ಬರ್ತ್ ಡೇ ಸ್ಪೆಷಲ್: ಫೇಸ್ ಬುಕ್ಕಿನಲ್ಲಿ ಅಭಿಮಾನಿಗಳೊಂದಿಗೆ ಹರಟಿದ ರಮ್ಯಾ
ಚಂದನವನದ ಮೋಹಕ ತಾರೆ ರಮ್ಯಾ ಅವರು ನವೆಂಬರ್ 29 ರಂದು ಬಹಳ ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆ ಸಿನಿಮಾದಿಂದ ಕೊಂಚ ದೂರ ಉಳಿದಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಈ ಬಾರಿ ಬರ್ತ್ ಡೇ ಸ್ಪೆಷಲ್ ಅಂತ ಅಭಿಮಾನಿಗಳ ಜೊತೆ ಕೆಲ ಹೊತ್ತು ಮುಕ್ತವಾಗಿ ಹರಟಿದ್ದಾರೆ.['ಬೆಣ್ಣೆ ದೋಸೆ' ಸೆಟ್ ನಲ್ಲಿ ರಮ್ಯಾ ಹುಟ್ಟುಹಬ್ಬ ಸಂಭ್ರಮ]
ಅಂದಹಾಗೆ ವಿಭಿನ್ನವಾಗಿ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಂಡ ಲಕ್ಕಿ ಸ್ಟಾರ್ ರಮ್ಯಾ ಅವರು ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಫೇಸ್ ಬುಕ್ಕಿನಲ್ಲಿ ಉತ್ತರಿಸಿ ಪ್ರೀತಿಯ ಅಭಿಮಾನಿಗಳ ಮನಗೆದ್ದಿದ್ದಾರೆ.[ವಿಭಿನ್ನವಾಗಿ ಬರ್ತ್ ಡೇ ಆಚರಿಸ್ತಾರಂತೆ, ಮೋಹಕ ತಾರೆ..!]
ಅಭಿಮಾನಿಗಳ ಜೊತೆ ಫೇಸ್ ಬುಕ್ಕಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಮ್ಯಾ ಅವರಿಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳೇನು?, ಇದಕ್ಕೆ ಪ್ರತಿಯಾಗಿ ರಮ್ಯಾ ಅವರ ಉತ್ತರ ಏನಾಗಿತ್ತು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

* ಅಭಿಮಾನಿ: ಬೆಂಗಳೂರು ಬಗ್ಗೆ ನಿಮ್ಮ ಕಲ್ಪನೆ ಏನು?
- ರಮ್ಯಾ: ನಮ್ಮ ರಾಜಧಾನಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ದಿಯತ್ತ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ನಾಗರಿಕರಾಗಿ ಬೆಂಗಳೂರಿನ ಅಭಿವೃದ್ದಿಯಲ್ಲಿ ನಮ್ಮ ಪಾತ್ರ ಕೂಡ ಪ್ರಮುಖವಾಗಿದೆ. ನಮ್ಮಲ್ಲಿ ಪ್ರತಿಭಾವಂತರಿದ್ದು, ಅವರಿಗೆ ಸರಿಯಾದ ಅವಕಾಶ ಕೊಟ್ಟರೆ ಬೆಂಗಳೂರು ಮತ್ತಷ್ಟು ಅಭಿವೃದ್ದಿಯಾಗುತ್ತದೆ, ಎಂಬ ನಂಬಿಕೆ ನನಗಿದೆ.[ಚಿತ್ರಗಳು: ಆಕರ್ಷಕ ಲುಕ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ಕ್ವೀನ್.!]

* ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕ ಯಾರು?
- ಗಿರೀಶ್ ಕಾಸರವಳ್ಳಿ

* ರಾಜಕೀಯದಲ್ಲಿ ನಿಮ್ಮ ರೋಲ್ ಮಾಡೆಲ್ ಯಾರು?
- ಜವಾಹರ್ ಲಾಲ್ ನೆಹರು

* ನಿಮ್ಮ ನಿಕ್ ನೇಮ್
- ಡಿಪ್ಪಿ

* ಮದುವೆ ಯಾವಾಗ ಆಗುತ್ತೀರಿ?
- ಸೂಕ್ತ ವ್ಯಕ್ತಿ ಅಥವಾ ಸೂಕ್ತ ವರ ಸಿಕ್ಕಾಗ

* ನಿಮ್ಮ ಮುಂಬರುವ ಚಿತ್ರ (ಬಿಡುಗಡೆಯಾಗಲಿರುವ ಸಿನಿಮಾ)
- ನನ್ನ ಪ್ರಕಾರ ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕಾ ರಾಜಾ'. ಹಾಗಂತ ಅಂದುಕೊಂಡಿದ್ದೇನೆ.

* ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?
- ಬಹುಶಃ ಸರಿಯಾಗಿ ಹೇಳಲಾರೆ

* ಎಂಎಲ್ ಸಿ ಸ್ಥಾನಕ್ಕೆ ?
- ಖಂಡಿತ ಇಲ್ಲ

* ನಿಮ್ಮ ರಾಜಕೀಯ ಗುರಿ ಏನು? (ಸರ್ವೇಶ್ ಶೆಟ್ಟರ್)
- ಸುಮ್ಮನೆ ಆಸೆ ಆಯ್ತು ಅಂತ ನಾನು ರಾಜಕೀಯದಲ್ಲಿ ಇಲ್ಲ. ಬದ್ಲಾಗಿ ಒಳ್ಳೆಯ ಸೇವೆ ಮಾಡಬೇಕೆಂದಿದ್ದೇನೆ.

* ನಿಮ್ಮ ಫೇವರೆಟ್ ಕ್ರಿಕೆಟರ್ ಯಾರು?
- ರಾಹುಲ್ ದ್ರಾವಿಡ್

* ಮಹಿಳಾ ಸಬಲೀಕರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
- ಎಲ್ಲಾ ಕಡೆ ಮಹಿಳೆಯರಿಗೆ ಒಳ್ಳೆ ಅವಕಾಶ ಕೊಡಬೇಕು. ಜೊತೆಗೆ ಅವರ ಸುರಕ್ಷತೆ ಬಗ್ಗೆಯೂ ಗಮನಹರಿಸಬೇಕಿದೆ.

* ನಿಮ್ಮನ್ನು ಮಂತ್ರಿಯಾಗಿ ನೋಡುವ ಆಸೆ ಇದೆ.
- ಒಳ್ಳೆಯದು. ಆದರೆ ಸದ್ಯಕ್ಕೆ ಆ ಯೋಚನೆ ಮಾಡಿಲ್ಲ

* ಅಸಹಿಷ್ಣುತೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
- ಇದು ದೇಶಕ್ಕೆ ಮಾರಕ ನಾವಿದ್ದನ್ನು ಬದಲಾಯಿಸಬೇಕು.

* ಮತ್ತೆ ನಿಮ್ಮನ್ನು ಕನ್ನಡ ಸಿನಿಮಾಗಳಲ್ಲಿ ನೋಡುವಾಸೆ ಇದೆ.
- ಸಮಯ ಸಿಕ್ಕರೆ ಖಂಡಿತ ಮಾಡಬೇಕೆಂಬ ಆಸೆ ನನಗೂ ಇದೆ. ಆದರೆ ರಾಜಕೀಯದ ಜೊತೆ ಸಿನಿಮಾ ಸ್ವಲ್ಪ ಕಷ್ಟ ಆದರೂ ಪ್ರಯತ್ನಿಸುತ್ತೇನೆ.

* ಮುಂದಿನ ತಮಿಳು ಅಥವಾ ತೆಲುಗು ಚಿತ್ರ?
- ಸದ್ಯಕ್ಕೆ ಅಂತಹ ಯಾವುದೇ ಯೋಚನೆ ಇಲ್ಲ

* ಇತ್ತೀಚೆಗೆ ಅಂಬರೀಷ್ ಬಗ್ಗೆ ನಿಮಗೇನಾದರೂ ಬೇಸರ ಇದ್ಯಾ?
- ಅಯ್ಯೋ ನನಗ್ಯಾವತ್ತೂ ಅವರ ಮೇಲೆ ಬೇಸರ ಆಗಿಲ್ಲ.

* ನಿಮ್ಮ ಮತ್ತು ಹುಚ್ಚ ವೆಂಕಟ್ ಕಾಂಬಿನೇಷನ್ ಗಾಗಿ ಕಾಯುತ್ತಿದ್ದೇನೆ? (ಶರತ್)
- ಹಾ ಹಾ ಹಾ


Click it and Unblock the Notifications











