For Quick Alerts
  ALLOW NOTIFICATIONS  
  For Daily Alerts

  ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು

  By Harshitha
  |

  ಸುದೀಪ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹತ್ತತ್ರ 16 ವರ್ಷಗಳು ಕಳೆದಿವೆ. ಇಲ್ಲಿಯವರೆಗೂ ಅಭಿಮಾನಿಗಳು ಅವರನ್ನ 'ಕಿಚ್ಚ', 'ನಲ್ಲ', 'ರನ್ನ', 'ಅಭಿನಯ ಚಕ್ರವರ್ತಿ' ಅಂತ ಪ್ರೀತಿಯಿಂದ ಕರೆದಿದ್ದಾರೆ.

  ಇವತ್ತು ಕಿಚ್ಚ ಸುದೀಪ್ ಹುಟ್ಟುಹಬ್ಬ. 41ನೇ ವರ್ಷದ ಜನ್ಮದಿನವನ್ನ ತಮ್ಮ ಅಭಿಮಾನಿಗಳೊಂದಿಗೆ ಸುದೀಪ್ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸುದೀಪ್ ಗೆ ಹೊಸ ಬಿರುದು ನೀಡಲಾಗಿದೆ.

  ಅಭಿಮಾನಿಗಳ ಪ್ರೀತಿಯ 'ನಲ್ಲ'ನಿಗೆ 'ಕಲಾಭೂಷಣ' ಅಂತ ನಾಮಕರಣ ಮಾಡಿಲಾಗಿದೆ. ಸುದೀಪ್ ಮನೆ ಮುಂದೆ ಹಾಕಲಾಗಿರುವ ದೊಡ್ಡ ದೊಡ್ಡ ಪೋಸ್ಟರ್ ಗಳಲ್ಲಿ ''ಕಲಾಭೂಷಣ' ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು'' ಅಂತ ಬರೆಯಲಾಗಿದೆ.

  ಇನ್ನೂ ಪ್ರಕಾಶ್ ಜಯರಾಮ್ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಪೋಸ್ಟರ್ ಮತ್ತು 'ಹೆಬ್ಬುಲಿ' ಪೋಸ್ಟರ್ ಗಳಲ್ಲೂ ಸುದೀಪ್ 'ಕಲಾಭೂಷಣ' ಆಗಿದ್ದಾರೆ. [ಕಿಚ್ಚನಿಗೆ 'ಕೋಟಿಗೊಬ್ಬ 2' ತಂಡದಿಂದ ಅಚ್ಚರಿಯ ಗಿಫ್ಟ್]

  sudeep

  ಬರ್ತಡೆ ಪ್ರಯುಕ್ತ ಸುದೀಪ್ ಅವರಿಗೆ ಇದು ಬಿಗ್ ಸರ್ಪ್ರೈಸ್ ಆಗಿದ್ರೆ, ಅವರ ಅಭಿಮಾನಿಗಳಿಗಾಗಿ ಇಂದು ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ 'ಕೋಟಿಗೊಬ್ಬ-2' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ.

  English summary
  Kannada Actor Sudeep is celebrating his 41st birthday today. On this occasion, Sudeep has got new title 'KalaBhushana' from his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X