For Quick Alerts
  ALLOW NOTIFICATIONS  
  For Daily Alerts

  ದುಬಾರಿ ಬೆಲೆಯ ಕಾರು ಖರೀದಿಸಿದ ಮಾರ್ಡನ್ ರೈತ ಶಶಿ

  |

  ಬಿಗ್ ಬಾಸ್ ಮೂಲಕ ಖ್ಯಾತಿಗಳಿಸಿರುವ ಶಶಿ ಕುಮಾರ್ ದುಬಾರಿ ಬೆಲೆಯ ಕಾರು ಖರೀದಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಜನಸಾಮಾನ್ಯರ ವಿಭಾಗದಿಂದ ಸ್ಪರ್ಧಿಸಿ ಬಿಗ್ ಬಾಸ್ ಸೀಸನ್ 6ರಲ್ಲಿ ಗೆಲುವು ಸಾಧಿಸಿದ್ದ ಶಶಿ ಕುಮಾರ್ ಮಿನಿ ಕೂಪರ್ ಕಾರನ್ನು ಖರೀದಿಸಿದ್ದಾರೆ. ಆಧುನಿಕ ಕೃಷಿ ಪದ್ಧತಿ ಮೂಲಕ ಶಶಿ ಕುಮಾರ್ ಹೆಚ್ಚು ಜನಪ್ರಿಯರಾಗಿದ್ದಾರೆ.

  ಬಿಗ್ ಬಾಸ್ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿರುವ ಶಶಿ ಕೃಷಿಯನ್ನು ಬಿಟ್ಟಿಲ್ಲ. ಕೃಷಿ ಮತ್ತು ಸಿನಿಮಾ ಎರಡರಲ್ಲೂ ಶಶಿ ಬ್ಯುಸಿಯಾಗಿದ್ದಾರೆ. ಇದೀಗ ತನ್ನ ಕನಸಿನ ಮಿನಿ ಕೂಪರ್ ಖರೀದಿಸಿರುವ ಶಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಕಾರು ಇದಾಗಿದ್ದು, ಕಾರಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

  ಹೊಸ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್: ಬೆಲೆ ಎಷ್ಟು ಗೊತ್ತೆ?ಹೊಸ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್: ಬೆಲೆ ಎಷ್ಟು ಗೊತ್ತೆ?

  'ನನ್ನ ಕನಸಿನ ಕಾರುಗಳಲ್ಲಿ ಒಂದಿರುವ ಮಿನಿ ಕೂಪರ್ ನನ್ನ ಪಾರ್ಕಿಂಗ್ ಸೇರಿದೆ. ನನ್ನ ಮೊದಲ ಕಾರು ಓಮಿನಿ. ಆದರೀಗ ಕೇವಲ ಮಿನಿ' ಎಂದು ಬರೆದುಕೊಂಡಿದ್ದಾರೆ.

  ಶಶಿ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕಾಮೆಂಟ್ ಮಾಡಿ ಶುಭವಾಗಲಿ..ಬನ್ನಿ ಒಂದು ರೌಂಡ್ ಹೋಗಿ ಬರೋಣ ಎಂದು ಹೇಳಿದ್ದಾರೆ. ಇನ್ನು ನಟ ಕಬೀರ್ ದುಹಾನ್ ಸಿಂಗ್ ಕೂಡ ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

  ಇತ್ತೀಚಿಗಷ್ಟೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಕಾರು ಖರೀದಿಸಿದ ಬಗ್ಗೆ ಸುದ್ದಿಯಾಗಿದೆ. ಕಿರುತೆರೆ ನಟರಾದ ಕಿರಣ್ ರಾಜ್, ಚಂದು ಗೌಡ ಸೇರಿದಂತೆ ಅನೇಕರು ದುಬಾರಿ ಬೆಲೆಯ ಕಾರು ಖರೀದಿಸಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇದೀಗ ನಟ ಶಶಿ ಕೂಡಸೇರಿಕೊಂಡಿದ್ದಾರೆ.

  Troll ಆಯ್ತು ರಶ್ಮಿಕಾ ಅವರ ಬೋಳುತಲೆಯ ಫೋಟೋ | Filmibeat Kannada

  ಶಶಿ ಸದ್ಯ ಮೆಹಬೂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ಬಳಿಕ ಶಶಿ ಸಹಿ ಮಾಡಿದ ಸಿನಿಮಾವಿದು. ಚಿತ್ರಕ್ಕೆ ಅನೂಪ್ ಆಂಟೋನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದಲ್ಲದೇ ಶಶಿ ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ.

  English summary
  Bigg Boss winner shashi kumar bought his dream car. Shashi shares a new car Photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X