ಸುದೀಪ್ ಕೆರಿಯರ್ ನಲ್ಲಿಯೇ ಅತಿ ಹೆಚ್ಚು ಬಜೆಟ್ ನ ಚಿತ್ರ 'ಬಿಲ್ಲ ರಂಗ ಬಾಷ'
Recommended Video

ಕಿಚ್ಚ ಸುದೀಪ್ ಸೌತ್ ಸಿನಿ ಇಂಡಸ್ಟ್ರಿಯ ಬ್ಯುಸಿಯಸ್ಟ್ ನಟ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲು ಅಭಿನಯಿಸುತ್ತಿದ್ದಾರೆ. ಸುದೀಪ್ ಅಭಿನಯದ ಮುಂದಿನ ಸಿನಿಮಾ 'ಬಿಲ್ಲ ರಂಗ ಬಾಷ' ಸ್ಯಾಂಡಲ್ ವುಡ್ ನಲ್ಲಿ ಭಾರಿ ಸುದ್ದು ಮಾಡುತ್ತಿದೆ. ಕೇವಲ ಟೈಟಲ್ ಮೂಲಕವೇ ಅಭಿಮಾನಿಗಳ ನಿದ್ದೆ ಗೆಡಿಸಿದ್ದ 'ಬಿಲ್ಲ ರಂಗ ಬಾಷ' ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ.
ಈಗಾಗಲೇ ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳು 'ಬಿಲ್ಲ ರಂಗ ಬಾಷ'ನ ಜಪ ಮಾಡುತ್ತಿದ್ದಾರೆ. ಅದರ ಜೊತೆಗೀಗ ಬಜೆಟ್ ವಿಷಯವಾಗಿ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಹೌದು, ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ ಬರೊಬ್ಬರಿ 75 ಕೋಟಿಗೂ ಅಧಿಕ ಇರಲಿದೆಯಂತೆ. ಅಂದ ಮೇಲೆ, ಸುದೀಪ್ ಸಿನಿಮಾ ಲಿಸ್ಟ್ ಗಳಲ್ಲಿಯೇ 'ಬಿಲ್ಲ ರಂಗ ಬಾಷ' ದೊಡ್ಡ ಮೊತ್ತದ ಸಿನಿಮಾವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನೂ, 'ಬಿಲ್ಲ ರಂಗ ಬಾಷ' ಕಿಚ್ಚನ ಹೋಮ್ ಬ್ಯಾನರ್ ಸುಪ್ರಿಯಾನ್ವಿ ಪಿಕ್ಟರ್ ಸ್ಟೂಡಿಯೋ ನಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರಕ್ಕೆ 'ರಂಗಿತರಂಗ' ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಅನೂಪ್ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ.

ಸುದೀಪ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ 'ಪೈಲ್ವಾನ್' ಚಿತ್ರೀಕರಣ ಮುಗಿಸಿ 'ಕೋಟಿಗೊಬ್ಬ-3' ಚಿತ್ರದಲ್ಲಿ ತೊಡಗಿರುವ ಅಭಿನಯ ಚಕ್ರವರ್ತಿ, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಅಭಿನಯದ 'ದಂಬಾಂಗ್ -3' ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಕಿಚ್ಚ 'ಬಿಲ್ಲ ರಂಗ ಬಾಷ'ನಾಗಿ ಎಂಟ್ರಿ ಕೊಡಲಿದ್ದಾರೆ.


Click it and Unblock the Notifications











