ಅಭಿಷೇಕ್ ಅಂಬರೀಶ್ ಜೊತೆ ಬಿಜೆಪಿ ಸಚಿವ ಮಾತುಕತೆ: ರಾಜಕೀಯಕ್ಕೆ ಧುಮುಕುತ್ತಾರ ಯುವನಟ?

By ಫಿಲ್ಮಿಬೀಟ್ ಡೆಸ್ಕ್

ಅಂಬರೀಶ್-ಸಮಲತಾ ಪುತ್ರ, ಸ್ಯಾಂಡಲ್‌ವುಡ್‌ನ ಯುವನಟ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೆ ಎಂಗೇಜ್‌ಮೆಂಟ್ ಮಾಡಿಕೊಂಡು ಕೆಲವೇ ದಿನಗಳಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಲು ಸಜ್ಜಾಗಿದ್ದಾರೆ.

ಆದರೆ ಈ ನಡುವೆ ಮತ್ತೊಂದು ಸುದ್ದಿ ಅಭಿಷೇಕ್ ಅಂಬರೀಶ್ ಬಗ್ಗೆ ಹರಿದಾಡುತ್ತಿದೆ. ಅದುವೆ ರಾಜಕೀಯ ಪ್ರವೇಶದ ಸುದ್ದಿ!

ಹೌದು, ಅಭಿಷೇಕ್ ಅಂಬರೀಶ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ. ಈ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದ್ದವು. ಆದರೆ ಈ ಮಾತುಗಳನ್ನು ಅಭಿಷೇಕ್‌ರ ತಾಯಿ, ಸ್ವತಃ ಸಂಸದೆ ಸುಮಲತಾ ಅಂಬರೀಶ್ ನಿರಾಕರಿಸಿದ್ದರು. ಆದರೆ ಈಗ ಸ್ವತಃ ಹಾಲಿ ಸಚಿವರೊಬ್ಬರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಸಚಿವ ನಾರಾಯಣ ಗೌಡ, ಅಭಿಷೇಕ್ ಅಂಬರೀಶ್ ಅವರ ರಾಜಕೀಯ ಪ್ರವೇಶದ ಕುರಿತಾಗಿ ಮಾತನಾಡಿದ್ದು, ''ನಾವು ಮಂಡ್ಯದಲ್ಲಿ ಅಭಿಷೇಕ್ ಅಂಬರೀಶ್ ಜೊತೆ ಮಾತುಕತೆ ನಡೆಸಿದ್ದು, ಅವರು ಬಿಜೆಪಿ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಬೇಕೆಂದು ಕೋರಿದ್ದೇವೆ. ಮಾತುಕತೆಯ ಫಲಿತಾಂಶವನ್ನು ಇನ್ನೆರಡು ದಿನಗಳಲ್ಲಿ ತಿಳಿಸಲಿದ್ದೇವೆ'' ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ನಾರಾಯಣ ಗೌಡ, ''ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ಮಾಡುವ ಯೋಚನೆಯಲ್ಲಿದ್ದಾರೆ ಎಂದು ಅರಿತು ನಾವು ಅವರನ್ನು ಭೇಟಿಯಾಗಿ ಬಿಜೆಪಿ ಸೇರುವಂತೆ ಕೇಳಿದ್ದೇವೆ. ಅಲ್ಲದೆ ಅವರ ತಾಯಿ, ಸಂಸದೆ ಸುಮಲತಾ ಅವರೊಟ್ಟಿಗೂ ಮಾತುಕತೆ ನಡೆಸಿದ್ದೇವೆ. ಅಭಿಷೇಕ್ ಅಂಬರೀಶ್ ಅವರು ಮಂಡ್ಯದಿಂದ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಬೇಕೆನ್ನುವುದು ನಮ್ಮ ಇಚ್ಛೆ'' ಎಂದಿದ್ದಾರೆ.

 BJP Minister In Talks With Actor Abhishek Ambareesh, May Join BJP

ಅಭಿಷೇಕ್ ಅಂಬರೀಶ್ ಅವರದ್ದು ನಟನಾ ಕುಟುಂಬವಾಗಿರುವ ಜೊತೆಗೆ ರಾಜಕೀಯದ ಕುಟುಂಬವೂ ಹೌದು. ಅಭಿಷೇಕ್‌ರ ತಂದೆ ದಿವಂಗತ ಅಂಬರೀಶ್‌, ಶಾಸಕರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಂಬರೀಶ್‌ರ ನಿಧನದ ಬಳಿಕ ಮಂಡ್ಯದಿಂದ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿದ ಅಂಬರೀಶ್ ಪತ್ನಿ, ಅಭಿಷೇಕ್ ತಾಯಿ ಸುಮಲತಾ ಅವರು ಗೆದ್ದು ಸಂಸದೆಯಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರು ನೇರವಾಗಿ ಬಿಜೆಪಿ ಟಿಕೆಟ್ ಮೂಲಕವೇ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಜೆಡಿಎಸ್‌ನಿಂದ ಯುವ ನಟ, ರಾಜಕಾರಣಿ, ನಿಖಿಲ್ ಕುಮಾರಸ್ವಾಮಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಅವರಿಗೆ ಎದುರಾಳಿಯಾಗಿ ಬಿಜೆಪಿಯು ಅಭಿಷೇಕ್ ಅಂಬರೀಶ್ ಅವರನ್ನು ಬಳಸಿಕೊಳ್ಳುವ ಯೋಜನೆಯೊಟ್ಟಿಗೆ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಮಾಡಿರುವ ಸಾಧ್ಯತೆ ಇದೆ.

ಅಭಿಷೇಕ್ ಅಂಬರೀಶ್ ಅವರು ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಸಿನಿಮಾಕ್ಕೂ ಸಹಿ ಹಾಕಿದ್ದು, ಹೆಸರಿಡದ ಈ ಸಿನಿಮಾದಲ್ಲಿ 'ಕಾಂತಾರ' ನಟಿ ಸಪ್ತಮಿ ಗೌಡ ಸಹ ನಟಿಸುತ್ತಿದ್ದಾರೆ.

More from Filmibeat

English summary
BJP minister Narayan Gowda says he talked to actor Abhishek Ambareesh and requested him to join BJP party. In two days he will tell the outcome of their talk.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X