For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಆಯ್ತು, ಈಗ ಸುದೀಪ್ ಅಂತೆ, ಇದು ನಿಜವಾದ ರಾಜಕೀಯ.!

  By Bharath Kumar
  |

  ಮೊನ್ನೆ ತಾನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಪಕ್ಷವನ್ನ ಸೇರಿಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದ ಚರ್ಚೆ ಆಗಿತ್ತು.

  ಈಗ ಕಾಂಗ್ರೆಸ್ ರಾಜಕೀಯ ಬಾಣಕ್ಕೆ ಬಿಜೆಪಿ ತಿರುಗಬಾಣ ಬಿಟ್ಟಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಕಮಲ ಪಕ್ಷಕ್ಕೆ ಕರೆತರಲಿದ್ದೇವೆ ಎಂದು ಹೇಳುತ್ತಿದ್ದಾರೆ.

  ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್

  ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಬಿಜೆಪಿ ಮುಖಂಡ ಆರ್.ಅಶೋಕ್ ಪರೋಕ್ಷವಾಗಿ ಸುದೀಪ್ ಅವರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನ ಬಗ್ಗೆ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಆದ್ರೆ, ಸುದೀಪ್ ಅವರು ಎಷ್ಟರ ಮಟ್ಟಿಗೆ ರಾಜಕೀಯಕ್ಕೆ ಒಲವು ತೋರುತ್ತಾರೆ ಎನ್ನುವುದು ಸದ್ಯದ ಕುತೂಹಲ.

  ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?

  ಆರ್.ಅಶೋಕ್ ಹೇಳಿದ್ದೇನು...

  ''ಜಗ್ಗೇಶ್, ತಾರಾ, ಶ್ರುತಿ, ಮಾಳವಿಕಾ ಸೇರಿದಂತೆ ಹಲವು ಸಿನಿಮಾ ಕಲಾವಿದರು ಬಿಜೆಪಿ ಪಕ್ಷದಲ್ಲಿದ್ದಾರೆ. ಇನ್ನು ಹಲವು ನಟರು ನಮ್ಮ ಸಂಪರ್ಕದಲ್ಲಿದ್ದು, ಚುನಾವಣೆ ವೇಳೆಗೆ ನಮ್ಮ ಪಕ್ಷಕ್ಕೆ ಸೇರುವ ವಿಶ್ವಾಸವಿದೆ. ನನ್ನ ಚುನಾವಣ ಪ್ರಚಾರದ ಉದ್ಘಾಟನೆಯನ್ನ ಸುದೀಪ್ ಮಾಡಿದ್ದರು. ನನ್ನ ಒಳ್ಳೆಯ ಸ್ನೇಹಿತರು. ಸುದೀಪ್ ಮಾತ್ರವಲ್ಲ, ಬಹಳಷ್ಟು ಕಲಾವಿದರಿದ್ದಾರೆ. ಅವರೊಂದಿಗೆ ನಾನು ಮಾತನಾಡುತ್ತೇನೆ. ಕಾಂಗ್ರೆಸ್ ಅವರು ಬಿಡುವ ಬಾಣಕ್ಕೆಮ ಪ್ರತಿಬಾಣವಾಗಿ ಬಿಜೆಪಿ ಕೂಡ ಬಿಡುತ್ತೆ'' ಎಂದಿದ್ದಾರೆ.

  English summary
  BJP Trying To Get Actor Sudeep into Political. BJP Leader R Ashok Gave Indirect Clue About Sudeep political Entry

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X