twitter
    For Quick Alerts
    ALLOW NOTIFICATIONS  
    For Daily Alerts

    ‘ಮನಸ್ಸಿನಿಂದ.... ಲವ್ವೇ ಪಾಸಾಗ್ಲಿ’ ಅನ್ನುವವರೆ

    By Super
    |

    ಮನಸೇ ಓ ಮನಸೇ...: ರಾಮೋಜಿರಾವ್‌ 'ಉಷಾಕಿರಣ್‌ ಮೂವೀಸ್‌" ಲಾಂಛನದಲ್ಲಿ ನಿರ್ಮಿಸುತ್ತಿರುವ ಕೌಟುಂಬಿಕ ಚಿತ್ರ 'ಮನಸೇ ಓ ಮನಸೇ". ರೀರಿಕಾರ್ಡಿಂಗ್‌ ಹಂತ ಮುಟ್ಟಿದೆ. ಎಂ.ಎಸ್‌. ರಾಜಶೇಖರ್‌ ನಿರ್ದೇಶಿಸುತ್ತಿರುವ ಈ ಚಿತ್ರದ ಗೀತರಚನೆಕಾರರು ಹಾಗೂ ಸಂಗೀತ ಸಂಯೋಜಕರು ವಿ. ಮನೋಹರ್‌.

    ಎಸ್‌. ಮನೋಹರ್‌ ಸಂಕಲನದ ಹೊಣೆ ಹೊತ್ತಿರುವ ಚಿತ್ರದಲ್ಲಿ ರಾಮ್‌ಕುಮಾರ, ಅನಂತ್‌ನಾಗ್‌, ಅಭಿಜಿತ್‌, ಶ್ರುತಿ, ದೊಡ್ಡಣ್ಣ, ಜಯಕುಮಾರ್‌, ಚಿತ್ರಾಶೆಣೈ, ಶ್ರೀರಕ್ಷಾ ಮೊದಲಾದವರಿದ್ದಾರೆ.

    ಹೈದ್ರಾಬಾದ್‌ನಿಂದ ಮೈಸೂರಿನತ್ತ ಜಮೀನ್ದಾರ್ರು : ಕಳೆದ ತಿಂಗಳೆಲ್ಲಾ ಹೈದರಾಬಾದ್‌ನಲ್ಲಿ ಕಳೆದ 'ಜಮೀನ್ದಾರ್ರು" ಮೈಸೂರಿನತ್ತ ಹೆಜ್ಜೆ ಹಾಕಿದ್ದಾರೆ. ವಿಷ್ಣುವರ್ಧನ್‌ ನಾಯಕನಟರಾಗಿರುವ ಹಾಗೂ ಎಸ್‌. ನಾರಾಯಣ್‌ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಡಿ.8ರ ಶನಿವಾರದಿಂದ ಮೈಸೂರು ಸುತ್ತ ಮುತ್ತ ಆರಂಭವಾಗಲಿದೆ.

    ವಿಷ್ಣುವರ್ಧನ್‌ ದ್ವಿಪಾತ್ರದಲ್ಲಿರುವ ಈ ಚಿತ್ರದಲ್ಲಿ ಪ್ರೇಮಾ, ರಾಶಿ, ಅನುಪ್ರಭಾಕರ್‌, ಶ್ರೀನಿವಾಸಮೂರ್ತಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಹೇಮಾ ಚೌದರಿ, ಶಿವರಾಂ ಮೊದಲಾದವರಿದ್ದಾರೆ.

    ಸಿಂಹಾದ್ರಿಯ ಸಿಂಹ: 'ಜಮೀನ್ದಾರ್ರು" ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿರುವ ವಿಷ್ಣುವರ್ಧನ್‌, ಯಜಮಾನ ಫಿಲಂಸ್‌ ಲಾಂಛನದಲ್ಲಿ ಸಿದ್ಧವಾಗುತ್ತಿರುವ 'ಸಿಂಹಾದ್ರಿಯ ಸಿಂಹ "ಚಿತ್ರದಲ್ಲಿ ತ್ರಿಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರು ಕೂಡ ಎಸ್‌. ನಾರಾಯಣ್‌ರೇ.

    ಚಿತ್ರಕ್ಕೆ ಗೀತೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ದೇವಾ ಸಂಗಿತ ಸಂಯೋಜಿಸಿದ್ದಾರೆ. ಕಳದ ವಾರವಷ್ಟೇ ಆರು ಹಾಡುಗಳ ಧ್ವನಿಮುದ್ರಣ ಆಕಾಶ್‌ ಧ್ವನಿಗ್ರಹಣ ಕೇಂದ್ರದಲ್ಲಿ ನಡೆಯಿತು. ವಿಷ್ಣುವರ್ಧನ್‌ರ ಕೊನೆಯ ಚಿತ್ರವೂ ಆಗಬಹುದಾದ ಸಾಧ್ಯತೆ ಇರುವ ಈ ಚಿತ್ರದಲ್ಲಿ ಕನ್ನಡ ನಾಡು -ನುಡಿ ಕುರಿತು ಒಂದು ವಿಶಿಷ್ಟ ಗೀತೆಯೂ ಇದೆ.

    ಕಲ್ಲಾದರೆ ನಾನು ಬೇಲೂರಲ್ಲಿ ಇರುವೆ... ಎಂದು ಆರಂಭವಾಗುವ ಈ ಗೀತೆಯ ಮೂಲಕ ವಿಷ್ಣು ವರ್ಧನ್‌ ಕನ್ನಡಾಂಬೆಗೆ ಮತ್ತು ಕನ್ನಡ ಜನರಿಗೆ ಕೃತಜ್ಞತೆ ಸಲ್ಲಿಸಿ ನಿವೃತ್ತರಾಗುತ್ತಾರೋ ಏನೋ? ಅಂದಹಾಗೆ ಹೊಸವರ್ಷದ ಮೊದಲ ದಿನದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

    ತಾರಾಗಣದಲ್ಲಿ ಮೀನಾ, ಭಾನುಪ್ರಿಯ, ಮುಖ್ಯಮಂತ್ರಿ ಚಂದ್ರು, ರಮೇಶ್‌ ಭಟ್‌, ಶಿವರಾಂ, ತಾರಾ, ಉಮಶ್ರೀ, ಅಭಿಜಿತ್‌, ಶೋಭರಾಜ್‌ ಮೊದಲಾವರಿದ್ದಾರೆ.

    ಮಲೆನಾಡಿಗೆ ಕಾಲಿಟ್ಟ ವಂಶಕೊಬ್ಬ : 'ವಂಶಕ್ಕೊಬ್ಬ" ಮಲೆನಾಡ ಮಡಿಲಲ್ಲಿ ವಿಹರಿಸುತ್ತಿದ್ದಾನೆ. ಸಕಲೇಶಪುರ ಸುತ್ತಮುತ್ತ ಹಾಗೂ ಮಳಲಿ ಗ್ರಾಮದ ಎಸ್ಟೇಟ್‌ನಲ್ಲಿ ವಂಶಕೊಬ್ಬ ಚಿತ್ರದ ಚಿತ್ರೀಕರಣ ಸಾಗಿದೆ. ಜಗ್ಗೇಶ್‌, ಸ್ವಾತಿ, ಸುಜಿತಾ, ಅಶೋಕ್‌ ಬಾದರದಿನ್ನಿ, ಬ್ಯಾಂಕ್‌ ಜನಾರ್ದನ್‌, ಡಿಂಗ್ರಿ ನಾಗರಾಜ್‌ ತಾರಾಗಣದ ಈ ಚಿತ್ರದ ನಿರ್ದೇಶಕರು ಸಿ.ಎಚ್‌. ಬಾಲಾಜಿ ಸಿಂಗ್‌ ಬಾಬು.

    ಲವ್ವೇ ಪಾಸಾಗಲಿ : 'ಚಿತ್ರಾ" ಖ್ಯಾತಿಯ ಪ್ರಸಾದ್‌ ಅಭಿನಯದ ಎರಡನೇ ಚಿತ್ರ 'ಲವ್ವೇ ಪಾಸಾಗಲಿ..." ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಹೆಸರಲ್ಲೇ ಲವ್‌ ಇರುವಾಗ ಇದೊಂದು ಪ್ರೇಮ ಕಥಾನಕ ಎಂದು ಹೇಳುವ ಅಗತ್ಯ ಇಲ್ಲ. ಚಿತ್ರದಲ್ಲಿ ಪ್ರೇಮದ ಜೊತೆ ಒಂದಿಷ್ಟು ತಿಳಿ ಹಾಸ್ಯ ಇರುವುದೇ ವಿಶೇಷವಂತೆ.

    ಶ್ರೀತ್ರಿಪುರ ಸುಂದರಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಪ್ರಕಾಶ್‌ ಬಾಬು, ಸೇನೆ ಪ್ರಕಾಶ್‌, ಆರ್‌. ಹರಿರಾವ್‌ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಿ. ಮಲ್ಲೇಶ್‌ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

    ಚಿತ್ರದ ಮೂಲ ಕಥೆ ಹೇಮಾ ಮಲ್ಲೇಶ್‌ರದು. ಹಂಸಲೇಖರ ಸಂಗೀತ ನಿರ್ದೇಶನ ಇರುವ ಚಿತ್ರದ ತಾರಾಗಣದಲ್ಲಿ ಪ್ರಸಾದ್‌, ಪ್ರೇಮ, ದೊಡ್ಡಣ್ಣ, ಸಾಧುಕೋಕಿಲಾ, ಶ್ರೀನಾಥ್‌, ಬಿರಾದಾರ್‌, ಮನ್‌ದೀಪ್‌ ರಾಯ್‌ ಮೊದಲಾದವರಿದ್ದಾರೆ.

    English summary
    Jamindru on the way to mysore, Manase on re-recording studio
    Wednesday, August 7, 2013, 11:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X