twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಇಂಟರ್ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಗೆ ಪ್ರತಿಷ್ಠಿತ ಆಸ್ಕರ್ ನಿಂದ ಮಾನ್ಯತೆ

    By ಮಂಜುನಾಥ್ ಭದ್ರಶೆಟ್ಟಿ
    |

    ಬೆಂಗಳೂರು ಇಂಟರ್ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ (ಬಿಐಎಸ್ಎಫ್ಎಫ್)ಗೆ ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಕ್ವಾಲಿಫೈಯಿಂಗ್ ಫೆಸ್ಟಿವಲ್ ಫಾರ್ ದಿ ಶಾರ್ಟ್ ಫಿಲ್ಮ್ ಅವಾರ್ಡ್ಸ್ ಮಾನ್ಯತೆ ಸಿಕ್ಕಿದೆ.

    ಯುವ ಮತ್ತು ಹವ್ಯಾಸಿ ಚಿತ್ರ ನಿರ್ಮಾಪಕರಿಗೆ ತಮ್ಮ ಶಾರ್ಟ್ ಫಿಲ್ಮ್ ಗಳನ್ನು ತಯಾರಿಸಿ ಪ್ರದರ್ಶಿಸಲು ಬಿಐಎಸ್ಎಫ್ಎಫ್ ಒಂದು ವೇದಿಕೆಯನ್ನು ಕಲ್ಪಿಸುತ್ತಿದೆ. ಇದರ ಮೂಲಕ ಈ ಕ್ಷೇತ್ರದಲ್ಲಿ ಖ್ಯಾತನಾಮರಾಗಿರುವವರಿಂದ ರಚನಾತ್ಮಕವಾದ ವಿಮರ್ಶೆ ಲಭ್ಯವಾಗುವಂತೆ ಮಾಡುತ್ತದೆ.

    ಫೆಸ್ಟಿವಲ್ ನ ಮೊದಲ ಸರಣಿಯಲ್ಲಿ ಕೇವಲ 40 ಶಾರ್ಟ್ ಫಿಲ್ಮ್ ಗಳನ್ನ ಪ್ರದರ್ಶಿಸಲಾಗಿತ್ತು. 2019 ರಲ್ಲಿ ಭಾರತ ಮತ್ತು ವಿದೇಶಗಳಿಂದ 3500 ಕ್ಕೂ ಹೆಚ್ಚು ಶಾರ್ಟ್ ಫಿಲ್ಮ್ ಗಳು ಬಂದಿದ್ದವು.

    bisff-gets-recognition-from-oscar-academy-qualifying-festival-for-the-short-film-awards

    ಬಿಐಎಸ್ಎಫ್ಎಫ್ ಗೆ ಆಸ್ಕರ್ ಅಕಾಡೆಮಿ ಮಾನ್ಯತೆ ಎಂದರೇನು?
    2020 ರಲ್ಲಿ ಬಿಐಎಸ್ಎಫ್ಎಫ್ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸ್ಪರ್ಧಾ ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿಗಳಿಗೆ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ಕೆಟಗರಿಗೆ ಆಯ್ಕೆ ಮಾಡಲಾಗುತ್ತದೆ. ಅಕಾಡೆಮಿಯ ನಿಯಮಗಳನುಸಾರ ಈ ಆಯ್ಕೆ ನಡೆಯಲಿದೆ.

    ನಿರ್ದೇಶಕ, ನಟ ಮತ್ತು ಬಿಐಎಸ್ಎಫ್ಎಫ್ ಮೆಂಟರ್ ಆಗಿರುವ ಪ್ರಕಾಶ್ ಬೆಳವಾಡಿ ಅವರು ಈ ಪ್ರತಿಷ್ಠಿತ ಮಾನ್ಯತೆ ಬಗ್ಗೆ ಮಾತನಾಡಿ, ''ಸಿನೆಮಾ-ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿಟ್ಟಿನಲ್ಲಿ ಬಿಐಎಸ್ಎಫ್ಎಫ್ ಅವಿರತವಾಗಿ ಶ್ರಮಿಸುತ್ತಾ ಬಂದಿದೆ. ಕನ್ನಡ ಮತ್ತು ಭಾರತದ ಇತರೆ ಭಾಷೆಗಳ ಶಾರ್ಟ್ ಫಿಲ್ಮ್ ಗಳನ್ನು ಇಡೀ ಜಗತ್ತಿಗೆ ಪರಿಚಯಿಸಲು ಒಂದು ವೇದಿಕೆಯನ್ನು ಕಲ್ಪಿಸುತ್ತಾ ಬಂದಿದೆ. ಬಿಐಎಸ್ಎಫ್ಎಫ್ ಗೆ ಇದೀಗ ಅಕಾಡೆಮಿ ಕ್ವಾಲಿಫೈಯಿಂಗ್ ಫೆಸ್ಟಿವಲ್ ಫಾರ್ ದಿ ಶಾರ್ಟ್ ಫಿಲ್ಮ್ ಅವಾರ್ಡ್ಸ್ ಮಾನ್ಯತೆ ಸಿಕ್ಕಿರುವುದು ನಮ್ಮ ಪರಿಶ್ರಮಕ್ಕಷ್ಟೇ ಅಲ್ಲ, ಇದು ಕರ್ನಾಟಕ, ಭಾರತ ಮತ್ತು ಹೊರ ದೇಶಗಳ ಚಿತ್ರ ನಿರ್ಮಾಪಕರು ಇದರಲ್ಲಿ ಪಾಲ್ಗೊಳ್ಳಲು ಅತ್ಯಂತ ಮಹತ್ವಪೂರ್ಣ ಅವಕಾಶವನ್ನು ಒದಗಿಸಿಕೊಡುತ್ತದೆ'' ಎಂದು ತಿಳಿಸಿದರು.

    ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ಬಿಐಎಸ್ಎಫ್ಎಪ್ ನ ವಿಶೇಷ ಸಲಹೆಗಾರ ರಿಕಿ ಕೇಜ್ ಅವರು ಮಾತನಾಡಿ, ''ಸುಸ್ಥಿರ ಸಮಾಜ ಮತ್ತು ಜಗತ್ತಿಗೆ ಕಲೆ ಒಂದು ಅವಿಭಾಜ್ಯ ಅಂಗವಾಗಿರುತ್ತದೆ. ಸಿನೆಮಾವು ಗುಣಾತ್ಮಕವಾದ ಸಾಮಾಜಿಕ ರೂಪಾಂತರವನ್ನು ತರುವ ಒಂದು ದೃಶ್ಯ ಮಾಧ್ಯಮವಾಗಿದೆ ಮತ್ತು ಜಗತ್ತನ್ನು ಒಂದು ಉತ್ತಮ ತಾಣವನ್ನಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿ ಬಿಐಎಸ್ಎಫ್ಎಫ್ ಉತ್ಸವಗಳು ಅತ್ಯಂತ ಮುಖ್ಯವಾಗಿರುತ್ತವೆ. ಇಲ್ಲಿ ಯುವ ಸಮುದಾಯ ತಮ್ಮ ಕಲೆ ಮತ್ತು ಸಂದೇಶಗಳನ್ನು ಸಾರಲು ಒಂದು ವೇದಿಕೆಯನ್ನು ಈ ಉತ್ಸವಗಳು ಒದಗಿಸುತ್ತವೆ. ಬಿಐಎಸ್ಎಫ್ಎಫ್ ತನ್ನ 10 ನೇ ಸರಣಿಯ ಈ ಸಂದರ್ಭದಲ್ಲಿ ಅಕಾಡೆಮಿ ಮಾನ್ಯತೆ ಪಡೆದಿರುವುದು ಸಂತಸವಾಗಿದೆ'' ಎಂದರು.

    ಬಿಐಎಸ್ಎಫ್ಎಫ್ ನ ಫೆಸ್ಟಿವಲ್ ಡೈರೆಕ್ಟರ್ ಆನಂದ ವರದರಾಜ್ ಅವರು ಮಾತನಾಡಿ, ''ನಮ್ಮ ಹತ್ತನೇ ವರ್ಷದಲ್ಲಿ ಆಸ್ಕರ್ ಮಾನ್ಯತೆ ದೊರೆತಿರುವುದು ಈ ಫೆಸ್ಟಿವಲ್ ಮೌಲ್ಯವನ್ನು ಹೆಚ್ಚಿಸುತ್ತದೆ. ಯುವ ಪೀಳಿಗೆಯೇ ಮುನ್ನಡೆಸುವ ಈ ಫೆಸ್ಟಿವಲ್ ನಲ್ಲಿ ಸದೃಢವಾದ ಪ್ರತಿಭಾನ್ವಿತ ವೈವಿಧ್ಯಮಯ ಸ್ವಯಂಸೇವಕರ ಗುಂಪು ಇದೆ. ಈ ಅಕಾಡೆಮಿ ಕ್ವಾಲಿಫೈಯಿಂಗ್ ಫೆಸ್ಟಿವಲ್ ಫಾರ್ ದಿ ಶಾರ್ಟ್ ಫಿಲ್ಮ್ ಅವಾರ್ಡ್ಸ್ ನಿಂದ ಈ ಪ್ಲಾಟ್ ಫಾರ್ಮ್ ಅನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ'' ಎಂದು ತಿಳಿಸಿದರು.

    ಈ ಫೆಸ್ಟಿವಲ್ ಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. 2020 ರ ಫೆಬ್ರವರಿ 1 ರಂದು ಆರಂಭವಾಗಿದ್ದು, 2020 ರ ಏಪ್ರಿಲ್ 3 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ. ಭಾರತದಲ್ಲಿ ನಿರ್ಮಾಣವಾಗಿರುವ ಫಿಲ್ಮ್ ಗಳನ್ನು ಯಾವುದೇ ಪ್ರವೇಶ ಶುಲ್ಕವಿಲ್ಲದೇ 2020 ರ ಫೆಬ್ರವರಿ 29 ರವರೆಗೆ ಸಲ್ಲಿಸಲು ಅವಕಾಶವಿದೆ.

    English summary
    BISFF gets recognition from Oscar Academy Qualifying festival for the Short Film Awards.
    Sunday, February 23, 2020, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X