ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಅಕ್ಷತಾ ಪಾಂಡವಪುರ

ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 15 ರಂದು ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ನಟಿ ಅಕ್ಷತಾ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಅಕ್ಷತಾ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಗತಿ ಹಂಚಿಕೊಂಡ ನಂತರ ಅನೇಕರು ಶುಭಾಶಯ ಕೋರಿದ್ದಾರೆ. ಗರ್ಭಿಣಿ ಸಂದರ್ಭ ಫೋಟೋ ಶೇರ್ ಮಾಡಿರುವ ಅಕ್ಷತಾ ಅದರ ಮೇಲೆ 'ಲಕ್ಷ್ಮಿ' ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾಳೆ.

ಕಳೆದ ತಿಂಗಳು ಪತಿಯ ಜೊತೆಗಿನ ಸೀಮಂತದ ಫೋಟೋ ಹಂಚಿಕೊಂಡಿದ್ದ ಅಕ್ಷತಾ ''ಕಳೆದ 8 ತಿಂಗಳಿಗಿಂತ ಬರುವ 1 ತಿಂಗಳ ಮೇಲೇನೆ ಹೆಚ್ಚು ಪ್ರೀತಿ.. ಈ ಬಾರಿಯ ಹೊಸವರ್ಷದ ನಿರೀಕ್ಷೆಗೆ ನಮ್ಮಿಬ್ಬರಿಗೂ ಒಳಗಿರುವ ಜೀವವೇ ಕಾರಣ..'' ಎಂದು ಪೋಸ್ಟ್ ಹಾಕಿದ್ದರು.

Biggboss Fame Akshatha Pandavapura Welcomed Baby Girl

ಅಂದ್ಹಾಗೆ, ರಂಗಭೂಮಿ ಕಲಾವಿದೆ ಅಕ್ಷತಾ ಅವರ ಪತಿ ರಂಗ ನಿರ್ದೇಶಕ ಪ್ರಸನ್ನ ಸಾಗರ್. ಮೂಲತಃ ಸಾಗರದವರು. ಇವರಿಬ್ಬರದ್ದು ಲವ್ ಮ್ಯಾರೇಜ್. ಏಂಟು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದಾರೆ.

ಅಕ್ಷತಾ ಮೂಲತಃ ಪಾಂಡವಪುರದ ಹುಡುಗಿ. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಅವರು ನಂತರ ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡರು.

'ಒಬ್ಬಳು' ಅಕ್ಷತಾ ಪಾಂಡವಪುರ ಅವರ ಇತ್ತೀಚಿಗಿನ ನಾಟಕ. ಈ ನಾಟಕ ಏಕ ವ್ಯಕ್ತಿ ಪ್ರದರ್ಶನವಾಗಿದ್ದು, ಸುಮಾರು 30ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಪ್ರಸನ್ನ ಡಿ ಈ ನಾಟಕದ ನಿರ್ದೇಶನ ಮಾಡಿದ್ದಾರೆ. ಇದು ಅಕ್ಷತಾರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ. ನಾಟಕಗಳ ಜೊತೆ ಜೊತೆಗೆ ಸಿನಿಮಾಗಳಲ್ಲಿಯೂ ಅಕ್ಷತಾ ಅಭಿನಯಿಸಿದ್ದಾರೆ. 'ಪಲ್ಲಟ' ಎನ್ನುವ ಸಿನಿಮಾದ ನಟನೆಗೆ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಎಸ್ ಪಿ ರಘು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.

More from Filmibeat

English summary
Bigg boss kannada Fame Akshatha Pandavapura welcomed Baby Girl on january 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X