ದಕ್ಷ ಅಧಿಕಾರಿ, ನಟ ಕೆ.ಶಿವರಾಮ್ ಇನ್ನು ನೆನಪು ಮಾತ್ರ ; ಅಂತಿಮ ದರ್ಶನ ಎಲ್ಲಿ..?
ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿಯನ್ನೊಂದಿದ್ದ, ಜನಾನುರಾಗಿ ಅಧಿಕಾರಿಯಾಗಿ ಸೇವೆಯನ್ನ ಮಾಡಿದ್ದ, ದೇಶದಲ್ಲಿಯೇ ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನ ಕನ್ನಡದಲ್ಲಿ ಬರೆದು, ದಾಖಲೆ ಬರೆದ ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಂ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 1 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕೆ.ಶಿವರಾಂ ಅವರ ಆಪ್ತರು, ಅಭಿಮಾನಿಗಳು, ಬೆಂಬಲಿಗರು ರವೀಂದ್ರ ಕಲಾಕ್ಷೇತ್ರದಲ್ಲಿ ಬಂದು ಅಂತಿಮ ನಮನ ಸಲ್ಲಿಸಬಹುದು ಎಂದು ಅಳಿಯ ಪ್ರದೀಪ್ ಮಾಹಿತಿಯನ್ನ ನೀಡಿದ್ದಾರೆ.
ಇನ್ನೂ ಶಿವರಾಮ್ ಅವರ ಪತ್ನಿ ಮಲೆ ಮಹದೇಶ್ವರ ದೇವಾಲಯಕ್ಕೆ ತೆರಳಿದ್ದಾರೆ. ಅವರು ಮರಳಿದ ಬಳಿಕ ಶಿವರಾಮ್ ಅವರ ಅಂತಿಮ ಸಂಸ್ಕಾರ ಎಲ್ಲಾಗಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ ಪ್ರದೀಪ್.

ನಿನ್ನೆಯಷ್ಟೇ ಶಿವರಾಮ್ ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಳಿಯ ಪ್ರದೀಪ್ ನಿನ್ನೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಅವರ ಕಂಡೀಷನ್ ಕ್ರಿಟಿಕಲ್ ಆಗಿದೆ ಎಂದಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಶಿವರಾಮ್ ಅವರನ್ನು ಫೆಬ್ರವರಿ 3 ರಂದು ರಕ್ತದೊತ್ತಡ ವ್ಯತ್ಯಯವಾದ ಕಾರಣ ಅವರನ್ನು ಎಚ್ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ಇಂದು ಮತ್ತೆ ಅವರಿಗೆ ಹೃದಯಾಘಾತವಾಗಿದ್ದು ಅವರು ನಿಧನ ಹೊಂದಿದ್ದಾರೆ' ಎಂದಿದ್ದಾರೆ ಪ್ರದೀಪ್.

ಕೆ.ಶಿವರಾಂ ಅವರ ಹಿನ್ನೆಲೆ..!
ರಾಮನಗರ ಜಿಲ್ಲೆಯ ಉರಗಳ್ಳಿಯಲ್ಲಿ 1953ರ ಏಪ್ರಿಲ್ 6ರಂದು ಜನಿಸಿದ್ದ, ಕೆ ಶಿವರಾಮ್ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿಯೇ ಮುಗಿಸಿದ್ದರು. ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದರು. ಆ ನಂತರ ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ ಶಿವರಾಮ್ ಅವರು, ಆ ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದರು. 1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಈಗ ಇತಿಹಾಸ

ಐಎಎಸ್ ವೃತ್ತಿ ಜೀವನದಲ್ಲಿ ವಿಜಯಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಕೆ.ಶಿವರಾಂ ಸೇವೆಯನ್ನ ಸಲ್ಲಿಸಿದ್ದರು. ಇನ್ನೂ ಸಮೂಹ ಶಿಕ್ಷಣ ಆಯುಕ್ತರಾಗಿ, ಆಹಾರ ಆಯುಕ್ತರಾಗಿ ಮತ್ತು MSIL ನ MD ಆಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ನಿವೃತ್ತಿಯ ನಂತರ ರಾಜಕೀಯದತ್ತ ಮುಖ ಮಾಡಿದರು. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಆ ನಂತರ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನ ಮಾನ ಸಿಗದ ಹಿನ್ನೆಲೆ ಕೆ.ಶಿವರಾಂ 2016 ರಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಸೇರಿದ್ದರು


Click it and Unblock the Notifications











