ದರ್ಶನ್ ಗೆ ಬೆಳ್ಳಿ ಗದೆ ನೀಡಿದ ವಿದ್ಯಾರ್ಥಿಗಳು: ಗದೆ ವಾಪಸ್ ನೀಡಿದ ಗಜ
Recommended Video
ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ನಡೆದ ಕಾಲೇಜ್ ಫೆಸ್ಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನೆಚ್ಚಿನ ನಟನನ್ನ ಅದ್ಧೂರಿಯಾಗಿ ಸ್ವಾಗತಿಸಿದ ವಿದ್ಯಾರ್ಥಿಗಳು ಪ್ರೀತಿಯಂದ ಬೆಳ್ಳಿ ಗದೆಯನ್ನ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳ ಪ್ರೀತಿಯಿಂದ ನೀಡಿದ ಗದೆಯನ್ನ ಅಷ್ಟೇ ಗೌರವದಿಂದ ವಾಪಸ್ ನೀಡಿದ್ದಾರೆ ನಟ ದರ್ಶನ್. 'ಈ ಗದೆಯನ್ನ ಬಡವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಬಳಸಿ' ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿ ವಾಪಸ್ ನೀಡಿದ್ದಾರೆ.
ಸಾಮಾನ್ಯವಾಗಿ ದರ್ಶನ್ ಅವರು ಕಾಲೇಜ್ ಫೆಸ್ಟ್ ಗಳಿಗೆ ಹೋಗುವುದಿಲ್ಲ. ಆದ್ರೆ, ವಿದ್ಯಾರ್ಥಿಗಳ ಅಭಿಮಾನಕ್ಕೆ ಮಣಿದ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ್ದ ದಾಸ, ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು.

ಇದೇ ವೇಳೆ ಮಾತನಾಡಿದ ಅವರು 'ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್, ನಾನು ಕಾಲೇಜಿಗೆ ಹೋಗಿಲ್ಲ. ಇದೆಲ್ಲಾ ಅನುಭವಿಸಿಲ್ಲ. ನೀವು ಎಂಜಾಯ್ ಮಾಡಿ. ಚೆನ್ನಾಗಿ ಓದಿ'' ಎಂದು ಕಿವಿಮಾತು ಹೇಳಿದ್ರು.
ಇನ್ನು ಇದೇ ಸಂದರ್ಭದಲ್ಲಿ ರೈತರ ಬಗ್ಗೆ ಮಾತನಾಡಿದ ದರ್ಶನ್ ''ಸರ್ಕಾರ ರೈತರ ಸಾಲ ಮಾಡ್ತೀವಿ ಅಂತಿದ್ದಾರೆ, ಸಾಲಮನ್ನಾ ಮಾಡಿಲ್ಲ ಅಂದ್ರೂ ಪರವಾಗಿಲ್ಲ. ಅವರ ಬೆಳೆಗೆ ನ್ಯಾಯವಾದ ಬೆಲೆ ಕೊಡಿ ಸಾಕು, ಅವರೇ ಸಾಲ ತೀರಿಸಿಕೊಳ್ಳುತ್ತಾರೆ'' ಎಂದು ಹೇಳಿದ್ರು.

ದರ್ಶನ್ ಕಾಲೇಜಿಗೆ ಅತಿಥಿಯಾಗಿ ಆಗಮಿಸಿದ ವಿಶೇಷವಾಗಿ ಯಜಮಾನ ಸಿನಿಮಾ ಕಟೌಟ್ ವನ್ನ ಕಾಲೇಜ್ ಕ್ಯಾಂಪಸ್ ನಲ್ಲಿ ನಿಲ್ಲಿಸಲಾಗಿತ್ತು. ಸದ್ಯ ಒಡೆಯ ಸಿನಿಮಾ ಶೂಟಿಂಗ್ ಮುಗಿಸಿರುವ ದಾಸ, ರಾಬರ್ಟ್ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.


Click it and Unblock the Notifications