For Quick Alerts
  ALLOW NOTIFICATIONS  
  For Daily Alerts

  40 ಲಕ್ಷ ವೆಚ್ಚದಲ್ಲಿ ಮೂಡಿ ಬರ್ತಿದೆ ಈ ಹಾಡು

  By Bharath Kumar
  |

  ಚಿತ್ರೀಕರಣ ಶುರುವಾದ ಘಳಿಗೆಯಿಂದಲೇ ನಾನಾ ಕಾರಣದಿಂದ ಸದಾ ಸುದ್ದಿಯಲ್ಲಿರುವ ಚಿತ್ರ ಬಿಲ್ ಗೇಟ್ಸ್. ಈ ಚಿತ್ರತಂಡ ಈಗ ಇಡೀ ಗಾಂಧಿನಗರವೇ ತಿರುಗಿ ನೋಡುವಂತೆ ಸದ್ದು ಮಾಡಿದೆ. ಅದಕ್ಕೆ ಕಾರಣವಾಗಿರುವುದು ಸುಮಾರು ನಲವತ್ತು ಲಕ್ಷ ಖರ್ಚು ಮಾಡಿ ತಯಾರಿಸುತ್ತಿರುವ ವಿಶೇಷವಾದ ಹಾಡು.

  ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿ. ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಕ್ಕಳ ಕುರಿತಾದ ಚಿತ್ರ ಎಂಬುದರ ಹೊರತಾಗಿ, ತಾಂತ್ರಿಕವಾಗಿಯೂ ಅದ್ದೂರಿಯಾಗಿರಬೇಕೆಂಬ ಕಾರಣದಿಂದ ಚಿತ್ರತಂಡ ವಿಶೇಷವಾಗಿ ರೂಪಿಸಿದೆ. ಈ ಹಾಡಿನಲ್ಲಿ ಬರೀ ಮಕ್ಕಳೇ ನಟಿಸಿದ್ದಾರಂತೆ. ಇದಕ್ಕೆ ಒಟ್ಟಾರೆಯಾಗಿ ಖರ್ಚು ಮಾಡಿರೋ ಮೊತ್ತ ನಲವತ್ತು ಲಕ್ಷ.

  ಸಾಮಾನ್ಯವಾಗಿ ಮಕ್ಕಳ ಚಿತ್ರಗಳೆಂದರೆ ಖರ್ಚು ಮಾಡಲು ಹಿಂದೇಟು ಹಾಕುವ ನಿರ್ಮಾಪಕರ ನಡುವೆ, ಔಟ್ ಪುಟ್ ಚೆನ್ನಾಗಿರಬೇಕೆಂಬ ಕನಸಿನಿಂದ ಯಥೇಚ್ಚವಾಗಿ ಖರ್ಚು ಮಾಡಿ ಈ ಚಿತ್ರವನ್ನು ರೂಪಿಸುತ್ತಿದ್ದಾರೆ ನಿರ್ಮಾಪಕರು. ಈ ಹಾಡನ್ನು ಮಂಡ್ಯ, ಮಹದೇವಪುರ, ಸೀತಾಪುರ, ಕೊಳ್ಳೇಗಾಲ ಮುಂತಾದೆಡೆಗಳಲ್ಲಿ ಐದು ದಿನಗಳ ಕಾಲ ಕಲೈ ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

  ಇವತ್ತು ಎಷ್ಟೋ ಜನಪದ ಆಟಗಳು ಕಣ್ಮರೆಯಾಗಿವೆ. ಕುಂಟಾಬಿಲ್ಲೆ, ಗೋಲಿಯಿಂದ ಹಿಡಿದು ಪ್ರತಿಯೊಂದೂ ಆಟಗಳನ್ನು ನೆನಪಿಸುವ ಆಟಗಳನ್ನೆಲ್ಲಾ ಸೇರಿಸಿ ಪ್ರತಿಯೊಬ್ಬರನ್ನೂ ತಮ್ಮ ಹಿಂದಿನ ನೆನಪುಗಳಿಗೆ ಕೊಂಡೊಯ್ಯುವಂತಾ ಅಪರೂಪದ ಹಾಡು ಇದಾಗಿದ್ದು ಯುವ ಗೀತಸಾಹಿತಿ ಅರುಣ್ ಇದನ್ನು ಬರೆದಿದ್ದಾರೆ. ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣದಲ್ಲಿ ಮನಮೋಹಕವಾಗಿ ಈ ಹಾಡು ಮೂಡಿಬಂದಿದೆ.

  ಸದ್ಯ, ಪೋಸ್ಟ್ ಪ್ರ್ರೊಡಕ್ಷನ್ ಮುಕ್ತಾಯದ ಹಂತ ತಲುಪಿರುವುದರಿಂದ ಆದಷ್ಟು ಬೇಗನೆ ಈ ಚಿತ್ರ ತೆರೆ ಕಾಣಲಿದೆ. ಜೆ ಮಲ್ಲಿಕಾರ್ಜುನ್ ಅವರ ಸಂಭಾಷಣೆ, ನೋಬಿನ್ ಪಾಲ್ ಅವರ ಸಂಗೀತ, ಮರಿಸ್ವಾಮಿ ಅವರ ಸಂಕಲನ, ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಕಲೈ ಅವರ ನೃತ್ಯ ನಿರ್ದೇಶನ ಇರುವ ಈ ಚಿತ್ರದಲ್ಲಿ ಶಿಶಿರ್ ಶಾಸ್ತ್ರಿ, ರಶ್ಮಿತಾ, ಅಕ್ಷರಾ ರೆಡ್ಡಿ, ಚಿಕ್ಕಣ್ಣ, ಕುರಿ ಪ್ರತಾಪ್, ಯತಿರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

  English summary
  kannada actor shishir shastry, chikkanna starrer billgates movie song shooting start. the movie directed by srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X