ತಂದೆ, ತಾಯಿ ಏನ್ ಮಾಡ್ತಿದ್ದಾರೆ, ಎಷ್ಟು ಜನ ಅಣ್ಣ-ತಮ್ಮಂದಿರು; ಗಿಲ್ಲಿ- ಸಿಎಂ ಸಿದ್ದರಾಮಯ್ಯ ಮಾತುಕತೆ

ಬಿಗ್‌ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಕಳೆದ 3 ದಿನಗಳಿಂದ ಬರೀ ಸುತ್ತಾಟ. ಮನೆಗೂ ಹೋಗದಷ್ಟು ಬ್ಯುಸಿಯಾಗಿಬಿಟ್ಟಿದ್ದಾರೆ. ವಿಜಯೋತ್ಸವ ಬಳಿಕ ಮಾಧ್ಯಮಗಳ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ನಟ ಶಿವರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಗಿಲ್ಲಿ ಮಾತನಾಡಿ ಬಂದಿದ್ದರು. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೋಡಿ ಪೂಜೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ಮನೆಗೂ ತೆರಳಿ ಮಾತನಾಡಿಸಿ ಬಂದಿದ್ದರು. ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಹಿಡಿದು ಸುತ್ತಾಡುತ್ತಿದ್ದಾರೆ. ವಿಧಾನಸೌಧಕ್ಕೆ ತೆರಳಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಬಂದಿದ್ದಾರೆ. ಈ ವೇಳೆ ಇಬ್ಬರ ನಡುವಿನ ಮಾತುಕತೆ ಮಜವಾಗಿತ್ತು. ಆ ವೀಡಿಯೋ ವೈರಲ್ ಆಗ್ತಿದೆ. ಸಚಿವ ಭೈರತಿ ಸುರೇಶ್ ಈ ವೇಳೆ ಹಾಜರಿದ್ದರು.

Bigg Boss Winner Gilli s Fun Chat With CM Siddaramaiah Goes Viral Fame Reaches New High

ಸಿಎಂ ಭೇಟಿ ವೇಳೆ ಅಲ್ಲಿದ್ದವರು ಗಿಲ್ಲಿ ಅವರನ್ನು ಪರಿಚಯಿಸಿದ್ದಾರೆ. ಮಳವಳ್ಳಿಯವನು ಎಂದು ಗೊತ್ತಾಗುತ್ತಿದ್ದಂತೆ "ಓಹ್ ಶಿವಣ್ಣನ ಊರಿನವನಾ?" ಎಂದು ಸಿದ್ದರಾಮಯ್ಯ ಕೇಳಿದ್ದಾರೆ. "ಹೌದು ಸರ್" ಎಂದು ಗಿಲ್ಲಿ ತಲೆ ಆಡಿಸಿದ್ದಾರೆ. "ಶಿವಣ್ಣ ಊರಿನ ಕಡೆಗೆ ಬರ್ತಾರಾ?" ಎನ್ನುವ ಪ್ರಶ್ನೆಗೆ "ಆಗಾಗ್ಗೆ ಬರ್ತಾರೆ ಸರ್" ಎಂದು ಗಿಲ್ಲಿ ಹೇಳಿದ್ದಾರೆ. "ಸರವಣ 20 ಲಕ್ಷ ರೂ. ಕೊಟ್ನಾ" ಎಂದು ಸಿದ್ಧರಾಮಯ್ಯ ಕೇಳಿದ್ದು ಇಲ್ಲ ಸರ್ ರನ್ನರ್ ಅಪ್ ರಕ್ಷಿತಾಗೆ ಕೊಟ್ರು ಎಂದು ಗಿಲ್ಲಿ ವಿವರಿಸಿದ್ದಾರೆ.

"ತಂದೆ, ತಾಯಿ ಏನ್ ಮಾಡ್ತಿದ್ದಾರೆ, ನೀವು ಎಷ್ಟು ಜನ ಅಣ್ಣ-ತಮ್ಮಂದಿರು" ಎಂದು ಸಿಎಂ ಪ್ರಶ್ನಿಸಿದ್ದಾರೆ. ತಂದೆ ತಾಯಿ ಊರಿನಲ್ಲಿ ವ್ಯವಸಾಹ ಮಾಡ್ಕೊಂಡಿದ್ದಾರೆ. ನಾನು ನಮ್ಮ ಅಣ್ಣ, ಇಬ್ರು. ಅಣ್ಣ ಇಲ್ಲೇ ಇದ್ದಾನೆ ಎಂದು ಕರೆದು ಪರಿಚಯಿಸಿದ್ದು ಆತ ಕೂಡ ಸಿಎಂ ಆಶೀರ್ವಾದ ಪಡೆದಿದ್ದಾರೆ. ಬಳಿಕ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಗಿಲ್ಲಿಗೆ 40 ಕೋಟಿ ವೋಟ್ ಸಿಕ್ಕಿದೆ ಎಂದು ಪಕ್ಕದಲ್ಲಿ ಇದ್ದವರು ಹೇಳಿದ್ದು, ವೋಟ್‌ಗಿಂತ ಬಹಳ ಜನಪ್ರಿಯತೆ ಸಿಕ್ಕಿದೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. "ಒಳ್ಳೆ ಹುಡುಗ ಸರ್, ಎಲ್ಲರನ್ನು ನಗಿಸ್ತಿದ್ದ. ನಮ್ಮ ಪತ್ನಿ ಕೂಡ ಬಿಗ್‌ಬಾಸ್ ನೋಡ್ತಿದ್ರು. ಈತನ ಫ್ಯಾನ್ ಆಕೆ" ಎಂದು ಸಿಎಂ ಮುಂದೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಆ ಮಾತಿಗೆ ಎಲ್ಲರೂ ನಕ್ಕಿದ್ದಾರೆ. "ಮುಂದೆ ಸಿನ್ಮಾ ಮಾಡ್ತೀಯಾ" ಎಂದು ಸುರೇಶ್ ಕೇಳಿದ್ದು "ನೋಡಬೇಕು ಸರ್" ಎಂದು ಗಿಲ್ಲಿ ಹೇಳಿರುವುದು ವೈರಲ್ ಆಗ್ತಿದೆ.

ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ಗಿಲ್ಲಿ ನಟಿಸಿದ್ದಾರೆ. ಮುಂದೆ ಸಿನಿಮಾ ನಿರ್ದೇಶಕನಾಗುವ ಕನಸು ಕಂಡಿದ್ದಾರೆ. ಬಿಗ್‌ಬಾಸ್ ಶೋನಲ್ಲಿ ಗೆದ್ದ ಹಣದಿಂದ ಜಮೀನು ಖರೀದಿಸಿ ವ್ಯವಸಾಯ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾ ಫಾಲೋಯಿಂಗ್ ಜಾಸ್ತಿ ಆಗ್ತಿದೆ. ಈ ಹಿಂದೆ ಬಿಗ್‌ಬಾಸ್ ಟ್ರೋಫಿ ಗೆದ್ದವರಲ್ಲಿ ಯಾರಿಗೂ ಸಿಗದ ನೇಮು ಫೇಮು ಗಿಲ್ಲಿಗೆ ಸಿಗುತ್ತಿದೆ.

ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 19 ಲಕ್ಷಕ್ಕೂ ಹೆಚ್ಚು ಜನ ಗಿಲ್ಲಿನ ಫಾಲೋ ಮಾಡ್ತಿದ್ದಾರೆ. ಶೀಘ್ರದಲ್ಲೇ ಇದು 20 ಲಕ್ಷ ದಾಟುವಂತಿದೆ ಕಾಣ್ತಿದೆ. 3 ತಿಂಗಳ ಹಿಂದೆ 1 ಲಕ್ಷ ಫಾಲೋವರ್ಸ್ ಹೊಂದಿದ್ದರು. ಈಗ ಎಲ್ಲವೂ ಬದಲಾಗಿದೆ. ಗಿಲ್ಲಿ ಹಾಕುವ ಒಂದೊಂದು ಪೋಸ್ಟ್‌ಗೆ ಲಕ್ಷ ಲಕ್ಷ ಲೈಕ್ಸ್ ಸಿಗುತ್ತಿದೆ.

More from Filmibeat

Read more about: gilli bigg boss 12 politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X