For Quick Alerts
  ALLOW NOTIFICATIONS  
  For Daily Alerts

  ಒನ್ ಇಂಡಿಯಾ ಓದುಗರಿಗೆ ಲವ್ಲಿ ಸ್ಟಾರ್ ಪ್ರೇಮ್ ಸಂದೇಶ

  By Rajendra
  |

  ಗುರು ರಾಯರನ್ನು ಆರಾಧಿಸುವವರಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಸಹ ಒಬ್ಬರು. ಈ ಬಾರಿ ಅವರ ಹುಟ್ಟುಹಬ್ಬ ಗುರುವಾರ (ಏಪ್ರಿಲ್ 18) ಬಂದಿರುವುದು ನಿಜಕ್ಕೂ ಅವರ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

  ಈ ಬಾರಿ ತಮ್ಮ 37ನೇ ವಸಂತವನ್ನು ಅವರು ಬೆಂಗಳೂರು ಶೇಷಾದ್ರಿಪುರಂನಲ್ಲಿರುವ ಮಾತೃಶ್ರೀ ಮನೋ ವಿಕಾಸ ಕೇಂದ್ರದ ಮಕ್ಕಳೊಂದಿಗೆ ಆಚರಿಸಿಕೊಂಡರು. ಮಕ್ಕಳು ಅಷ್ಟೇ ತಮ್ಮ ನೆಚ್ಚಿನ ಸ್ಟಾರ್ ನನ್ನು ಕಂಡು ಹಿರಿಹಿರಿ ಹಿಗ್ಗಿದರು.

  ಪ್ರೇಮ್ ಅವರು ಕಳೆದ ಏಳು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಇದೇ ಕೇಂದ್ರದ ಮಕ್ಕಳೊಂದಿಗೆ ಆಚರಿಸಿಕೊಂಡು ಸಂಭ್ರಮಿಸುತ್ತಾ ಬಂದಿದ್ದಾರೆ. ಈ ಬಾರಿ ಅವರು ಮಾತೃಶ್ರೀ ಮನೋ ವಿಕಾಸ ಕೇಂದ್ರ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ.

  ಹುಣ್ಣಿಮೆ 'ಚಂದ್ರ'ನಾಗಿ ಪ್ರೇಕ್ಷಕರ ಮುಂದೆ

  ಹುಣ್ಣಿಮೆ 'ಚಂದ್ರ'ನಾಗಿ ಪ್ರೇಕ್ಷಕರ ಮುಂದೆ

  ಚಾರ್ ಮಿನಾರ್ ಚಿತ್ರದ ಲವ್ಲಿ ಪಾತ್ರದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಈ ಬಾರಿ ಹುಣ್ಣಿಮೆ 'ಚಂದ್ರ'ನಾಗಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ. ಚಂದ್ರ ಚಿತ್ರದ ಬಗೆಗಿನ ನಿರೀಕ್ಷೆಗಳು ಸಾಕಷ್ಟಿವೆ.

  ನಿಮ್ಮ ಪ್ರೀತಿ, ವಿಶ್ವಾಸ ಹೀಗೇ ಇರಲಿ

  ನಿಮ್ಮ ಪ್ರೀತಿ, ವಿಶ್ವಾಸ ಹೀಗೇ ಇರಲಿ

  ಇಂದು ತನ್ನ 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಲವ್ಲಿ ಸ್ಟಾರ್ ಪ್ರೇಮ್, ಒನ್ ಇಂಡಿಯಾ ಓದುಗರಿಗೆ ಸಂದೇಶ ರವಾನಿಸಿದ್ದಾರೆ. ಈ ನಿಮ್ಮ ಪ್ರೇಮ್ ಮೇಲೆ ನಿಮ್ಮ ಪ್ರೀತಿ, ವಿಶ್ವಾಸ ಇದೇ ರೀತಿ ಮುಂದುವರಿಯಲಿ.

  ಮುಂದೆಯೂ ನಿಮ್ಮನ್ನು ರಂಜಿಸುತ್ತೇನೆ

  ಮುಂದೆಯೂ ನಿಮ್ಮನ್ನು ರಂಜಿಸುತ್ತೇನೆ

  ನಿಮ್ಮ ಪ್ರೀತಿ, ಆಶೀರ್ವಾದಗಳಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಭಿನ್ನ ರೀತಿಯ ಚಿತ್ರಗಳ ಕಡೆಗೆ ಗಮನ ಹರಿಸಿ, ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ.

  ಚಿತ್ರರಂಗವನ್ನು ಬೆಳೆಸಿ, ಕಲಾವಿದರನ್ನು ಹರಸಿ

  ಚಿತ್ರರಂಗವನ್ನು ಬೆಳೆಸಿ, ಕಲಾವಿದರನ್ನು ಹರಸಿ

  ಕಲೆಯೇ ನನ್ನ ಜೀವನ ಮತ್ತು ಉಸಿರು. ಕಲಾಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಎಲ್ಲರಿಗೂ ಒಳ್ಳೆದಾಗಲಿ. ಕನ್ನಡ ಚಿತ್ರ ಮತ್ತು ಚಿತ್ರರಂಗವನ್ನು ಬೆಳೆಸಿ, ಕಲಾವಿದರನ್ನು ಹರಸಿ.

  ಈ ಚಿತ್ರಗಳನ್ನು ಮರೆಯಲು ಸಾಧ್ಯವೆ?

  ಈ ಚಿತ್ರಗಳನ್ನು ಮರೆಯಲು ಸಾಧ್ಯವೆ?

  ಪ್ರೇಮ್ ಅಭಿನಯದ ಅತ್ಯುತ್ತಮ ಚಿತ್ರಗಳನ್ನು ಹೆಸರಿಸುವುದಾದರೆ ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು, ಜೊತೆಗಾರ, ಚಾರ್ ಮಿನಾರ್, ಸವಿ ಸವಿ ನೆನಪು ಚಿತ್ರಗಳನ್ನು ಹೆಸರಿಸಬಹುದು.

  English summary
  Lovely Star Prem Kumar celebrates 37th birthday on 18th April. He sends lovely message to Oneindia readers. Art is my life, I continue to act till the last breath. Be encourage Kannada films and bless Kannada artists. He has celebrated his birth day in Mathru Sri Mano Vikas Kendra in Sheshadri Puram. He has adopted 2 children's and from past seven years he use to celebrate his birth day in that vikas kendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X