»   » ರಕ್ಷಿತ್ ಬೈಕ್ ಕಂಡು ಹುಡುಗಿಯರ ಹಾರ್ಟ್ ಬೀಟ್ ಹೆಚ್ಚಾಯ್ತು

ರಕ್ಷಿತ್ ಬೈಕ್ ಕಂಡು ಹುಡುಗಿಯರ ಹಾರ್ಟ್ ಬೀಟ್ ಹೆಚ್ಚಾಯ್ತು

Posted By:
Subscribe to Filmibeat Kannada
ರಕ್ಷಿತ್ ಶೆಟ್ಟಿ ಬೈಕ್ ನೋಡಿ ಹುಡುಗಿಯರ ಹಾರ್ಟ್ ಬೀಟ್ ಹೆಚ್ಚಾಯ್ತು | Filmibeat Kannada

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಫಸ್ಟ್ ಆಫ್ ನಲ್ಲಿ ಡಿಫ್ರೆಂಟ್ ಆಗಿರುವ ಕಾರ್ ಎಲ್ಲರನ್ನೂ ಆಕರ್ಷಣೆ ಮಾಡಿದರೆ, ಸೆಕೆಂಡ್ ಆಫ್ ನಲ್ಲಿ ಬುಲೆಟ್ ನೋಡಿ ಸಾಕಷ್ಟು ಜನರು ಫಿದಾ ಆಗಿದ್ದರು. ಸಿನಿಮಾದ ಕಾರ್ ಅನ್ನು ಸೇಲ್ ಗೂ ಇಡಲಾಗಿತ್ತು. ಆದ್ರೆ ಬುಲೆಟ್ ಬೈಕ್ ಏನಾಯ್ತು ಅನ್ನುವುದರ ಕಡೆ ಯಾರು ಗಮನ ಹರಿಸಲೇ ಇಲ್ಲ. ಅದು ರಕ್ಷಿತ್ ಶೆಟ್ಟಿ ಅವರ ಬಳಿಯೋ, ರಿಷಬ್ ಶೆಟ್ಟಿ ಅವರ ಹತ್ತಿರ ಇರುತ್ತೆ ಅಂದುಕೊಂಡಿದ್ದರು. ಆದರೆ ಈಗ ಕಿರಿಕ್ ಪಾರ್ಟಿ ಬೈಕ್ ಅವತಾರ ನೋಡಿದ್ರೆ ಮತ್ತೆ ಅದರ ಮೇಲೆ ಲವ್ ಆಗುವುದು ಗ್ಯಾರೆಂಟಿ.

ಸಿನಿಮಾದಲ್ಲಿ ರಕ್ಷಿತ್ ಓಡಿಸಿದ್ದ ಬೈಕ್ ಗೆ ರಾಯಲ್ ಲುಕ್ ಸಿಕ್ಕಿದೆ. ಹಿಂಗೂ ಬೈಕ್ ರೆಡಿ ಮಾಡಿಸಬಹುದಾ ಅನ್ನುವ ಮಟ್ಟಿಗೆ ಬದಲಾಗಿದೆ. ಬಾಟಲ್ ಗ್ರೀನ್ ಕಲರ್ ಇದ್ದ ಬೈಕ್ ಈಗ ರೆಡ್ ಕಲರ್ ಆಗಿ ಬದಲಾಗಿದೆ. ಬುಲೆಟರ್ ಕಸ್ಟಮ್ ಮೋಟಾರ್ ಸೈಕಲ್ ಟೀಂ ರಕ್ಷಿತ್ ಅವರ ಹಿಂದಿನ ಬೈಕ್ ಗೆ ಹೊಸ ಟಚ್ ನೀಡಿದ್ದಾರೆ.

ಇಂದು ಸೆಟ್ಟೇರಿತು 'ಅವನೇ ಶ್ರೀಮನ್ನಾರಾಯಣ' : ಇಂದೇ ಬಿಡುಗಡೆ ದಿನ ಹೇಳಿದ ರಕ್ಷಿತ್

bike used in kirik party movie Rakshith has been given a new look

ಹೊಸದಾಗಿ ಬೈಕ್ ರೆಡಿಯಾಗಿರುವ ಬಗ್ಗೆ ರಕ್ಷಿತ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದು ಬೈಕ್ ನ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಅದಷ್ಟೆ ಅಲ್ಲದೆ ಯುಗಾದಿ ಹಬ್ಬದಂದೆ ಬಂದ ಹೊಸ ಬೈಕ್ ನಲ್ಲಿ ಒಂದು ರೈಡ್ ಕೂಡ ಹೋಗಿ ಬಂದಿದ್ದಾರೆ.

bike used in kirik party movie Rakshith has been given a new look

ಬೈಕ್ ನೋಡಿ ತಕ್ಷಣವೇ ಎಲ್ಲರಿಗೂ ಅದರ ಮೇಲೆ ಲವ್ ಆಗಿದೆ. ಆದರೆ ಅಭಿಮಾನಿಗಳದ್ದು ಒಂದೇ ಒಂದು ಪ್ರಶ್ನೆ ರಕ್ಷಿತ್ ಈಗ ಸಿಂಗಲ್ ಅಲ್ಲ, ಆದರೆ ಬೈಕ್ ಗೆ ಯಾಗಕೆ ಸಿಂಗಲ್ ಸೀಟ್ ಅನ್ನುವುದು. ಆದರೆ ಬೈಕ್ ಪಂಡಿತರು ಹೇಳುವ ಪ್ರಕಾರ ಈ ರೀತಿ ಮಾಡಿಫಿಕೇಷನ್ ಆದ ಬೈಕ್ ಗಳಿಗೆ ಸಿಂಗಲ್ ಸೀಟ್ ಇದ್ದರೆ ಚೆಂದ ಎನ್ನುವುದು. ಒಟ್ಟಾರೆ ರಕ್ಷಿತ್ ಮೇಲೆ ಲವ್ ಆಗಿದ್ದ ಜನರಿಗೆ ಇನ್ನು ಮುಂದೆ ಅವರ ಬೈಕ್ ಮೇಲು ಲವ್ ಆಗುವುದು ಗ್ಯಾರೆಂಟಿ.

ದಾರಿ ಬಿಡಿ 'ಅಯೋಗ್ಯ' ಸತೀಶ ಬರ್ತಾವ್ನೆ

English summary
The bullet bike used in Kannada kirik party has been given a new look. Actor Rakshit Shetty is using the bike to make a Modification for personal use

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X