Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ 'ಗಲ್ಲಿ ಕಿಚನ್' ಫುಡ್ ಟ್ರಕ್ ಪ್ರಾರಂಭಿಸಿದ 'ಬಿಗ್ ಬಾಸ್' ವಿನ್ನರ್ ಶೈನ್ ಶೆಟ್ಟಿ
ಕಿರುತೆರೆ ನಟ ಮತ್ತು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಫುಡ್ ಟ್ರಕ್ ನಡೆಸುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಬೆಳ್ಳಿ ಪರದೆ ಮೇಲೆ ಮಿಂಚುವ ಆಸೆಯಿಂದ ಕಿರುತೆಯಿಂದ ಹೊರಬಂದು, ಅವಕಾಶಗಳಿಲ್ಲದೆ ಕಂಗಾಲಾಗಿದ್ದ ಶೈನ್ ಗೆ ಜೀವನದ ದಾರಿ ತೋರಿಸಿದ್ದು ಇದೇ ಫುಡ್ ಟ್ರಕ್. ಶೈನ್ ಶೆಟ್ಟಿ ಫುಡ್ ಟ್ರಕ್ ಒಳ್ಳೆಯ ವ್ಯಾಪಾರದೊಂದಿಗೆ ನಡೆಯುತ್ತಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದ ಸುಮಾರು 4 ತಿಂಗಳುಗಳ ಕಾಲ ಫುಡ್ ಟ್ರಕ್ ಮುಚ್ಚಲಾಗಿತ್ತು.
Recommended Video
ಇದೀಗ ಹೊಸತನದ ಮೂಲಕ ಮತ್ತೆ ಶೈನ್ ಶೆಟ್ಟಿ 'ಗಲ್ಲಿ ಕಿಚನ್' ಫುಡ್ ಟ್ರಕ್ ಪ್ರಾರಂಭವಾಗಿದೆ. ಬಿಗ್ ಬಾಸ್ ಗೆ ತೆರಳಿದ ಬಳಿಕ ಅವರ ತಾಯಿ ಈ ಫುಡ್ ಟ್ರಕ್ ನಿಭಾಯಿಸಿಕೊಂಡು ಹೋಗುತ್ತಿದ್ದರು. ಬಳಿಕ ಲಾಕ್ ಡೌನ್ ನಿಂದ ಮುಚ್ಚಿದ್ದ ಗಲ್ಲಿ ಕಿಚನ್ ಅನ್ನು ಅದ್ದೂರಿಯಾಗಿ ಪ್ರಾರಂಭವಾಗಿದೆ.
ರಿಷಬ್
ಶೆಟ್ಟಿ
ಚಿತ್ರದಲ್ಲಿ
ಶೈನ್
ಶೆಟ್ಟಿ:
ಬಿಗ್
ಬಾಸ್
ವಿನ್ನರ್ಗೆ
ಒಲಿದ
ಪ್ರಮುಖ
ಪಾತ್ರ?
ಗಲ್ಲಿ ಕಿಚನ್ ಪ್ರಾರಂಭಿಸಿದ ಖುಷಿಯನ್ನು ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಳೆಯ ಗಲ್ಲಿ ಕಿಚನ್ ಗಿಂತ ಹೊಸ ಗಲ್ಲಿ ಕಿಚನ್ ದೊಡ್ಡದಾಗಿದೆ. ಹೊಸ ರೂಪದಲ್ಲಿ ಬಂದಿರುವ ಗಲ್ಲಿ ಕಿಚನ್ ಅನ್ನು ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ.
ಈ ಸಂಭ್ರಮದಲ್ಲಿ ಶೈನ್ ಶೆಟ್ಟಿ ಸ್ನೇಹಿತರು ಮತ್ತು ಬಿಗ್ ಬಾಸ್ ಸ್ಪರ್ಧಿಗಳು ಭಾಗಿಯಾಗಿದ್ದರು. ಚೈತ್ರ ವಾಸುದೇವನ್, ಚಂದನ್ ಆಚಾರ್, ಚಂದನಾ ಅನಂತಕೃಷ್ಣ ಸೇರಿದ್ದಂತೆ ಅನೇಕರು ಶೈನ್ ಶೆಟ್ಟಿ ಹೊಸ ಫುಡ್ ಟ್ರಕ್ ಗೆ ಶುಭಹಾರೈಸಿದ್ದಾರೆ.

ಬಿಗ್ ಬಾಸ್ ಗೆದ್ದ ಬಳಿಕ ಶೈನ್ ಶೆಟ್ಟಿ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು, ಅಭಿಮಾನಿ ಬಳಗವೂ ಹೆಚ್ಚಾಗಿದೆ. ಶೈನ್ ಶೆಟ್ಟಿ ಸದ್ಯ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ 'ರುದ್ರ ಪ್ರಯಾಗ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಗೆ ಇದೀಗ ಮತ್ತೆ ಫುಡ್ ಟ್ರಕ್ ಪ್ರಾರಂಭಿಸಿರುವ ಶೈನ್ ಶೆಟ್ಟಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.