twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಕಾರು ಕಂಡಲ್ಲಿ ಅಭಿಮಾನಿಗಳಿಂದ ಮುತ್ತಿಗೆ

    |
    <ul id="pagination-digg"><li class="previous"><a href="/news/tinted-glass-black-film-banned-order-supreme-court-065852.html">« Previous</a>

    Darshan
    ಹೀಗಾಗಿ, ಸಿನಿಮಾ ತಾರೆಯರಿಗೆ ಸರ್ಕಾರದ ಈ ಆದೇಶ ಬಿಸಿತುಪ್ಪವಾಗಿ ಪರಿಣಮಿಸಿದೆ. ಅಭಿಮಾನಿಗಳನ್ನು ಬೇಸರಿಸಲು ಇಷ್ಟಪಡದ ತಾರೆಯರು ಅವರ ಬೇಡಿಕೆಗೆ ಮಣಿದರೆ ಮೊದಲೇ ಬೆಂಗಳೂರಿನಲ್ಲಿ ಇರುವ ಭಾರೀ ಟ್ರಾಫಿಕ್, ಡಬ್ಬಲ್ ಆಗುವುದು ಖಾತ್ರಿ ಎಂಬಂತಾಗಿದೆ. ಈಗಾಗಲೇ ನಟ ದರ್ಶನ್ ಅವರಿಗೆ ಈ ಅನುಭವ ಆಗಿದೆ.

    ತಮ್ಮ ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಹೊರಟ ದರ್ಶನ್ ಅವರನ್ನು ಸಿಗ್ನಲ್ ನಲ್ಲಿ ನೋಡಿದ ಅಭಿಮಾನಿಗಳು ಸುಮ್ಮನಿರಲು ಸಾಧ್ಯವೇ? ಮೊದಲೇ ದರ್ಶನ್ ಅವರಿಗಂತೂ ಅಭಿಮಾನಿಗಳು ಜಾಸ್ತಿ. ದರ್ಶನ್ ಅವರನ್ನು ನೋಡಿದ್ದೇ ತಡ, ಅಭಿಮಾನಿಗಳು ಮುತ್ತಿಕೊಂಡರು. ಹಸ್ತಾಕ್ಷರ ಪಡೆದರು, ಫೋಟೋ ತೆಗೆಸಿಕೊಂಡರು. ಸಿಗ್ನಲ್ ಬಿಟ್ಟರೂ ಅಭಿಮಾನಿಗಳು ದರ್ಶನ್ ಅವರಿಗೆ ಹೋಗಲು ಬಿಡಲಿಲ್ಲ.

    ಹೀಗೆ, ಅರ್ಧ ಗಂಟೆ ದರ್ಶನ್ ಅವರನ್ನು ಮುತ್ತಿಕೊಂಡ ಪ್ರೇಕ್ಷಕರನ್ನು ಸಂಭಾಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅರ್ಧ ಗಂಟೆ ಟ್ರಾಫಿಕ್ ಜಾಮ್ ಆಗಿ ಜನರೆಲ್ಲಾ ತೊಂದರೆ ಅನುಭವಿಸಿದರು. ಆದರೆ ಅದಕ್ಕೆ ದರ್ಶನ್ ಹೊಣೆಗಾರರಾಗಲು ಹೇಗೆ ಸಾಧ್ಯ? ದರ್ಶನ್ ಸರ್ಕಾರದ ಆದೇಶ ಪಾಲಿಸಿದ್ದಾರೆ ಅಷ್ಟೇ.

    ಇದೇ ಅನುಭವ ನಟರಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದುನಿಯಾ ವಿಜಿ ಅವರಿಗೂ ಆಗಿದೆ. ಅವರೂ ಅಭಿಮಾನಿಗಳ ಮುತ್ತಿಗೆಗೆ ಒಳಗಾಗಿ ಟ್ರಾಫಿಕ್ ಜಾಮ್ ಆಗಲು ಕಾರಣರಾಗಿದ್ದಾರೆ. ಹೀಗೆ ಸಾಕಷ್ಟು ತಾರೆಯರಿಗೆ ಮುಂದೆ ಆಗುವುದು ಖಂಡಿತ. ಸರ್ಕಾರ ಆದೇಶ ಹೊರಡಿಸಿದ ಮೇಲೆ ಅದು ಎಲ್ಲರಿಗೂ ಅನ್ವಯವಾಗುವುದೂ ಸಹಜ.

    ಸರ್ಕಾರದ ಈ ತೀರ್ಪಿನಿಂದ ಹೆಚ್ಚು ಸಮಸ್ಯೆಯಾಗುತ್ತಿರುವುದೇ ಸಿನಿಮಾ ಸ್ಟಾರ್ ಗಳಿಗೆ. ಅರ್ಜೆಂಟ್ ಆಗಿ ಎಲ್ಲಿಯೋ ಹೊರಟಿರುವಾಗ ಅವರಿಗೆ ಅಭಿಮಾನಿಗಳು ಈ ರೀತಿ ಮುತ್ತಿಕೊಂಡರೆ ಗತಿಯೇನು? ಶೂಟಿಂಗ್, ಫಂಕ್ಷನ್ ಎಲ್ಲಕ್ಕೂ ತೊಂದರೆಯಾಗುತ್ತದೆ. ಇತ್ತ ಅಭಿಮಾನಿಗಳನ್ನು ದೂರುವಂತಿಲ್ಲ, ಅತ್ತ ಸರ್ಕಾರದ ಆದೇಶ ಧಿಕ್ಕರಿಸುವಂತಿಲ್ಲ.

    ಈ ರೀತಿಯಾಗಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿದ್ದಾರೆ ಸಿನಿಮಾ ತಾರೆಯರು. "ಎಲ್ಲವನ್ನೂ ಯೋಚಿಸಿ ಸರ್ಕಾರ ಆದೇಶ ಹೊರಡಿಸಬೇಕಿತ್ತು. ಈಗ ಒಂದು ಸಮಸ್ಯೆ ಪರಿಹಾರವಾದರೆ ಒನ್ನೊಂದು ಸಮಸ್ಯೆ ಪ್ರಾರಂಭವಾಗಿದೆ" ಎಂಬುದು ಸಿನಿಮಾ ತಾರೆಗಳ ಮಾತು. ಮುಂದೆ ದರ್ಶನ್ ಅವರಂತೆ ಇನ್ನೆಷ್ಟು ತಾರೆಗಳು ಅಭಿಮಾನಿಗಳ ಕೈಗೆ ಸಿಕ್ಕ ಚಡಪಡಿಸಲಿದ್ದಾರೋ! (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/tinted-glass-black-film-banned-order-supreme-court-065852.html">« Previous</a>

    English summary
    Challenging Star Darshan has suffered a lot from recent Supreme Court order. Supreme court banned the use of tinted glass, and black films on Car Windows. Because of this development, fans can see their favorite star and they are crowded on them. &#13; &#13;
    Monday, June 11, 2012, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X