ಚಿತ್ರ ಸೆಟ್ಟೇರುವ ಮುಂಚೆಯೇ ಗಣೇಶ್ ಮನೆ ಮುಂದೆ ನಿಲ್ತು ಕಟೌಟ್
ಗೋಲ್ಡನ್ ಸ್ಟಾರ್ ಗಣೇಶ್ 'ಚಮಕ್' ಸಿನಿಮಾ ನಂತರ ಯಾವ ಚಿತ್ರದಲ್ಲಿ ಅಭಿನಯ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುರ ಜೊತೆಯಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳುತ್ತಿರುವ ಗಣೇಶ್ ವಿಜಯ ನಾಗೇಂದ್ರ ನಿರ್ದೇಶನದ 'ಗೀತಾ' ಚಿತ್ರದಲ್ಲಿ ಅಭಿನಯ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
'ಗೀತಾ' ಚಿತ್ರ ಟೈಟಲ್ ಅನೌನ್ಸ್ ಆದಾಗಿನಿಂದಲೇ ಕುತೂಹಲ ಹುಟ್ಟುಹಾಕಿದ್ದು ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಗೋಲ್ಡನ್ ಸ್ಟಾರ್ 'ಗೀತಾ' ಸಿನಿಮಾಗಾಗಿ ಹೊಸ ಲುಕ್ ಟ್ರೈ ಮಾಡಿದ್ದು ಸಿನಿಮಾ ಪ್ರೇಮಿಗಳು ಕೂಡ ನ್ಯೂ ಲುಕ್ ಅನ್ನು ಮೆಚ್ಚಿಕೊಂಡಿದ್ದಾರೆ.

ಇನ್ನು ವಿಶೇಷ ಎಂದರೆ ಚಿತ್ರದ ಫಸ್ಟ್ ಲುಕ್ ಅನ್ನು ಗಣೇಶ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಿದ್ದು ಚಿತ್ರ ಸೆಟ್ಟೇರುವ ಮುಂಚೆಯೇ 'ಗೀತಾ' ಸಿನಿಮಾ ಕಟೌಟ್ ಅನ್ನು ನಿಲ್ಲಿಸಲಾಗಿದೆ.

ಇದೇ ಮೊದಲ ಬಾರಿಗೆ ಚಿತ್ರ ಸೆಟ್ಟೇರುವ ಮುನ್ನವೇ ನಟನೊಬ್ಬನ ಕಟೌಟ್ ನಿಲ್ಲಿಸಿ ಸಂಭ್ರಮ ಆಚರಣೆ ಮಾಡಲಾಗುತ್ತಿದೆ. ಒಟ್ಟಾರೆ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬ ಹಾಗೂ ಗೀತಾ ಸಿನಿಮಾ ಎರಡರ ಖುಷಿಯನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.


Click it and Unblock the Notifications











