»   » ಹುಟ್ಟುಹಬ್ಬದಂದು ಸ್ಪೆಷಲ್ ಅಭಿಮಾನಿಯೊಬ್ಬರನ್ನು ಭೇಟಿಯಾದ ದರ್ಶನ್

ಹುಟ್ಟುಹಬ್ಬದಂದು ಸ್ಪೆಷಲ್ ಅಭಿಮಾನಿಯೊಬ್ಬರನ್ನು ಭೇಟಿಯಾದ ದರ್ಶನ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರಿಗೆ ಸಣ್ಣ ವಯಸ್ಸಿನವರಿಂದ ಹಿಡಿದು ಮಧ್ಯವಯಸ್ಸಿನವರೆಗೂ ಅಭಿಮಾನಿಗಳಿದ್ದಾರೆ. ಅಂದು ಕೊಪ್ಪಳದಲ್ಲಿ 6 ವ‍ರ್ಷದ ಪುಟ್ಟ ಅಭಿಮಾನಿ ಅಭಿಷೇಕ್ ಎಂಬ ಹುಡುಗ ದರ್ಶನ್ ತರ ಸ್ಟಂಟ್ಸ್ ಮಾಡಲು ಹೋಗಿ ಕಾಲು ಮುರಿದುಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ.

Birthday Special: Actor Darshan meets his Special fan

ಆ ಸಂದರ್ಭದಲ್ಲೂ ನಟ ದರ್ಶನ್ ಅವರು ಪುಟ್ಟ ಅಭಿಮಾನಿ ಅಭಿಷೇಕ್ ನನ್ನು ಭೇಟಿ ಮಾಡಿ ಆತನ ಆಸೆಯನ್ನು ಈಡೇರಿಸಿದ್ದರು. ಇದೀಗ ದರ್ಶನ್ ಅವರ ಇನ್ನೊಬ್ಬ ಕಟ್ಟಾ ಅಭಿಮಾನಿ ಅಂಗವಿಕಲೆ ಸೌಮ್ಯ ಅವರ ಆಸೆಯನ್ನು ನಟ ದರ್ಶನ್ ಅವರು ತಮ್ಮ ಹುಟ್ಟುಹಬ್ಬದಂದು ನೆರವೇರಿಸಿದ್ದಾರೆ.[ಪುಟ್ಟ ಅಭಿಮಾನಿಯ ಸಂತಸವನ್ನು ಇಮ್ಮಡಿಗೊಳಿಸಿದ ದರ್ಶನ್]

Birthday Special: Actor Darshan meets his Special fan

ಅಂಗವಿಕಲೆಯಾಗಿರುವ ಅಭಿಮಾನಿ ಸೌಮ್ಯ ಮತ್ತು ಅವರ ಇಡೀ ಕುಟುಂಬವನ್ನು ದರ್ಶನ್ ಅವರು ತಮ್ಮ ಮನೆಗೆ ಕರೆಸಿಕೊಂಡು ಆಕೆಯೊಂದಿಗೆ ಮನಬಿಚ್ಚಿ ಮಾತನಾಡಿದ್ದಲ್ಲದೆ, ಆಕೆಯಲ್ಲಿ ಅಡಗಿದ್ದ ಟ್ಯಾಲೆಂಟ್ ಅನ್ನು ಗುರುತಿಸಿದ್ದಾರೆ.

Birthday Special: Actor Darshan meets his Special fan

ಅಂಗವಿಕಲೆಯಾಗಿರುವ ಪುಟ್ಟ ಹುಡುಗಿ ಸೌಮ್ಯ ಅವರು ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ದರ್ಶನ್ ಅವರ ಎಲ್ಲಾ ಸಿನಿಮಾಗಳ ಪೋಸ್ಟರ್ ಮತ್ತು ದರ್ಶನ್ ಅವರ ಬೇರೆ ಬೇರೆ ತರದ ವಿಭಿನ್ನ ಫೊಟೋಗಳನ್ನು ತಮ್ಮ ಪುಸ್ತಕದಲ್ಲಿ ಅಂಟಿಸುವ ಮೂಲಕ ಒಂದು ಅಲ್ಬಂ ತರ ತಯಾರಿಸಿದ್ದಾರೆ.

Birthday Special: Actor Darshan meets his Special fan

ಜೊತೆಗೆ ಅಂಗವಿಕಲೆಯಾಗಿರುವ ಸೌಮ್ಯ ಅವರಿಗೆ ತಮ್ಮ ಕೈಗಳಲ್ಲಿ ಸ್ವಾಧೀನ ಇಲ್ಲದಿದ್ದರೂ ತಮ್ಮ ಕಾಲುಗಳ ಮೂಲಕ ಮೊಬೈಲ್ ಅಪರೇಟ್ ಮಾಡುತ್ತಿದ್ದು, ತಮ್ಮ ಹೆತ್ತವರ ಮೊಬೈಲ್ ತುಂಬಾ ದರ್ಶನ್ ಅವರ ಫೊಟೋಗಳ ಕಲೆಕ್ಷನ್ಸ್ ಇಟ್ಟುಕೊಂಡಿದ್ದಾರೆ.[ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್ ]

Birthday Special: Actor Darshan meets his Special fan

ಪುಟ್ಟ ಅಭಿಮಾನಿಯ ದೊಡ್ಡ ಮಟ್ಟದ ಅಭಿಮಾನಕ್ಕೆ ಮನ ಸೋತ ದರ್ಶನ್ ಅವರಿಗೆ ಹೃದಯ ತುಂಬಿ ಬಂದಿದ್ದು. ಆಕೆಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅವರ ಜೊತೆ ಸಹೋದರ ದಿನಕರ್ ತೂಗುದೀಪ್ ಅವರು ಕೂಡ ಹಾಜರಿದ್ದರು.

ಅಂದಹಾಗೆ ದರ್ಶನ್ ಅವರು ತಮ್ಮ ಪರ್ಸನಲ್ ಮೊಬೈಲ್ ನಂ ಅನ್ನು ಕಟ್ಟಾ ಅಭಿಮಾನಿ ಅಂಗವಿಕಲೆ ಸೌಮ್ಯ ಅವರಿಗೆ ನೀಡಿದ್ದು, ಆಗಾಗ ಮಾತನಾಡುತ್ತಿರುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಒಂದು ಮರೆಯಲಾರದ ಉಡುಗೊರೆಯನ್ನು ಕೂಡ ಸೌಮ್ಯ ಅವರಿಗೆ ನೀಡಿದ್ದಾರೆ.[ಫ್ಯಾನ್ಸ್ ಜೊತೆ ಮಧ್ಯರಾತ್ರಿ ಬರ್ತ್ ಡೇ ಆಚರಿಸಿಕೊಂಡ ದರ್ಶನ್]

Birthday Special: Actor Darshan meets his Special fan

ಇದೇ ಕಾರಣಕ್ಕೆ ದರ್ಶನ್ ಅವರನ್ನು ತುಂಬಾ ಅಭಿಮಾನಿಗಳು ಇಷ್ಟಪಡೋದು. ಅಭಿಮಾನಿಗಳಿಗೋಸ್ಕರ ತಮ್ಮ ಅಮೂಲ್ಯ ಸಮಯಗಳನ್ನು ಮೀಸಲಿಡುವ ನಟ ದರ್ಶನ್ ಅವರು ಸಾವಿರಾರು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

Birthday Special: Actor Darshan meets his Special fan

ಇನ್ನು ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಭರ್ಜರಿಯಾಗಿ ಆಚರಿಸಿಕೊಂಡಿದ್ದು, ಅಭಿಮಾನಿ ಸಂಘದವರು ಎಲ್ಲೆಲ್ಲಿ ಹುಟ್ಟುಹಬ್ಬ ಸಮಾರಂಭವನ್ನು ಆರೇಂಜ್ ಮಾಡಿ ಕರೆದರು ಅಲ್ಲಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. (ಚಿತ್ರಕೃಪೆ: ಡಿ.ಕಂಪೆನಿ)

English summary
Kannada Actor Darshan meet his little Handicapped fan at his Residence. Physically Challenged Girl Sowmya was welcomed by ‪‎Challenging Star Darshan‬ at his Residence. It was a dream Come true Moment for Sowmya's Family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada