»   » ಇವರು ಸ್ಯಾಂಡಲ್ ವುಡ್ ಅಂಗಳದ ಹಾಟ್ 'ಬಿಕಿನಿ' ಬ್ಯೂಟೀಸ್

ಇವರು ಸ್ಯಾಂಡಲ್ ವುಡ್ ಅಂಗಳದ ಹಾಟ್ 'ಬಿಕಿನಿ' ಬ್ಯೂಟೀಸ್

Posted By:
Subscribe to Filmibeat Kannada

'ಬಿಕಿನಿ' ಎನ್ನುವ ಪದ ಹೇಳಿದರೆ ಸಾಕು ಎಲ್ಲರ ಕಿವಿ ನೆಟ್ಟಗಾಗಿ ಬಿಡುತ್ತದೆ. ಬಿಕಿನಿ ಪರಿಚಿತವಾಗಿ ಇಷ್ಟು ವರ್ಷವಾದರೂ ಸಿನಿಮಾರಂಗದಲ್ಲಿ ಈಗಲೂ ಅದಕ್ಕೆ ಪ್ರಾಮುಖ್ಯತೆ ಇದೆ. ಸಿನಿಮಾ ನಟಿಯರು ಬಿಕಿನಿ ಧರಿಸುತ್ತಾರೆ ಅಂದರೆ ಈಗಲೂ ದೊಡ್ಡ ಸುದ್ದಿಯಾಗುತ್ತದೆ.

ಒಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ ಮೊದಲು ಬಿಕಿನಿ ಬಳಕೆ ಆಗಿದ್ದು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಂತೆ. ಬಾಲಿವುಡ್ ಗಿಂತ ಮೊದಲೇ ಸೌತ್ ಸಿನಿಮಾದ ನಟಿಯರು ಬಿಕಿನಿ ಹಾಕಿದ ಉದಾಹರಣೆ ಇದೆ ಅಂತ ಹೇಳಲಾಗುತ್ತದೆ. ಇನ್ನೂ ಕನ್ನಡದಲ್ಲಿ ಮೊದಲು ಬಿಕಿನಿ ತೊಡುವ ಧೈರ್ಯ ಮಾಡಿದ್ದು ನಟಿ ಹರಿಣಿ. ಅದು ಕೂಡ ಸುಮಾರು 50-60 ದಶಕದಲ್ಲಿ.

'ವಿಶ್ವ ಬಿಕಿನಿ ದಿನ' ಆಗಿರುವ ಇಂದು(ಜುಲೈ 5) ಸ್ಯಾಂಡಲ್ ವುಡ್ ನ ಬಿಕಿನಿ ಬೆಡಗಿಯರ ಬಗ್ಗೆ ಒಂದು ಝಲಕ್ ಮುಂದಿದೆ ಓದಿ...

ಐಂದ್ರಿತಾ ರೇ

2012ರ 'C C L' ಕ್ಯಾಲೆಂಡರ್ ಫೋಟೋಶೂಟ್ ಗಾಗಿ ಕನ್ನಡದ ಕೆಲ ನಟಿಯರು ಬಿಕಿನಿ ಧರಿಸಿದ್ದರು. ಐಂದ್ರಿತಾ ರೇ ಕೂಡ ಆ ಫೋಟೋಶೂಟ್ ನಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ರಾಗಿಣಿ ದ್ವಿವೇದಿ

ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ ಚಿತ್ರರಂಗದ ಆರಂಭದ ದಿನದಲ್ಲೇ ಬಿಕಿನಿ ತೊಟ್ಟಿದ್ದರು. ಒಂದು ಮ್ಯಾಗಜಿನ್ ಗಾಗಿ ರಾಗಿಣಿ ಬಿಕಿನಿ ಫೋಟೋ ಶೂಟ್ ಮಾಡಿಸಿದ್ದರು.

ಪೂಜಾ ಗಾಂಧಿ

ಮಳೆ ಹುಡುಗಿ ಪೂಜಾ ಗಾಂಧಿ ನಟ ಜಗ್ಗೇಶ್ ಜೊತೆ ನಟಿಸಿದ ಸಿನಿಮಾವೊಂದರಲ್ಲಿ ಬಿಕಿನಿ ಹಾಕಿಕೊಂಡಿದ್ದರು. ಇದು ಆ ದಿನದಲ್ಲಿ ದೊಡ್ಡ ಕಾಂಟ್ರವರ್ಸಿ ಸೃಷ್ಟಿಸಿತ್ತು.

ಪ್ರಿಯಾ ಮಣಿ

ಸದ್ಯ ಹೆಚ್ಚಾಗಿ ಕನ್ನಡ ಸಿನಿಮಾಗಳನ್ನು ಮಾಡುತ್ತಿರುವ ನಟಿ ಪ್ರಿಯಾಮಣಿ ತೆಲುಗು ಸಿನಿಮಾವೊಂದರಲ್ಲಿ ಬಿಕಿನಿ ಹಾಕಿ ಪೋಸ್ ಕೊಟ್ಟಿದ್ದರು.

ನಮಿತಾ

ತನ್ನ ಮೈಮಾಟದಿಂದ ಸಿನಿರಂಗದಲ್ಲಿ ಹವಾ ಎಬ್ಬಿಸಿದ್ದ ನಟಿ ನಮಿತಾ ದರ್ಶನ್ ಅಭಿನಯದ 'ಇಂದ್ರ' ಸಿನಿಮಾದಲ್ಲಿ ಬಿಕಿನಿ ಹಾಕಿ ಕೇಂದ್ರ ಬಿಂದು ಆಗಿದ್ದರು.

ನಿಧಿ ಸುಬ್ಬಯ್ಯ

'CCL' ಕ್ಯಾಲೆಂಡರ್ ಗಾಗಿ ನಟಿ ನಿಧಿ ಸುಬ್ಬಯ್ಯ ಕೂಡ ಬಿಕಿನಿ ವೇಷದಲ್ಲಿ ಎಂಟ್ರಿ ಕೊಟ್ಟಿದ್ದರು.

ರಕ್ಷಿತಾ

ಕ್ರೇಜಿ ಕ್ವೀನ್ ರಕ್ಷಿತಾ ಕೂಡ ಒಂದು ಟೈಂ ನಲ್ಲಿ ಸಿನಿಮಾವೊಂದರಲ್ಲಿ ಬಿಕಿನಿ ಧರಿಸಿದ್ದರು.

ರಿಶಿಕಾ ಸಿಂಗ್

'ಕಂಠೀರವ' ಎಂಬ ಸಿನಿಮಾದಲ್ಲಿ ನಟಿ ರಿಶಿಕಾ ಸಿಂಗ್ ಕೂಡ ಬಿಕಿನಿ ತೊಟ್ಟಿದ್ದರು.

English summary
Check out pictures : Bold Kannada Actresses In Bikini
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada