ಕಿಚ್ಚ ಸುದೀಪ್ ರನ್ನು ಶ್ರೀರಾಮುಲು ಭೇಟಿ ಮಾಡಿದ್ದು ಯಾಕೆ?

By Naveen

Recommended Video

ಶ್ರೀರಾಮುಲುರನ್ನು ಮತ್ತೆ ಸುದೀಪ್ ಭೇಟಿ ಆಗಿದ್ದು ಯಾಕೆ..? | Filmibeat Kannada

ಬೆಂಗಳೂರು, ಜುಲೈ 23: ಬಿಜೆಪಿಯ 'ಸಮರ್ಥನೆಗಾಗಿ ಸಂಪರ್ಕ' ಅಭಿಯಾನದಡಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಅವರು ಖ್ಯಾತ ನಟ ಸುದೀಪ್ ಅವರನ್ನು ಇಂದು ಭೇಟಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನೊಳಗೊಂಡ 'ಸಮರ್ಥನೆಗಾಗಿ ಸಂಪರ್ಕ' ಪುಸ್ತಕವನ್ನು ಸುದೀಪ್ ಅವರಿಗೆ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ನೀಡಿದರು.

ನರೇಂದ್ರ ಮೋದಿ ಸರ್ಕಾರದ ಕಳೆದ ಮೇ ತಿಂಗಳಿಗೆ ನಾಲ್ಕು ವರ್ಷ ಪೂರೈಸಿದ ನಿಮಿತ್ತ, ನಾಲ್ಕು ವರ್ಷಗಳ ಸರ್ಕಾರದ ಸಾಧನೆಗಳನ್ನು ಒಳಗೊಂಡ ಪುಸ್ತಕವನ್ನು ದೇಶದ ಪ್ರಮುಖ ಸೆಲೆಬ್ರಿಟಿಗಳಿಗೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.

BJPs Sampark Samarthan: Sriramulu meets Sudeep

ಇದು ಬಿಜೆಪಿಯ 2019 ರ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವೂ ಹೌದು.

ಶ್ರೀರಾಮುಲು ಮತ್ತು ಸುದೀಪ್ ಇಬ್ಬರೂ ಬಹುಕಾಲದ ಸ್ನೇಹಿತರಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಅವರ ಪರವಾಗಿ ಸುದೀಪ್ ಪ್ರಚಾರ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

BJPs Sampark Samarthan: Sriramulu meets Sudeep

'ನಾನು ಯಾವುದೇ ಪಕ್ಷದ ಪರವಲ್ಲ. ನಾನು ನನ್ನ ಸ್ನೇಹಿತರಿಗಾಗಿ ಪ್ರಚಾರ ನಡೆಸುತ್ತೇನೆ' ಎಂದು ಸುದೀಪ್ ಚುನಾವಣೆಯ ಸಮಯದಲ್ಲೇ ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮುಖಂಡರಾದ ಸೋಮಶೇಖರ ರೆಡ್ಡಿ, ಸಣ್ಣ ಪಕೀರಪ್ಪ ಅವರ ಪರವಾಗಿಯೂ ಸುದೀಪ್ ಪ್ರಚಾರ ನಡೆಸಿದ್ದರು.

More from Filmibeat

English summary
As part of Sampark Samarthan campaign, BJP's Molakalmuru MLA Sriramulu met Kannada actor sudeep in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X