twitter
    For Quick Alerts
    ALLOW NOTIFICATIONS  
    For Daily Alerts

    ಇಂಗ್ಲೀಷ್ ಸಿನಿಮಾ ಅಬ್ಬರಕ್ಕೆ ಮಂಕಾದ ಕನ್ನಡ ಸಿನಿಮಾಗಳು, ಚಿತ್ರಮಂದಿಗಳೇ ಇಲ್ಲ!

    |

    ಕನ್ನಡ ಸಿನಿಮಾಗಳು ಒಂದರ ಹಿಂದೊಂದರಂತೆ ಹಿಟ್ ಆಗುತ್ತಿವೆ. ಹೊಸಬರ ಸಿನಿಮಾಗಳು ಸಹ ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ಆದರೆ ಚೆನ್ನಾಗಿ ಓಡುತ್ತಿರುವ ಕನ್ನಡ ಸಿನಿಮಾಗಳು ಸಹ ಇಂಗ್ಲೀಷ್‌ ಸಿನಿಮಾ ಒಂದಕ್ಕೆ ದಾರಿಬಿಟ್ಟುಕೊಡಬೇಕಾಗಿ ಬಂದಿದೆ ಬೆಂಗಳೂರಿನಲ್ಲಿ!

    'ಕಾಂತಾರ' ಆರು ವಾರಗಳ ಬಳಿಕವೂ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ನೀಡುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ 'ಗಂಧದ ಗುಡಿ' ಸಹ ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಹೊಸಬರ ಸಿನಿಮಾ 'ಕಂಬ್ಳಿಹುಳ' ಕ್ಕಂತೂ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಆದರೆ ಈ ಶುಕ್ರವಾರ ಕನ್ನಡದ ಹಲವು ಸಿನಿಮಾಗಳು ಚಿತ್ರಮಂದಿರಗಳನ್ನು ಕಳೆದುಕೊಂಡಿವೆ ಕಾರಣ ಇಂಗ್ಲೀಷ್ ಸಿನಿಮಾ 'ಬ್ಲಾಕ್ ಪ್ಯಾಂಥರ್'ನ ಬಿಡುಗಡೆ. ಹೌದು, ಈ ಶುಕ್ರವಾರ ಬಿಡುಗಡೆ ಆದ ಕನ್ನಡ ಸೇರಿದಂತೆ ಇನ್ಯಾವ ಸಿನಿಮಾಕ್ಕೂ ಸಿಗದಷ್ಟು ಶೋಗಳು 'ಬ್ಲಾಕ್ ಪ್ಯಾಂತರ್‌'ಗೆ ಬೆಂಗಳೂರಿನಲ್ಲಿ ದೊರಕಿವೆ.

    ಕನ್ನಡದಲ್ಲಿ ಬಿಡುಗಡೆ ಆಗದ 'ಬ್ಲ್ಯಾಕ್ ಪ್ಯಾಂಥರ್‌'ಗೆ ಹೆಚ್ಚು ಶೋ!

    ಕನ್ನಡದಲ್ಲಿ ಬಿಡುಗಡೆ ಆಗದ 'ಬ್ಲ್ಯಾಕ್ ಪ್ಯಾಂಥರ್‌'ಗೆ ಹೆಚ್ಚು ಶೋ!

    'ಬ್ಲ್ಯಾಕ್ ಪ್ಯಾಂಥರ್' ಇಂಗ್ಲೀಷ್ ಸಿನಿಮಾವು ಭಾರತದ ಕೆಲವು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆ ಆಗಿದೆ. ಆದರೆ ಕನ್ನಡದಲ್ಲಿ ಡಬ್ ಆಗಿಲ್ಲ. ಹಾಗಿದ್ದರೂ ಸಹ ಬೆಂಗಳೂರಿನಲ್ಲಿ ಶನಿವಾರ ಒಟ್ಟು 215 ಶೋಗಳನ್ನು ಪಡೆದುಕೊಂಡಿದೆ. ಇದರಲ್ಲಿ ಹಲವು ಶೋಗಳು ಮೊದಲೇ ಬುಕ್ ಆಗಿರುವುದು ವಿಶೇಷ. ಶುಕ್ರವಾರ ಬಿಡುಗಡೆ ಆದ ಕನ್ನಡದ ಹೊಸ ಸಿನಿಮಾಗಳಿಗೆ ಇದರ ಅರ್ಧದಷ್ಟು ಸಹ ಶೋಗಳು ಬೆಂಗಳೂರಿನಲ್ಲಿ ದೊರಕಿಲ್ಲ!

    ಹೊಸ ಸಿನಿಮಾಗಳಿಗೆ 100 ಶೋ ಸಹ ಸಿಕ್ಕಿಲ್ಲ

    ಹೊಸ ಸಿನಿಮಾಗಳಿಗೆ 100 ಶೋ ಸಹ ಸಿಕ್ಕಿಲ್ಲ

    ಶುಕ್ರವಾರ ಬಿಡುಗಡೆ ಆಗಿರುವ ಹೊಸ ಸಿನಿಮಾ 'ರಾಣಾ'ಕ್ಕೆ 76 ಶೋಗಳಷ್ಟೆ ಬೆಂಗಳೂರಿನಲ್ಲಿ ಸಿಕ್ಕಿದೆ. ಇನ್ನುಳಿದ ಹೊಸ ಸಿನಿಮಾಗಳ ಕತೆಯನ್ನಂತೂ ಕೇಳುವುದೇ ಬೇಡ. ನಾಯಕ ನಟನಾಗಿ ಯಶಸ್ಸು ಗಳಿಸಿರುವ ಡಾರ್ಲಿಂಗ್ ಕೃಷ್ಣರ 'ದಿಲ್ ಪಸಂದ್' ಸಿಕ್ಕಿರುವ ಶೋಗಳ ಸಂಖ್ಯೆ 80 ದಾಟುತ್ತಿಲ್ಲ. ಇನ್ನು ಇದೇ ಶುಕ್ರವಾರ ಬಿಡುಗಡೆ ಆದ ಹೊಸಬರ ಸಿನಿಮಾಗಳ ಕತೆಯನ್ನಂತೂ ಕೇಳುವುದೇ ಬೇಡ ಕೆಲವು ಸಿನಿಮಾಗಳಿಗೆ 10 ಶೋಗಳು ಸಹ ದೊರೆತಿಲ್ಲ. ಆದರೆ ಇಂಗ್ಲೀಷ್ ಸಿನಿಮಾ ಮಾತ್ರ ಬರೋಬ್ಬರಿ ನಾಲ್ಕು ಭಾಷೆಗಳಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ ಆಗಿದೆ. ಕನ್ನಡವನ್ನು ಹೊರತುಪಡಿಸಿ.

    'ಕಂಬ್ಳಿಹುಳ' ಸಿನಿಮಾಕ್ಕೆ ಅನ್ಯಾಯ!

    'ಕಂಬ್ಳಿಹುಳ' ಸಿನಿಮಾಕ್ಕೆ ಅನ್ಯಾಯ!

    'ಕಂಬ್ಳಿಹುಳ' ಹೊಸ ಹುಡುಗರು ಮಾಡಿರುವ ಉತ್ತಮ ಸಿನಿಮಾ ಎಂದು ಎಲ್ಲೆಡೆ ಮಾತುಗಳು ಕೇಳಿ ಬರುತ್ತಿದೆ. ಆದರೆ 'ಬ್ಲ್ಯಾಕ್‌ ಪ್ಯಾಂಥರ್' ಸಿನಿಮಾದ ಅಬ್ಬರಕ್ಕೆ ಒಂದೇ ವಾರಕ್ಕೆ ಅನಿವಾರ್ಯವಾಗಿ ಚಿತ್ರಮಂದಿರದಿಂದ ಹೊರಗೆ ಓಡುವ ಪರಿಸ್ಥಿತಿ ಈ ಸಿನಿಮಾಕ್ಕೆ ನಿರ್ಮಾಣವಾಗಿದೆ. ಎರಡನೇ ವಾರಕ್ಕೆ ಈ ಸಿನಿಮಾಕ್ಕೆ ಉಳಿದಿದ್ದು ಕೇವಲ ಎರಡನೇ ಶೋ! ಹೊಸಬರಿಗೆ ಭಾರಿ ನಿರಾಸೆ. ಇನ್ನು ಉತ್ತಮ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳಾದ 'ಕಾಂತಾರ' ಹಾಗೂ 'ಗಂಧದ ಗುಡಿ' ಸಿನಿಮಾಗಳ ಶೋಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. 'ಕಾಂತಾರ' ಸಿನಿಮಾದ 200 ಕ್ಕೂ ತುಸುವಷ್ಟು ಹೆಚ್ಚು ಶೋಗಳು ಇವೆ. ಇನ್ನು 'ಗಂಧದ ಗುಡಿ' ಸಿನಿಮಾದ ಶೋಗಳ ಸಂಖ್ಯೆಯಲ್ಲಿ ಕಡಿಮೆಯಾಗಿ 138 ಕ್ಕೆ ಇಳಿದಿದೆ.

    ಅತಿ ಹೆಚ್ಚು ಟಿಕೆಟ್ ಬೆಲೆ

    ಅತಿ ಹೆಚ್ಚು ಟಿಕೆಟ್ ಬೆಲೆ

    ಮಾರ್ವೆಲ್ ಸ್ಟುಡಿಯೋಸ್‌ನ 'ಬ್ಲ್ಯಾಕ್ ಪ್ಯಾಂಥರ್' ಸಿನಿಮಾ ಬೆಂಗಳೂರಿನಲ್ಲಿ ಇಂಗ್ಲೀಷ್, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾದ 2ಡಿಯ 8 ಶೋಗಳು, ಇಂಗ್ಲೀಷ್‌ನ 3ಡಿಯ 216 ಶೋಗಳು, ಐಮ್ಯಾಕ್ಸ್ 3ಡಿಯ 30 ಶೋಗಳು, 4ಎಕ್ಸ್‌ 3ಡಿಯ 24 ಶೋಗಳು, ತಮಿಳು 3ಡಿಯ 5 ಶೋಗಳು, ಹಿಂದಿ 3ಡಿಯ 5 ಶೋಗಳು, ತೆಲುಗು 3ಡಿಯ 5 ಶೋಗಳು ಪ್ರದರ್ಶನ ಕಾಣುತ್ತಿದೆ. ಅದರಲ್ಲಿಯೂ ಈ ಸಿನಿಮಾದ 3 ಡಿ, ಎಕ್ಸ್‌ 3ಡಿ ಶೋಗಳ ಟಿಕೆಟ್ ಬೆಲೆಗಳು 800 ರುಪಾಯಿಗೂ ಹೆಚ್ಚಿವೆ. ಒಟ್ಟಾರೆಯಾಗಿ ಇಂಗ್ಲೀಷ್‌ನ ಈ ಸಿನಿಮಾದಿಂದಾಗಿ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳು ಸೊರಗಿವೆ.

    English summary
    English movie Black Panther Wakanda forever movie gets more number of shows in theaters than Kannada movies.
    Saturday, November 12, 2022, 8:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X