twitter
    For Quick Alerts
    ALLOW NOTIFICATIONS  
    For Daily Alerts

    ಭಾವನೆಗಳು ತುಂಬಿದ 'ಬಿಸಿ ಬೆಳೆ ಬಾತ್' ರುಚಿಯಾಗಿದೆ

    |

    ಪ್ರತಿ ದಿನ ಆಫೀಸ್, ಕೆಲಸದ ಒತ್ತಡಗಳ ನಡುವೆ ನಾವು ನಮ್ಮವರನ್ನೇ ಮರೆತುಬಿಡುತ್ತೇವೆ. ಜಗತ್ತಿನ ವಿಷಯಗಳ ಬಗ್ಗೆ ಜ್ಞಾನ ಪಡೆಯುವ ನಾವು ನಮ್ಮ ಮನೆ, ಕುಟುಂಬದ ವಿಷಯಗಳನ್ನೇ ತಿಳಿದುಕೊಳ್ಳುವುದಿಲ್ಲ. ಈ ರೀತಿಯ ಒಬ್ಬ ಹುಡುಗನ ಕಥೆಯೇ 'ಬಿಸಿ ಬೆಳೆ ಬಾತ್'.

    'ಬಿಸಿ ಬೆಳೆ ಬಾತ್' ಕಿರುಚಿತ್ರ ಈಗಾಗಲೇ ಸುದ್ದಿಯಾಗಿತ್ತು. ನಿನ್ನೆ (ನವೆಂಬರ್ 4) ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, 2 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುಂದೆ ಸಾಗಿದೆ. ಒಳ್ಳೆಯ ಮಾತುಗಳು ಕಿರುಚಿತ್ರಕ್ಕೆ ಕೇಳಿ ಬರುತ್ತಿವೆ.

    ''ಯುವಕರಿಲ್ಲದ ಮಲೆನಾಡು ವೃದ್ಧಾಶ್ರಮವಾಗಿದೆ''- ಸಿನಿಮಾ ಚಿಕ್ಕದು, ವಿಷಯ ದೊಡ್ಡದು''ಯುವಕರಿಲ್ಲದ ಮಲೆನಾಡು ವೃದ್ಧಾಶ್ರಮವಾಗಿದೆ''- ಸಿನಿಮಾ ಚಿಕ್ಕದು, ವಿಷಯ ದೊಡ್ಡದು

    ಆಫೀಸ್ ಗೆ ರಜೆ ಹಾಕಿ ಒಂದು ದಿನ ಮನೆಯಲ್ಲಿ ಒಬ್ಬನೆ ಇರುವ ಹುಡುಗನನ್ನು, ಆತನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಭೇಟಿ ಮಾಡಲು ಬರುತ್ತಾರೆ. 15 ವರ್ಷಗಳ ನಂತರದ ಅವರ ಭೇಟಿ ಹೇಗಿರುತ್ತದೆ ಎನ್ನುವುದು ಕಿರುಚಿತ್ರದ ನಿರೂಪಣೆ. 'ಬಿಸಿ ಬೆಳೆ ಬಾತ್' ಮೂಲಕ ಅವರ ಹಳೆಯ ನೆನೆಪು ಇನ್ನಷ್ಟು ಚೆಂದವಾಗುತ್ತದೆ.

    Bisi Bele Bath Kannada Short Movie Released

    ಒಂದು ಒಳ್ಳೆಯ ವಿಷಯವನ್ನು ಈ ಕಿರುಚಿತ್ರದ ಮೂಲಕ ಹೇಳಲಾಗಿದೆ. ಒಂದೇ ಮನೆಯಲ್ಲಿ ಕಥೆ ನಡೆಯುತ್ತದೆ. ರಾಕೇಶ್ ಮಯ್ಯ, ಸುಂದರ್, ಕುಮುಂದವಲ್ಲಿ ಅರುಣ್ ಮೂರ್ತಿ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಕಿರುಚಿತ್ರ ಭಾವನಾತ್ಮಕವಾಗಿ ಮೂಡಿ ಬಂದಿದೆ. ಕೊನೆಯಲ್ಲಿ ನೀಡುವ ಟ್ವಿಸ್ಟ್ ಚೆನ್ನಾಗಿದೆ.

    ಟ್ರೆಂಡಿಂಗ್ 1: ರಿಷಬ್ ಶೆಟ್ಟಿ 7 ಕಥೆಗಳ ಸಂಗಮ, ಹೃದಯಂಗಮಟ್ರೆಂಡಿಂಗ್ 1: ರಿಷಬ್ ಶೆಟ್ಟಿ 7 ಕಥೆಗಳ ಸಂಗಮ, ಹೃದಯಂಗಮ

    ಶಿಲ್ಪಾ ಅರವಿಂದ್, ನವೀನ್ ಸಾಗರ್ ಹಾಗೂ ಅರವಿಂದ್ ಕೌಶಿಕ್ ಈ ಕಿರುಚಿತ್ರದ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಕೌಶಿಕ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಅರ್ಜುನ್ ರಾಮು ಸಂಗೀತ ಚೆನ್ನಾಗಿದೆ.

    'ಬಿಸಿ ಬೆಳೆ ಬಾತ್' ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

    English summary
    Bisi Bele Bath kannada short movie released.
    Tuesday, November 5, 2019, 12:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X