»   » ಹಿಂಸಾತ್ಮಕ, ರಿಮೇಕ್‌ ಚಿತ್ರಗಳಿಗೆ ತೆರಿಗೆ ವಿನಾಯ್ತಿ ರದ್ದು

ಹಿಂಸಾತ್ಮಕ, ರಿಮೇಕ್‌ ಚಿತ್ರಗಳಿಗೆ ತೆರಿಗೆ ವಿನಾಯ್ತಿ ರದ್ದು

Subscribe to Filmibeat Kannada

ಬೆಂಗಳೂರು: ಮಾಯಾಮೃಗ ಹಾಗೂ ಸಾಧನೆ ಧಾರಾವಾಹಿಗಳಿಗೆ ರಾಜ್ಯ ಸರ್ಕಾರ ನೀಡಿದ್ದ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿಗಳನ್ನು ವಾಪಸ್ಸು ಪಡೆಯಲಾಗಿದೆ ಎಂದು ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಪ್ರಕಟಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ವರ್ಷದ ಮಾರ್ಚಿವರೆಗಿನ ಧಾರಾವಾಹಿಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿಯಾಂದನ್ನು ಸದ್ಯದಲ್ಲಿಯೇ ರಚಿಸಲಾಗುವುದು. ಈ ಸಂಬಂಧ ತಾವು ಹಾಗೂ ಮುಖ್ಯಮಂತ್ರಿಗಳು ಚರ್ಚಿಸುವುದಾಗಿ ತಿಳಿಸಿದರು. ಪ್ರಶಸ್ತಿಗಳ ಸಂಖ್ಯೆಗೆ ಮಿತಿ ಹೇರುವುದಾಗಿ ಸ್ಪಷ್ಟವಾಗಿ ಹೇಳಿದ ಸಚಿವರು, ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳಿಗೆ ಪ್ರಶಸ್ತಿ ನೀಡುವ ವಿಷಯದಲ್ಲಿ ತಮಗೇನೂ ಅಭ್ಯತರವಿಲ್ಲವೆಂದು ಹೇಳಿದರು.

ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯುವ ಸಂದರ್ಭದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸುವುದಾಗಿ ತಿಳಿಸಿದ ಅವರು, ರಿಮೇಕ್‌ ಹಾಗೂ ಹಿಂಸಾ ಪ್ರಧಾನ ಚಿತ್ರಗಳಿಗೆ ತೆರಿಗೆ ವಿನಾಯ್ತಿ ನೀಡದಿರುವ ಇಂಗಿತ ವ್ಯಕ್ತಪಡಿಸಿದರು. ರಿಮೇಕ್‌ ಚಿತ್ರಗಳಿಂದ ಸರ್ಕಾರಕ್ಕೆ ಬರಬೇಕಾಗಿರುವ 12 ಕೋಟಿ ರುಪಾಯಿಗಳ ಬಾಕಿಯನ್ನು ಮನ್ನಾಗೊಳಿಸಿರುವುದಾಗಿ ಅವರು ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada