For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಹುಟ್ಟುಹಬ್ಬಕ್ಕೆ ಚಿತ್ರರಂಗ ಕೊಟ್ಟ ಉಡುಗೊರೆ

  By Pavithra
  |
  ಹುಟ್ಟುಹಬ್ಬದಂದ ಶಿವಣ್ಣನಿಗೆ ಸ್ಯಾಂಡಲ್‌ವುಡ್ ಕೊಟ್ಟ ಗಿಫ್ಟ್ ಏನು...? | Filmibeat Kannada

  ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಚಿತ್ರರಂಗದ ಅಜಾತಶತ್ರು ಅಂತಾನೇ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿರುವ ನಟ ಶಿವರಾಜ್ ಕುಮಾರ್. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಶಿವಣ್ಣ ಇಂದು ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.

  ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳಿಗೆ ಶಿವರಾತ್ರಿ ಶುರುವಾಗಿದ್ದು ಸಾಕಷ್ಟು ಅಭಿಮಾನಿಗಳು ಬೆಂಗಳೂರಿನ ಶಿವಣ್ಣನ ನಿವಾಸದ ಬಳಿ ಬಂದು ಜಮಾಯಿಸಿದ್ದಾರೆ. ಮಧ್ಯ ರಾತ್ರಿಯಿಂದಲೇ ಬರ್ತಡೇ ಸಂಭ್ರಮ ಮನೆ ಮಾಡಿದ್ದು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಖುಷಿ ಪಡುತ್ತಿದ್ದಾರೆ.

  ಪ್ರೀತಿಯ ಶಿವಣ್ಣನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳುಪ್ರೀತಿಯ ಶಿವಣ್ಣನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

  ತಮ್ಮ ಕೈಯಲ್ಲಾದ ಹಾಗೂ ತಮಗಿಷ್ಟವಾಗ ಉಡುಗೊರೆಯನ್ನು ಅಭಿಮಾನಿಗಳು ತಂದು ಕೊಡುತ್ತಿದ್ದು ಕನ್ನಡ ಸಿನಿಮಾರಂಗದ ಕಡೆಯಿಂದಲೂ ಸಿನಿಮಾಗಳ ರೂಪದಲ್ಲಿ ಶಿವಣ್ಣನಿಗೆ ಉಡುಗೊರೆಗಳು ಸಂದಿವೆ. ಹಾಗಾದರೆ ಹುಟ್ಟುಹಬ್ಬದಂದು ಅನೌನ್ಸ್ ಆದ ಚಿತ್ರಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

  ಬರ್ತಡೇ ದಿನ ಹೊಸ ಚಿತ್ರಗಳು

  ಬರ್ತಡೇ ದಿನ ಹೊಸ ಚಿತ್ರಗಳು

  ಶಿವರಾಜ್ ಕುಮಾರ್ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬ. ಇನ್ನು ಸಿನಿಮಾರಂಗದವರಿಗೆ ಸಂಭ್ರಮ. ಸ್ಟಾರ್ ಗಳ ಹುಟ್ಟುಹಬ್ಬ ಎಂದರೆ ಸಾಮಾನ್ಯವಾಗಿ ಹೊಸ ಚಿತ್ರಗಳು ಸೆಟ್ಟೇರುವುದು ಕಾಮನ್. ಅದೇ ರೀತಿಯಲ್ಲಿ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರಗಳ ಅನೌನ್ಸ್ ಆಗಿದೆ.

  ಶಿವಣ್ಣ-ಯೋಗರಾಜ್ ಭಟ್ ಕಾಂಬಿನೇಶನ್

  ಶಿವಣ್ಣ-ಯೋಗರಾಜ್ ಭಟ್ ಕಾಂಬಿನೇಶನ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು ಚಿತ್ರದ ಫಸ್ಟ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಸಿನಿಮಾವನ್ನು ಭಾಸ್ಕರ್ ನಿರ್ಮಾಣ ಮಾಡುತ್ತಿದ್ದಾರೆ.

  ಕಂಬಳ ಬಗ್ಗೆ ಸಿನಿಮಾ

  ಕಂಬಳ ಬಗ್ಗೆ ಸಿನಿಮಾ

  'ರಥಾವರ' ಸಿನಿಮಾ ಖ್ಯಾತಿ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಅಭಿನಯಿಸಲು ಸಜ್ಜಾಗಿದ್ದು, ಕಂಬಳ ಕ್ರೀಡೆ ಬಗ್ಗೆ ಸಿನಿಮಾ ಕಥೆಯನ್ನು ಎಣೆಯಲಾಗಿದೆ. ಚಿತ್ರಕ್ಕೆ 'ವೈರಮುಡಿ' ಎಂದು ಹೆಸರಿಡಲಾಗಿದೆ.

  ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಸಿನಿಮಾ

  ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಸಿನಿಮಾ

  ಶಿವಣ್ಣ ಅವರ ಸಹೋದರ ಸಂಬಂಧಿ ಆಗಿರುವ ಲಕ್ಕಿ ಗೋಪಾಲ್ ಡೈರೆಕ್ಷನ್ ನಲ್ಲಿ 'ಎಸ್ ಆರ್ ಕೆ' ಚಿತ್ರ ಸೆಟ್ಟೇರಲು ಸಜ್ಜಾಗಿದೆ. 'ಎಸ್ ಆರ್ ಕೆ' ಸಿನಿಮಾ ಪೋಸ್ಟರ್ ಕೂಡ ಇಂದು ಬಿಡುಗಡೆ ಆಗಿದೆ.

  English summary
  Kannada actor Shiva rajkumar today celebrates 56th birthday. Birthday specially shivaraj kumar's upcoming movies posters release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X