ಸುದೀಪ್ ನಿಂದಿಸಿದ ಅಹೋರಾತ್ರನ ವಿರುದ್ಧ 'ಮೆಜೆಸ್ಟಿಕ್' ನಿರ್ಮಾಪಕ ಭಾಮಾ ಹರೀಶ್ ಗರಂ

ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ತಿಳಿದಿರುವ ಸಂಗತಿ. ರಮ್ಮಿ ಜಾಹೀರಾತಿನಲ್ಲಿ ಸುದೀಪ್ ನಟಿಸುವುದನ್ನು ಬಿಟ್ಟಿದ್ದರೂ ಕಿಚ್ಚನ ಮೇಲೆ ವೈಯಕ್ತಿಕ ದಾಳಿ ಮಾಡುವುದನ್ನು ಮಾತ್ರ ಅಹೋರಾತ್ರ ನಿಲ್ಲಿಸಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಸುದೀಪ್ ಅಭಿಮಾನಿಗಳು ಅಹೋರಾತ್ರನ ಮನೆಗೆ ನುಗ್ಗಿದರು. ಈ ವೇಳೆ ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳವೂ ನಡೆದುಹೋಯಿತು.

ಈ ಪ್ರಕರಣ ಈಗ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ದೂರು ಮತ್ತು ಪ್ರತಿದೂರು ದಾಖಲಾಗಿದೆ. ಇದೀಗ, ಈ ಬೆಳವಣಿಗೆ ಬಗ್ಗೆ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಭಾ.ಮಾ ಹರೀಶ್ ಪ್ರತಿಕ್ರಿಯಿಸಿದ್ದಾರೆ. ಫೇಸ್‌ಬುಕ್‌ ಲೈವ್‌ ಬಂದಿದ್ದ ಭಾ.ಮಾ ಹರೀಶ್ ಅಹೋರಾತ್ರನ ವಿರುದ್ಧ ಗರಂ ಆಗಿದ್ದಾರೆ.

ಸುದೀಪ್ ಬಗ್ಗೆ ತೇಜೋವಧೆ ಮಾಡುವುದು ಸರಿಯಿಲ್ಲ

ಸುದೀಪ್ ಬಗ್ಗೆ ತೇಜೋವಧೆ ಮಾಡುವುದು ಸರಿಯಿಲ್ಲ

''25 ವರ್ಷ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ವ್ಯಕ್ತಿ ಬಗ್ಗೆ ತೇಜೋವಧೆ ಮಾಡುವುದು ಸರಿಯಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುವುದು ಖಂಡನೀಯ. ಒಂದೂವರೆ ವರ್ಷದಿಂದ ಸುದೀಪ್ ಅವರನ್ನು ಟಾರ್ಗೆಟ್ ಮಾಡ್ತಿರೋದು ಏಕೆ? ನಿಮಗೂ ಕುಟುಂಬ ಇದೆ, ಮಕ್ಕಳಿದ್ದಾರೆ. ಇನ್ನೊಬ್ಬರನ್ನು ತೇಜೋವಧೆ ಮಾಡುವುದು ಬಿಟ್ಟುಬಿಡಿ'' ಎಂದು ಭಾಮಾ ಹರೀಶ್ ಎಚ್ಚರಿಕೆ ನೀಡಿದ್ದಾರೆ.

ನಾವು ಪರಿಸರ ಪ್ರೇಮಿಗಳೇ....

ನಾವು ಪರಿಸರ ಪ್ರೇಮಿಗಳೇ....

''ನಿಮ್ಮ ಪರಿಸರ ಪ್ರೇಮದ ಬಗ್ಗೆ ನಮಗೆ ಗೌರವವಿದೆ. ನಾವು ಪರಿಸರ ಪ್ರೇಮಿಗಳೇ. ಸುದೀಪ್ ಅವರು ಸಹ ಪರಿಸರ ಪ್ರೇಮಿಗಳೇ. ಅವರ ಬಗ್ಗೆ ಮಾತಾಡಿ ನೀವು ಹೀರೋ ಆಗಲ್ಲ. ಒಳ್ಳೆಯ ಸಂದೇಶ ಕೊಡೋ ಮೂಲಕ ಗುರುತಿಸಿಕೊಂಡಿದ್ದೀರಾ. ಸುದೀಪ್ ಅವರ ಬಗ್ಗೆ ಈ ರೀತಿ ಮಾತಾಡಿ ಕೆಟ್ಟವರಾಗಬೇಡಿ ಅಹೋರಾತ್ರ ಅವರೇ'' ಎಂದು ಕಿವಿ ಮಾತು ಹೇಳಿದ್ದಾರೆ.

ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ

ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ

''ಸಾರ್ವಜನಿಕವಾಗಿ ಸುದೀಪ್ ಅವರನ್ನು ಟಾರ್ಗೆಟ್ ಮಾಡಿ ನೀವು ಹೀರೋ ಆಗ್ತೀರಾ ಅಂತಿದ್ರೆ ಅದು ಸುಳ್ಳು. ನಿಮ್ಮನ್ನು ಯಾರೂ ನಂಬಲ್ಲ. ಆ ದೇವರು ಒಳ್ಳೆಯ ಬುದ್ದಿ ಕೊಡಲಿ, ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಒಳ್ಳೆಯ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರ್ತೀವಿ'' ಎಂದು ಭಾಮಾ ಹರೀಶ್ ಹೇಳಿದ್ದಾರೆ.

Recommended Video

A huge wave of fans had arrived to see Puneeth Rajkumar in Channapatna
ಮೊದಲು ನಿಮ್ಮ ಸಂಸ್ಕೃತಿ ಅರಿಯಿರಿ

ಮೊದಲು ನಿಮ್ಮ ಸಂಸ್ಕೃತಿ ಅರಿಯಿರಿ

''ಇತ್ತೀಚಿನ ನಿಮ್ಮ ವಿಡಿಯೋಗಳನ್ನು ನೋಡಿ ನಮಗೆ ಅಸಹ್ಯವಾಗುತ್ತಿದೆ. ಇನ್ನೊಬ್ಬರ ಸಂಸ್ಕೃತಿ ಬಗ್ಗೆ ಮಾತಾಡುವುದಕ್ಕೂ ಮುಂಚೆ ನಿಮಗೆ ನೀವು ಹೇಗಿದ್ದೀರಾ ಅಂತ ಯೋಚಿಸಬೇಕು. ಮೊದಲು ನಮ್ಮ ಸಂಸ್ಕೃತಿ ಬದಲಾಯಿಸಿಕೊಳ್ಳಿ, ಇಂತಹ ಕೆಟ್ಟ ಆಲೋಚನೆ, ಇನ್ನೊಬ್ಬರ ಬಗ್ಗೆ ತೇಜೋವಧೆ ಮಾಡುವುದನ್ನು ಬಿಟ್ಟು ಮುಂದೆ ನಡೆಯಿರಿ'' ಎಂದು ಮೆಜೆಸ್ಟಿಕ್ ಚಿತ್ರ ನಿರ್ಮಿಸಿದ್ದ ಭಾಮಾ ಹರೀಶ್ ತಿಳಿಸಿದ್ದಾರೆ.

More from Filmibeat

English summary
Mejestic movie producer B M Harish Fires on Ahoratra for abusing Actor Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X