ ಗಿಲ್ಲಿ ತೆರೆ ಎಳೆದರು. ಅಭಿಮಾನಿಗಳು ಭೇಟಿ ಮಾಡ್ತಿಲ್ಲ ಎನ್ನುತ್ತಿರುವ ಆರೋಪ ಯಾಕೆ? 'ಸರ್ಕಾರಿ ಶಾಲೆ ಹೆಚ್‌8' ಚಿತ್ರದ ಪ್ರಚಾರದಲ್ಲಿ ಯಾಕೆ ಭಾಗಿ ಆಗಲಿಲ್ಲ? ಹೀಗೆ ಹಲವು ಪ್ರಶ್ನೆಗಳು ಎದುರಾಗಿದೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು.

Bigg Boss Winner Gilli nata Opens Up on actor Darshan Jail Visit Attempt

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣದ ಟ್ರಯಲ್ ಆರಂಭವಾಗಿದೆ. ಸದ್ಯಕ್ಕೆ ಬೇಲ್ ಸಿಗುವುದು ಅನುಮಾನ ಎನ್ನುವ ಚರ್ಚೆ ನಡೀತಿದೆ.

'ಡೆವಿಲ್' ಸಿನಿಮಾ ಇನ್ನು ನೋಡಿಲ್ಲ. ಶೀಘ್ರದಲ್ಲೇ ಸಿನಿಮಾ ನೋಡುವ ಆಸೆಯಿದೆ. "ದರ್ಶನ್ ಸರ್ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯನಾ? ಎಂದು ಕೇಳಿ ನೋಡ್ದೆ. ಸದ್ಯಕ್ಕೆ ಆ ಅವಕಾಶ ಇಲ್ಲ ಅಂದ್ರು. ಪ್ರಯತ್ನಿಸಿದ್ದು ನಿಜ. ದರ್ಶನ್ ಅಣ್ಣನನ್ನು ಜೈಲಿನಲ್ಲಿ ನೋಡುವುದಕ್ಕಿಂತ ಅವರ ಮನೆಯಲ್ಲಿ ನೋಡಬೇಕು. ಮನೆಗೆ ಹೋಗಿ ಆಶೀರ್ವಾದ ಪಡೆಯಬೇಕು ಎನ್ನುವುದು ನನ್ನ ಆಸೆ" ಎಂದು ಗಿಲ್ಲಿ ತಿಳಿಸಿದ್ದಾರೆ.

Bigg Boss Winner Gilli nata Opens Up on actor Darshan Jail Visit Attempt

'ಡೆವಿಲ್' ಸಿನಿಮಾ ನೋಡುವಾಗ ನನ್ನ ದೃಶ್ಯಗಳನ್ನು ಪ್ರೇಕ್ಷಕರು ಎಂಜಾಯ್ ಮಾಡಿದ್ರು ಎಂದು ಗೊತ್ತಾಯ್ತು. ಛೇ, ಈ ಸಮಯದಲ್ಲಿ ನಾನು ಹೊರಗಡೆ ಇರಬೇಕು, ಚಿತ್ರಮಂದಿರದಲ್ಲಿ ಕೂತು ಅದನ್ನೆಲ್ಲಾ ಎಂಜಾಯ್ ಮಾಡಬೇಕಿತ್ತು ಎಂದು ಅನ್ನಿಸಿದ್ದು ನಿಜ. ಆ ವಿಚಾರಕ್ಕೆ ಬೇಸರವಾಯಿತು. ಹೊರಗಡೆ ಬಂದ ಮೇಲೆ ಫೋನ್ ಅಲ್ಲಿ ಆ ವಿಡಿಯೋಗಳನ್ನು ನೋಡಿ ಬಹಳ ಖುಷಿಯಾಯಿತು ಎಂದು ಗಿಲ್ಲಿ ಹೇಳಿದ್ದಾರೆ.

ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ತೆರೆಗೆ ಬಂದಿತ್ತು. 50 ದಿನ ಪೂರೈಸಿದೆ. ಈವರೆಗೆ ಸಿನಿಮಾ ಓಟಿಟಿಗೆ ಬಂದಿಲ್ಲ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವೀಕೆಂಡ್ ಓಟಿಟಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ದರ್ಶನ್ ಜೈಲು ಸೇರಿದ್ದರಿಂದ ತಡವಾಗಿತ್ತು.

2015ರ ಜೂನ್‌ 8ರಂದು ದರ್ಶನ್ ಜೈಲು ಸೇರಿದ್ದರು. ಅಕ್ಟೋಬರ್ 30ರಂದು ಜಾಮೀನು ಪಡೆದು ಹೊರಬಂದಿದ್ದರು. ಅದಕ್ಕೂ ಮುನ್ನ ಚಿತ್ರದ ಒಂದು ಶೆಡ್ಯೂಲ್ ಚಿತ್ರೀಕರಣ ಮಾತ್ರ ನಡೆದಿತ್ತು. ಜೈಲಿನಿಂದ ಹೊರ ಬಂದ ಬಳಿಕ ಕೊಂಚ ವಿಶ್ರಾಂತಿ ಪಡೆದು 'ಡೆವಿಲ್' ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸಾಂಗ್ ಶೂಟ್‌ಗಾಗಿ ವಿದೇಶಕ್ಕೂ ಹೋಗಿ ಬಂದಿದ್ದರು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಮತ್ತೆ 2025ರ ಆಗಸ್ಟ್ 14ರಂದು ಜೈಲು ಸೇರುವಂತಾಯಿತು. ಅಷ್ಟರಲ್ಲಿ ಚಿತ್ರದ ಶೂಟಿಂಗ್, ಡಬ್ಬಿಂಗ್ ಎಲ್ಲಾ ಮುಗಿಸಿದ್ದರು.

'ಡೆವಿಲ್' ಚಿತ್ರದಲ್ಲಿ ಗಿಲ್ಲಿ ಅವರ ಕಾಮಿಡಿ ಟ್ರ್ಯಾಕ್ ಇದೆ. ಕಥೆಯಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲದಿದ್ದರು. ಇದ್ದಷ್ಟು ಹೊತ್ತು ತಮ್ಮ ಕಾಮಿಡಿ ಮೂಲಕ ಗಿಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. 'ಡೆವಿಲ್' ಚಿತ್ರೀಕರಣದ ವೇಳೆ ದರ್ಶನ್ ಸರ್ ಬಹಳ ಸರಳವಾಗಿ ನಡೆದುಕೊಂಡಿದ್ದರು. ನನ್ನ ಕಾಮಿಡಿ ಬಗ್ಗೆ ಮೆಚ್ಚಿ ಮಾತನಾಡಿದ್ದರು ಎಂದು ಸಂದರ್ಶನಗಳಲ್ಲಿ ಗಿಲ್ಲಿ ಹೇಳಿದ್ದಾರೆ.

More from Filmibeat

Read more about: gilli darshan devil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X