For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಪವರ್ ಸ್ಟಾರ್ ಗೆ ಸೆಲೆಬ್ರಿಟಿಗಳಿಂದ ಟ್ವೀಟ್ ವಿಶ್

  By ಸೋನು ಗೌಡ
  |

  ಇವತ್ತು ಸ್ಯಾಂಡಲ್ ವುಡ್ ಅಭಿಮಾನಿಗಳಿಗೂ ಹಬ್ಬ ಜೊತೆಗೆ ಟಾಲಿವುಡ್ ನ ಅಭಿಮಾನಿಗಳಿಗೂ ಹಬ್ಬದ ವಾತಾವರಣ ಇದೇನಪ್ಪಾ ಎರಡು ಚಿತ್ರರಂಗದಲ್ಲೂ ಅಂತಹ ವಿಶೇಷ ಹಬ್ಬ ಏನಿದೇ ಅನ್ಕೊಂಡ್ರಾ?.

  ಹೌದು ಚಂದನವನದಲ್ಲಿ ಇಂದು ನಮ್ಮ-ನಿಮ್ಮೆಲ್ಲರ ಪ್ರೀತಿಯ 'ನಲ್ಲ' ಕಿಚ್ಚ ಸುದೀಪ್ ಅವರು ಭರ್ಜರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರೆ ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು 44ನೇ ಹುಟ್ಟುಹಬ್ಬವನ್ನು ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು.

  ಅಂದಹಾಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬದ ಅಂಗವಾಗಿ ಬರೋಬ್ಬರಿ 5 ಚಿತ್ರಗಳ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು ಟಾಲಿವುಡ್ ಅಭಿಮಾನಿಗಳಿಗೆ ವಿಶೇಷ ಸಿಹಿ ಸುದ್ದಿ.

  ರಾಮ್ ಚರಣ್ ತೇಜಾ ಅವರ ಹೊಸ ಚಿತ್ರ 'ಬ್ರೂಸ್ ಲೀ'. 'ಸುಬ್ರಮಣ್ಯಮ್ ಫಾರ್ ಸೇಲ್', 'ಕಂಚಿ', 'ಶಂಕರಭರಣಮ್', ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ 'ಸರ್ದಾರ್ ಗಬ್ಬರ್ ಸಿಂಗ್', ಇವಿಷ್ಟು ಚಿತ್ರಗಳ ಸ್ಪೆಷಲ್ ಟೀಸರ್ ಇಂದು ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ.

  ಇನ್ನೂ ಟಾಲಿವುಡ್ ನ ಕೆಲವಾರು ಸ್ಟಾರ್ ಸೆಲೆಬ್ರಿಟಿಗಳು ತಾವು ಪವನ್ ಕಲ್ಯಾಣ್ ಜೊತೆ ಕೆಲಸ ಮಾಡಿದ ಅನುಭವದ ಜೊತೆಗೆ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ ಸಂದರ್ಭಗಳನ್ನು ನೆನಪಿಸಿಕೊಂಡು ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಫೇಸ್ ಬುಕ್ಕ್ ಗಳ ಮೂಲಕ ವಿಶೇಷ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ....

  ತೆಲುಗು ನಟ ರಾಮ್ ಚರಣ್ ತೇಜಾ

  ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಅವರು ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಚಿಕ್ಕವಯಸ್ಸಿನಲ್ಲಿರುವಾಗ ಪವರ್ ಸ್ಟಾರ್ ಜೊತೆ ಕಳೆದ ಸಂಭ್ರಮದ ಕ್ಷಣಗಳನ್ನು ರಾಮ್ ಚರಣ್ ಹಂಚಿಕೊಂಡಿದ್ದಾರೆ.

  ಸ್ಟೈಲೀಷ್ ಸ್ಟಾರ್ ಅಲ್ಲು ಅರ್ಜುನ್

  ಟಾಲಿವುಡ್ ನ ಇನ್ನೋರ್ವ ಖ್ಯಾತ ನಟ ಸ್ಟೈಲೀಷ್ ಸ್ಟಾರ್ ಅಲ್ಲು ಅರ್ಜುನ್ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಟ್ವಿಟ್ಟರ್ ಮೂಲಕ ಜನುಮದಿನದ ಶುಭಾಶಯ ಕೋರಿದ್ದಾರೆ.

  ಟಾಲಿವುಡ್ ಸ್ಟಾರ್ ಅಲ್ಲು ಸಿರೀಷ್

  ಟಾಲಿವುಡ್ ಕ್ಷೇತ್ರದ ಇನ್ನೊಬ್ಬ ನವ ನಟ ಅಲ್ಲು ಸಿರೀಷ್ ಅವರು 'ಹ್ಯಾಪಿ ಬರ್ತ್ ಡೇ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ನಿಮಗೆ ಸುಖ, ಶಾಂತಿ, ಆರೋಗ್ಯವನ್ನು ಆ ದೇವರು ನೀಡಲಿ ಎಂದು ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.

  ರಾಕುಲ್ ಪ್ರೀತ್

  ಸದ್ಯಕ್ಕೆ ಲೀಡಿಂಗ್ ನಲ್ಲಿರುವ ಟಾಲಿವುಡ್ ಕ್ಷೇತ್ರದ ಗ್ಲಾಮರ್ ಬೊಂಬೆ ರಾಕುಲ್ ಪ್ರೀತ್ ಅವರು ಪವನ್ ಕಲ್ಯಾಣ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇವರು ರಾಮ್ ಚರಣ್ ಅವರೊಂದಿಗೆ 'ಬ್ರೂಸ್ ಲೀ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ತೆಲುಗು ನಟ ಸಾಯಿ ಧರ್ಮ ತೇಜ

  ಸದ್ಯಕ್ಕೆ 2-3 ಚಿತ್ರಗಳನ್ನು ಮಾಡುವ ಮೂಲಕ ನಾಯಕನಾಗಿ ಅಂಬೆಗಾಲಿಕ್ಕುತ್ತಿರುವ ನಟ ಸಾಯಿ ಧರ್ಮ ತೇಜ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಗುರುಗಳಾಗಿ ಕಾಣುತ್ತಿದ್ದು, ಅವರಿಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  ನಿರ್ದೇಶಕ ಹರೀಶ್ ಶಂಕರ್ ಎಸ್

  ಪವನ್ ಕಲ್ಯಾಣ್ ಅವರ 'ಗಬ್ಬರ್ ಸಿಂಗ್' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಹರೀಶ್ ಶಂಕರ್ ಎಸ್ ಅವರು ಬರ್ತ್ ಡೇ ಬಾಯ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ 'ಹ್ಯಾಪಿ ಬರ್ತ್ ಡೇ ಮೈ ಗಬ್ಬರ್ ಸಿಂಗ್' ಎಂದು ಟ್ವೀಟ್ ಮಾಡುವ ಮೂಲಕ ಬರ್ತ್ ಡೇ ವಿಶ್ ಮಾಡಿದ್ದಾರೆ

  ನಟ ವರುಣ್ ತೇಜ್

  'ಕಂಚಿ' ಚಿತ್ರದ ನಾಯಕ ತೆಲುಗು ನಟ ವರುಣ್ ತೇಜ್ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

  ತೆಲುಗು ನಟ ರಾಣಾ ದಗ್ಗುಬಾಟಿ

  'ಬಾಹುಬಲಿ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ನಟ ರಾಣಾ ದಗ್ಗುಬಾಟಿ ಅವರು ಪವನ್ ಕಲ್ಯಾಣ್ ಅವರೊಂದಿಗಿರುವ ಹಳೇ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  ನಿರ್ದೇಶಕ ಕೋನ ವೆಂಕಟ್

  ರಾಮ್ ಚರಣ್ ತೇಜಾ ಅವರ ಹೊಸ ಚಿತ್ರ 'ಬ್ರೂಸ್ ಲೀ' ಚಿತ್ರದ ನಿರ್ದೇಶಕ ಕೋನ ವೆಂಕಟ್ ಅವರು ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸಾಂಗ್ ಅರ್ಪಿಸುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದ್ದಾರೆ

  ನಟ, ನಿರ್ಮಾಪಕ ಬಾಂದ್ಲಾ ಗಣೇಶ್ ಬಾಬು

  ತೆಲುಗಿನ ನಟ, ನಿರ್ಮಾಪಕ ಬಾಂದ್ಲಾ ಗಣೇಶ್ ಬಾಬು ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಪವರ್ ಫುಲ್ ವಿಶ್ ಮಾಡಿದ್ದಾರೆ.

  English summary
  Powerstar Pawan Kalyan's 44th birthday is being celebrated by his fans as well his friends from the industry in a big manner. Team Bruce Lee, Subramanyam For Sale, Kanche, Shankarabaranam and Sardaar Gabbar Singh has already conveyed their love for the star by releasing a special birthday teaser each

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X