For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ 'ಬಿಗಿಲ್' ಗಳಿಕೆ ಎಷ್ಟು?

  |

  ಭಾರತೀಯ ಚಿತ್ರಗಳಿಗೆ ಕರ್ನಾಟಕ ನೆಚ್ಚಿನ ರಾಜ್ಯ. ಬಿಸಿನೆಸ್ ಲೆಕ್ಕಾಚಾರದಲ್ಲಿ ಎಲ್ಲ ಭಾಷೆಯ ಚಿತ್ರಗಳಿಗೂ ಫೆವರೆಟ್. ಅದನ್ನ ತಮಿಳು ಸಿನಿಮಾ ಬಿಗಿಲ್ ಮತ್ತೆ ಸಾಬೀತು ಮಾಡಿದೆ.

  ಹೌದು, ಮೊದಲ ದಿನ ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ ಬಿಗಿಲ್ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ಕನ್ನಡದ ಕೆಲವು ಸ್ಟಾರ್ ನಟರ ಚಿತ್ರಗಳು ಕೂಡ ಈ ಮಟ್ಟಿಗೆ ಗಳಿಕೆಯನ್ನ ಮೊದಲ ದಿನ ಕಾಣುವುದಿಲ್ಲ.

  ಹೌದು, ತಮಿಳಿನಲ್ಲಿ ಬಿಗಿಲ್ ಹಾಗೂ ತೆಲುಗಿನಲ್ಲಿ ವಿಜಿಲ್ ಎಂಬ ಹೆಸರಿನಲ್ಲಿ ಕರ್ನಾಟಕದಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಮೊದಲ ದಿನ ಒಟ್ಟಾರೆ 4.12 ಕೋಟಿ ಗಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

  'ಸರ್ಕಾರ್' ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಸೋತ 'ಬಿಗಿಲ್''ಸರ್ಕಾರ್' ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಸೋತ 'ಬಿಗಿಲ್'

  ದಕ್ಷಿಣ ಚಿತ್ರರಂಗದ ಖ್ಯಾತ ಚಿತ್ರ ವಿಶ್ಲೇಶಕ ರಮೇಶ್ ಬಾಲ ಈ ಬಗ್ಗೆ ಟ್ವೀಟ್ ಮಾಡಿದ್ದು, 2019ರಲ್ಲಿ ತೆರೆಕಂಡ ಚಿತ್ರಗಳ ಪೈಕಿ, ಕರ್ನಾಟಕದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಬಿಗಿಲ್ ಎಂದು ತಿಳಿಸಿದ್ದಾರೆ.

  'ಬಿಗಿಲ್' ಬಗ್ಗೆ ನೆಗಿಟಿವ್ ಪ್ರಚಾರಕ್ಕೆ ಇಳಿದ್ರಾ ಆ ಸ್ಟಾರ್ ನಟನ ಅಭಿಮಾನಿಗಳು?'ಬಿಗಿಲ್' ಬಗ್ಗೆ ನೆಗಿಟಿವ್ ಪ್ರಚಾರಕ್ಕೆ ಇಳಿದ್ರಾ ಆ ಸ್ಟಾರ್ ನಟನ ಅಭಿಮಾನಿಗಳು?

  ಒಟ್ಟಾರೆ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಬಿಗಿಲ್ ನಿರೀಕ್ಷೆಯ ಗಳಿಕೆ ಕಂಡಿಲ್ಲ ಎನ್ನುವುದು ವಿಜಯ್ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಖ್ಯಾತ ವಿಮರ್ಶಕರು ಹಂಚಿಕೊಂಡಿರುವ ಪ್ರಕಾರ, ಮೊದಲ ದಿನ ಬಿಗಿಲ್ ಸಿನಿಮಾ 22 ಕೋಟಿ ಗಳಿಕೆ ಕಂಡಿದೆ.

  ಥೇರಿ, ಮೆರ್ಸಲ್ ಚಿತ್ರಗಳ ನಂತರ ಅಟ್ಲಿ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಬಂದಿರುವ ಮೂರನೇ ಸಿನಿಮಾ ಬಿಗಿಲ್. ವಿಜಯ್ ಗೆ ನಾಯಕಿಯಾಗಿ ನಯನತಾರ ಕಾಣಿಸಿಕೊಂಡಿದ್ದಾರೆ.

  English summary
  Tamil actor Vijy starrer Bigil movie 4 crore collected for first day in karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X