ಭಾವನೆಗಳು ತುಂಬಿದ 'ಬಿಸಿ ಬೆಳೆ ಬಾತ್' ರುಚಿಯಾಗಿದೆ

ಪ್ರತಿ ದಿನ ಆಫೀಸ್, ಕೆಲಸದ ಒತ್ತಡಗಳ ನಡುವೆ ನಾವು ನಮ್ಮವರನ್ನೇ ಮರೆತುಬಿಡುತ್ತೇವೆ. ಜಗತ್ತಿನ ವಿಷಯಗಳ ಬಗ್ಗೆ ಜ್ಞಾನ ಪಡೆಯುವ ನಾವು ನಮ್ಮ ಮನೆ, ಕುಟುಂಬದ ವಿಷಯಗಳನ್ನೇ ತಿಳಿದುಕೊಳ್ಳುವುದಿಲ್ಲ. ಈ ರೀತಿಯ ಒಬ್ಬ ಹುಡುಗನ ಕಥೆಯೇ 'ಬಿಸಿ ಬೆಳೆ ಬಾತ್'.

'ಬಿಸಿ ಬೆಳೆ ಬಾತ್' ಕಿರುಚಿತ್ರ ಈಗಾಗಲೇ ಸುದ್ದಿಯಾಗಿತ್ತು. ನಿನ್ನೆ (ನವೆಂಬರ್ 4) ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, 2 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುಂದೆ ಸಾಗಿದೆ. ಒಳ್ಳೆಯ ಮಾತುಗಳು ಕಿರುಚಿತ್ರಕ್ಕೆ ಕೇಳಿ ಬರುತ್ತಿವೆ.

ಆಫೀಸ್ ಗೆ ರಜೆ ಹಾಕಿ ಒಂದು ದಿನ ಮನೆಯಲ್ಲಿ ಒಬ್ಬನೆ ಇರುವ ಹುಡುಗನನ್ನು, ಆತನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಭೇಟಿ ಮಾಡಲು ಬರುತ್ತಾರೆ. 15 ವರ್ಷಗಳ ನಂತರದ ಅವರ ಭೇಟಿ ಹೇಗಿರುತ್ತದೆ ಎನ್ನುವುದು ಕಿರುಚಿತ್ರದ ನಿರೂಪಣೆ. 'ಬಿಸಿ ಬೆಳೆ ಬಾತ್' ಮೂಲಕ ಅವರ ಹಳೆಯ ನೆನೆಪು ಇನ್ನಷ್ಟು ಚೆಂದವಾಗುತ್ತದೆ.

Bisi Bele Bath Kannada Short Movie Released

ಒಂದು ಒಳ್ಳೆಯ ವಿಷಯವನ್ನು ಈ ಕಿರುಚಿತ್ರದ ಮೂಲಕ ಹೇಳಲಾಗಿದೆ. ಒಂದೇ ಮನೆಯಲ್ಲಿ ಕಥೆ ನಡೆಯುತ್ತದೆ. ರಾಕೇಶ್ ಮಯ್ಯ, ಸುಂದರ್, ಕುಮುಂದವಲ್ಲಿ ಅರುಣ್ ಮೂರ್ತಿ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಕಿರುಚಿತ್ರ ಭಾವನಾತ್ಮಕವಾಗಿ ಮೂಡಿ ಬಂದಿದೆ. ಕೊನೆಯಲ್ಲಿ ನೀಡುವ ಟ್ವಿಸ್ಟ್ ಚೆನ್ನಾಗಿದೆ.

ಶಿಲ್ಪಾ ಅರವಿಂದ್, ನವೀನ್ ಸಾಗರ್ ಹಾಗೂ ಅರವಿಂದ್ ಕೌಶಿಕ್ ಈ ಕಿರುಚಿತ್ರದ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಕೌಶಿಕ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಅರ್ಜುನ್ ರಾಮು ಸಂಗೀತ ಚೆನ್ನಾಗಿದೆ.

'ಬಿಸಿ ಬೆಳೆ ಬಾತ್' ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Bisi Bele Bath kannada short movie released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X