twitter
    For Quick Alerts
    ALLOW NOTIFICATIONS  
    For Daily Alerts

    ಊರಲ್ಲಿ ಹಬ್ಬದ ವಾತಾವರಣ: ಪರಿಮಳಾ ಜಗ್ಗೇಶ್‌ಗೆ ಮಡ್ಲಕ್ಕಿ ತುಂಬಿ ಸಂಭ್ರಮಿಸಿದ ಅಂಧ ಪ್ರತಿಭೆಗಳು

    |

    ಸೂರಿಲ್ಲದೆ, ಬದುಕಿನ ದಿಕ್ಕು ಕಾಣದೆ ಕಂಗಾಲಾಗಿದ್ದ ಮಧುಗಿರಿ ತಾಲ್ಲೂಕಿನ ಅಂಧ ಪ್ರತಿಭೆಗಳ ಮುಖದಲ್ಲಿ ಇಣುಕುತ್ತಿದ್ದ ಆನಂದ ಅವರ್ಣನೀಯ. ತಮಗೊಂದು ಮನೆ ಸಿಕ್ಕಿದೆ, ಅದಕ್ಕಾಗಿ ಇಡೀ ಊರು, ರಾಜ್ಯವೇ ಖುಷಿ ಪಡುತ್ತಿದೆ ಎಂಬುದು ಅವರಿಗೆ ತಿಳಿದಿದೆ. ಆ ಸಡಗರವನ್ನು ಅವರು ತಮ್ಮ ಕಣ್ಣುಗಳಿಂದ ನೋಡಲಾರರು. ಆದರೆ ಅವರ ಒಳಗಣ್ಣಿನ ದೃಷ್ಟಿ ಅದನ್ನು ವರ್ಣಾತೀತವಾಗಿ ಕಟ್ಟಿಕೊಟ್ಟಿತ್ತು.

    ಮಧುಗಿರಿಯ ಕಸಬಾ ವ್ಯಾಪ್ತಿಯ ಡಿ..ವಿ ಹಳ್ಳಿ ಗ್ರಾಮದಲ್ಲಿ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡುತ್ತಾ ಜನರು ಕೊಡುವ ಹಣದಿಂದ ಜೀವನ ಸಾಗಿಸುವ ಸಂಕಷ್ಟಮಯ ಬದುಕನ್ನು ಕಾಣುತ್ತಿದ್ದ ರತ್ನಮ್ಮ-ಮಂಜಮ್ಮ ಅಂಧ ಸಹೋದರಿಯರು ಇಂದು 'ಸ ರಿ ಗ ಮ ಪ' ಕಾರ್ಯಕ್ರಮದ ಮೂಲಕ ಮನೆಮಾತು. ಅಂತಹ ಪ್ರತಿಭೆಗಳಿಗೆ ಜಗ್ಗೇಶ್ ಪರಿಮಳಾ ದಂಪತಿ ತಮ್ಮದೇ ಖರ್ಚಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಮನೆಯ ಗೃಹಪ್ರವೇಶ ಗುರುವಾರ ಅದ್ಧೂರಿಯಾಗಿ ನೆರವೇರಿತ್ತು.

    35 ದಿನದಲ್ಲಿ ಮನೆ ಸಿದ್ಧ

    35 ದಿನದಲ್ಲಿ ಮನೆ ಸಿದ್ಧ

    ಈ ಅಂಧ ಸಹೋದರಿಯರಿಗೆ ಮನೆ ಕಟ್ಟಿಸಿಕೊಡುವುದಾಗಿ ಜಗ್ಗೇಶ್ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾ ಜಗ್ಗೇಶ್ ಅಭಿಮಾನಿಗಳ ಸಂಘ ಮತ್ತು ಕೊರಟಗೆರೆ ಫ್ರೆಂಡ್ಸ್ ಗ್ರೂಪ್ ನೆರವಿನಿಂದ ಕೇವಲ 35 ದಿನದಲ್ಲಿ 8 ಲಕ್ಷ ರೂ ವೆಚ್ಚದಲ್ಲಿ ಸೊಗಸಾದ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಈ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಬಹುತೇಕ ಊರಿಗೆ ಊರೇ ಅಲ್ಲಿ ನೆರೆದಿತ್ತು.

    ಪರಿಮಳಾ ಜಗ್ಗೇಶ್ ಸಂತಸ

    ಪರಿಮಳಾ ಜಗ್ಗೇಶ್ ಸಂತಸ

    ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಗ್ಗೇಶ್ ದಂಪತಿಯನ್ನು ನೋಡಲು ಜನರು ಕಿಕ್ಕಿರಿದು ನೆರೆದಿದ್ದರು. ಜಗ್ಗೇಶ್ ಮತ್ತು ಪರಿಮಳಾ ಅವರು ಮಾಡಿದ ಸಹಾಯವನ್ನು ನೆನೆಸಿಕೊಂಡ ಅಂಧ ಸಹೋದರಿಯರು ಪರಿಮಳಾ ಅವರ ಮಡ್ಲಕ್ಕಿ ತುಂಬಿ ಸಂತಸಪಟ್ಟರು. ಇದರ ಫೋಟೊವನ್ನು ಹಂಚಿಕೊಂಡಿರುವ ಪರಿಮಳಾ ಜಗ್ಗೇಶ್, 'ನಮ್ಮವರು ಎಂದು ಮಡ್ಲಕ್ಕಿ ತುಂಬಿ ಕ್ಷಣ... ಮರೆಯಲಾಗದ ನೆನಪು' ಎಂದು ಸಂತೋಷ ಹಂಚಿಕೊಂಡಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು

    ಗೃಹಪ್ರವೇಶಕ್ಕೆ ಆಗಮಿಸಿದ್ದ ಜಗ್ಗೇಶ್ ದಂಪತಿಯನ್ನು ರತ್ನಮ್ಮ-ಮಂಜಮ್ಮ ಸಹೋದರಿಯರು ಹಾಡಿನ ಮೂಲಕವೇ ಸ್ವಾಗತಿಸಿ ಅಭಿನಂದಿಸಿದರು. 'ಈ ಪ್ರತಿಭೆಗಳ ಹಾಡಿಗೆ ನಾನು ಮನಸೋತಿದ್ದೇನೆ. ಅವರ ಕಂಠದಲ್ಲಿರುವ ಸರಸ್ವತಿಯನ್ನು ಹುಡುಕಿಕೊಂಡು ಮಧುಗಿರಿಗೆ ಬಂದಿದ್ದೇವೆ. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾರೆ' ಎಂದು ಜಗ್ಗೇಶ್ ಕೊಂಡಾಡಿದರು.

    ರೈಲು ಪ್ರಯಾಣ ಪಾಸ್

    ರೈಲು ಪ್ರಯಾಣ ಪಾಸ್

    ಈ ಅಂಧ ಕಲಾವಿದೆಯರ, ಜೀರ್ಣ ಸ್ಥಿತಿಯಲ್ಲಿದ್ದ ಮನೆಯನ್ನು ಕೆಡವಿ 9 ಚದರ ವಿಸ್ತೀರ್ಣದಲ್ಲಿ ಅಡುಗೆ ಮನೆ, ಒಂದು ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆಯುಳ್ಳ ಸುಸಜ್ಜಿತ ಮನೆಯನ್ನು ನಿರ್ಮಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಕಲಾವಿದೆಯರಿಗೆ ಜೀವನಪೂರ್ತಿ ಉಚಿತ ರೈಲು ಪ್ರಯಾಣದ ಪಾಸ್ ವಿತರಣೆ ಮಾಡಲಾಯಿತು.

    ಮುಖಂಡರು ಭಾಗಿ

    ಮುಖಂಡರು ಭಾಗಿ

    ಗೃಹ ಪ್ರವೇಶದಲ್ಲಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ರಾಘವೇಂದ್ರ ಮಠದ ರಾಘವೇಂದ್ರ ಸ್ವಾಮೀಜಿ, ಊರಿನ ಮುಖಂಡರು, ಸರ್ಕಾರಿ ಅಧಿಕಾರಿಗಳು ಮುಂತಾದವರು ಹಾಜರಿದ್ದರು. ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    English summary
    Jaggesh and Parimala Jaggesh attended the house warming ceremony of blind singer sisters from Madhugiri.
    Saturday, March 14, 2020, 18:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X