For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಡಿರುವ ಮಾತು ಸರಿಯಾಗಿದೆ: ನಿಮ್ಗೇನು ಅನ್ಸುತ್ತೆ.?

  By Harshitha
  |
  ದರ್ಶನ್ ಪತ್ನಿ ಮಾತಿನ ಅರ್ಥ ಏನು..? | Filmibeat Kannada

  ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ... ''ಹಾಳಾದ ಬೆಕ್ಕು.. ಈಗಲೇ ಅಡ್ಡ ಬರಬೇಕಾ.?'' ಅಂತ ತಲೆ ಚಚ್ಚಿಕೊಂಡು ಮನೆಗೆ ವಾಪಸ್ ಹೋಗಿ, ಒಂದು ನಿಮಿಷ ಕೂತು, ನೀರು ಕುಡಿದು ಹೊರಡುವ ಅಭ್ಯಾಸ ಕೆಲವರಿಗಿದೆ.

  ಇನ್ನೂ ಬೆಕ್ಕು ಅಡ್ಡ ಬಂದ ದಾರಿಯಲ್ಲಿ ಮುಂದೆ ಸಾಗದೆ, ಬೇರೆ ದಾರಿಯಲ್ಲಿ ತೆರಳುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ''ಇವತ್ತಿನ ಕೆಲಸ ಆದ ಹಾಗೆ'' ಅಂತ ಎಷ್ಟೋ ಜನ ಬೆಕ್ಕು ಕಂಡ ಮೇಲೆ ಕೊರಗುತ್ತಾರೆ.

  ಆದ್ರೆ, ಬೆಕ್ಕು ನಿಜಕ್ಕೂ ಅಪಶಕುನವೇ.? ಶುಭಶಕುನ.. ಅಪಶಕುನದ ಬಗ್ಗೆ ಯೋಚಿಸುವ ಮುನ್ನ ಮೊದಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಡಿರುವ ಮಾತನ್ನ ಒಮ್ಮೆ ಕೇಳಿ...

  ಹೇಳಿ ಕೇಳಿ ದರ್ಶನ್ ಪ್ರಾಣಿ ಪ್ರಿಯ

  ಹೇಳಿ ಕೇಳಿ ದರ್ಶನ್ ಪ್ರಾಣಿ ಪ್ರಿಯ

  ನಿಮಗೆಲ್ಲಾ ಗೊತ್ತಿರುವ ಹಾಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ. ಏಳೆಂಟು ತಳಿಯ ಶ್ವಾನಗಳು, ಕುದುರೆ, ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳನ್ನ ದರ್ಶನ್ ಸಾಕಿ ಸಲಹುತ್ತಿದ್ದಾರೆ. ಮೈಸೂರಿನಲ್ಲಿ ಪ್ರಾಣಿಗಳಿಗಾಗಿಯೇ ಮಿನಿ ಝೂ ಕೂಡ ಮಾಡಿದ್ದಾರೆ. ಸಾಲದಕ್ಕೆ, ಮೈಸೂರು ಝೂನಲ್ಲಿ ಆನೆ, ಹುಲಿಗಳನ್ನ ದರ್ಶನ್ ದತ್ತು ತೆಗೆದುಕೊಂಡಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!

  ದರ್ಶನ್ ಪತ್ನಿ ಕೂಡ ಪ್ರಾಣಿ ಪ್ರಿಯೆ

  ದರ್ಶನ್ ಪತ್ನಿ ಕೂಡ ಪ್ರಾಣಿ ಪ್ರಿಯೆ

  ಬರೀ ದರ್ಶನ್ ಗೆ ಮಾತ್ರ ಪ್ರಾಣಿ ಮೇಲೆ ಪ್ರೀತಿ, ಕರುಣೆ ಅಂತ ಭಾವಿಸಬೇಡಿ. ದರ್ಶನ್ ಪತ್ನಿ ವಿಜಯಲಕ್ಷ್ಮಿ ರವರಿಗೂ ಕೂಡ ಪ್ರಾಣಿಗಳು ಅಂದ್ರೆ ಪ್ರಾಣ. ಅದರಲ್ಲೂ ಬೆಕ್ಕುಗಳ ಮೇಲೆ ವಿಜಯಲಕ್ಷ್ಮಿ ದರ್ಶನ್ ಗೆ ವಿಶೇಷ ಪ್ರೀತಿ ಇದೆ.

  ದಕ್ಷಿಣ ಅಮೆರಿಕದಿಂದ ದರ್ಶನ್ ಮನೆಗೆ ಬಂದ ಹೊಸ ಅತಿಥಿದಕ್ಷಿಣ ಅಮೆರಿಕದಿಂದ ದರ್ಶನ್ ಮನೆಗೆ ಬಂದ ಹೊಸ ಅತಿಥಿ

  ವಿಜಯಲಕ್ಷ್ಮಿ ದರ್ಶನ್ ಮಾಡಿರುವ ಟ್ವೀಟ್ ಏನು.?

  ಈಗಾಗಲೇ ವಿವಿಧ ಪ್ರಭೇದಗಳ ಬೆಕ್ಕುಗಳನ್ನು ಸಾಕಿರುವ ವಿಜಯಲಕ್ಷ್ಮಿ ದರ್ಶನ್, ಇದೀಗ ಕಪ್ಪು ಬೆಕ್ಕಿನ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ''ಕಪ್ಪು ಬೆಕ್ಕು ಅಡ್ಡ ಬಂದರೆ ಕೆಡುಕಾಗುತ್ತದೆ ಅಂತ ಹಲವರು ಹೇಳ್ತಾರೆ. ಆದ್ರೆ, ನೀವು ಎಲ್ಲಾದರೂ ಕಪ್ಪು ಬೆಕ್ಕು ಕಂಡರೆ, ಅದನ್ನ ಸಾಕಿ. ಯಾಕಂದ್ರೆ, ಅದು ಒಳ್ಳೆಯ ಪ್ರಾಣಿ. ಅದಕ್ಕೆ ಪ್ರೀತಿ ಕೊಡುವುದು ಅವಶ್ಯಕ'' ಎಂದು ವಿಜಯಲಕ್ಷ್ಮಿ ದರ್ಶನ್ ಟ್ವೀಟ್ ಮಾಡಿದ್ದಾರೆ.

  ದರ್ಶನ್ ಗೆ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಬರಲೇಬೇಕು.!ದರ್ಶನ್ ಗೆ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಬರಲೇಬೇಕು.!

  ನಿಮ್ಮ ಅಭಿಪ್ರಾಯ ಏನು.?

  ನಿಮ್ಮ ಅಭಿಪ್ರಾಯ ಏನು.?

  ಕಪ್ಪು ಬಣ್ಣದ ಬೆಕ್ಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಿರುವ ವಿಜಯಲಕ್ಷ್ಮಿ ದರ್ಶನ್ ಯತ್ನಕ್ಕೆ ನಮ್ಮ ಕಡೆಯಿಂದ ಒಂದು ಸಲಾಂ. ಈ ಬಗ್ಗೆ ನಿಮಗೇನು ಅನಿಸುತ್ತದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Black cat deserves to be loved says Darshan's wife Vijayalakshmi

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X